ಜಪಾನೀಯರೇಕೆ ದೀರ್ಘಾಯುಷಿಗಳು?

ವಿಶ್ವದಲ್ಲೇ ಜಪಾನ್ ದೀರ್ಘಾಯುಷಿಗಳ ದೇಶ. ಸರಾಸರಿಯಂತೆ ಅಲ್ಲಿನ ಮಹಿಳೆಯರು 87 ವರ್ಷ, ಪುರುಷರು 81 ವರ್ಷ ಬದುಕುತ್ತಾರೆ. ಅಚ್ಚರಿ ಅಂದ್ರೆ ಜಗತ್ತಿನಲ್ಲಿ ಅವರಷ್ಟು ಧೂಮಪಾನಿಗಳು ಬೇರೆಲ್ಲೂ ಕಂಡುಬರುವುದಿಲ್ಲ...
ದೀರ್ಘಾಯುಷ್ಯ ಜಪಾನ್ ಪ್ರಜೆಗಳು (ಸಂಗ್ರಹ ಚಿತ್ರ)
ದೀರ್ಘಾಯುಷ್ಯ ಜಪಾನ್ ಪ್ರಜೆಗಳು (ಸಂಗ್ರಹ ಚಿತ್ರ)

ವಿಶ್ವದಲ್ಲೇ ಜಪಾನ್ ದೀರ್ಘಾಯುಷಿಗಳ ದೇಶ. ಸರಾಸರಿಯಂತೆ ಅಲ್ಲಿನ ಮಹಿಳೆಯರು 87 ವರ್ಷ, ಪುರುಷರು 81 ವರ್ಷ ಬದುಕುತ್ತಾರೆ. ಅಚ್ಚರಿ ಅಂದ್ರೆ ಜಗತ್ತಿನಲ್ಲಿ ಅವರಷ್ಟು ಧೂಮಪಾನಿಗಳು  ಬೇರೆಲ್ಲೂ ಕಂಡುಬರುವುದಿಲ್ಲ.

ಶೇ.36 ಮಂದಿ ಅಲ್ಲಿ ತಂಬಾಕು ಬಳಸುತ್ತಾರೆ. ಆದರೂ ಅವರು ನೂರಾರು ವರುಷ ಬದುಕಲು ಕಾರಣ ಏನು ಎಂಬುದನ್ನು ತಿಳಿಯಲು `ಲೈಫ್ ಹ್ಯಾಕ್' ಎಂಬ ವೆಬ್ ಸೈಟ್ ಸರ್ವೆಗಿಳಿಯಿತು. ಅಲ್ಲಿ  ತಿಳಿದುಬಂದಿದ್ದು 5 ಗುಟ್ಟುಗಳು. ಈ 5 ಗುಟ್ಟುಗಳನ್ನು ನಾವೂ ಅಳವಡಿಸಿಕೊಂಡರೆ ಜಪಾನೀಯರಂತೆ ಶತಾಯುಷಿಗಳಾಗಬಹುದು. ನಿತ್ಯ ವ್ಯಾಯಾಮ ಅಲ್ಲಿ ಶಾಲಾ ಮಕ್ಕಳು ಸ್ಕೂಲ್ ವ್ಯಾನ್  ಅನ್ನು ಬಳಸುವುದಿಲ್ಲ. ಶೇ.98 ಮಕ್ಕಳು ನಡಿಗೆ, ಸೈಕಲ್ ಮೂಲಕವೇ ಶಾಲೆಯನ್ನು ಸೇರುವುದು. ನಿತ್ಯ ವ್ಯಾಯಾಮ ಅವರ ಸಂಸ್ಕೃತಿಯೇ ಆಗಿದೆ. ಶೇ. 97 ಜಪಾನಿಯರು ನಿತ್ಯ ಸರಾಸರಿ 37  ನಿಮಿಷ ವ್ಯಾಯಾಮದಲ್ಲಿ ತೊಡಗುತ್ತಾರಂತೆ.

ಜೂಡೋ, ಕುಸ್ತಿಪ್ರಿಯರಾಗಿರುವ ಬಹುತೇಕ ಜಪಾನೀಯರು ಆ  ಕ್ರೀಡೆಗಳಲ್ಲಿ ಸಾಧನೆ ಮಾಡಲು ಹಂಬಲಿಸುತ್ತಾರಂತೆ. ಮೀನಿನ ಭಕ್ತರು ಮೀನಿನನಲ್ಲಿ ಎಲ್ಲ ರೀತಿಯ ವಿಟಮಿನ್‍ಗಳಿರುವುದು ಗೊತ್ತೇ ಇದೆ. ಜಪಾನೀಯರು ತಮ್ಮ ನಿತ್ಯ ಆಹಾರದಲ್ಲಿ ಮೀನನ್ನು ತಪ್ಪಿಸುವುದೇ ಇಲ್ಲ. ಅಲ್ಲದೆ ಇವರು ಕೆಂಪು ಮಾಂಸವನ್ನು ಹೆಚ್ಚಾಗಿ ಸೇವಿಸುತ್ತಾರೆ. ಕೊಬ್ಬು ಕಡಿಮೆ ಇರುವ ಮಾಂಸಾಹಾರ  ಅಚ್ಚುಮೆಚ್ಚು. ಇಷ್ಟ ಎಂದು ಯಾವುದನ್ನೂ ಅತಿಯಾಗಿ ಸೇವಿಸುವುದಿಲ್ಲ. ರೆಡ್‍ವೈನ್ (ದ್ರಾಕ್ಷಾರಸ) ಅನ್ನು ನಿತ್ಯವೂ ಸ್ವಲ್ಪವೇ ಸ್ವಲ್ಪ ಸೇವಿಸುತ್ತಾರೆ. ಕ್ಯಾಲೊರಿ ಕಡಿಮೆ ಮೀನನ್ನು ನಿತ್ಯ ಸೇವಿಸುವ  ಜಪಾನಿಗರಿಗೆ ಅದು ಡಯೆಟ್‍ನ ಭಾಗವೂ ಹೌದು. ಡೈರಿ ಉತ್ಪನ್ನಗಳನ್ನು ಆದಷ್ಟು ಕಡಿಮೆ ಬಳಸುತ್ತಾರೆ. ಹಸಿರು ತರಕಾರಿ, ಅಕ್ಕಿಯಂಥ ಕಡಿಮೆ ಕ್ಯಾಲೊರಿಯ ಆಹಾರಗಳನ್ನೇ ಬಳಸುವುದರಿಂದ  ಇವರ ಹೃದಯದ ಆರೋಗ್ಯ ಬೇರೆಲ್ಲ ದೇಶದವರಿಗಿಂತ ಉತ್ತಮವಾಗಿರುತ್ತದಂತೆ.

ಮಾನಸಿಕವಾಗಿ ಇವರು ಸದಾ ಅರಳಿಕೊಂಡಿರಲು ಹರ್ಬಲ್ ಟೀ ಸೇವನೆಯೇ ಕಾರಣ. ಲೈಫ್  ಇನ್ಷೂರೆನ್ಸ್ ಇದು ಕೂಡ ನಂಬಲೇಬೇಕಾದ ಸತ್ಯ. ಜಪಾನೀಯರು ಮಾನಸಿಕವಾಗಿ ಹೆಲ್ತ್  ಇನ್ಷೂರೆನ್ಸ್‍ಗೆ ಅಡಿಕ್ಟ್ ಆಗಿದ್ದಾರಂತೆ. ಜಪಾನಿನ ಪ್ರತಿ ಪ್ರಜೆಗೂ ಹೆಲ್ತ್ ಇನ್ಷೂರೆನ್ಸ್ ಅನ್ವಯವಾಗುತ್ತದೆ. ನಿಗದಿತ ವರ್ಷದ ವರೆಗೆ (ಆಯಾ ಹೆಲ್ತ್‍ಕೇರ್‍ಗಳು ನಿಗದಿಪಡಿಸಿದ)  ಆರೋಗ್ಯವನ್ನು  ಕಾಪಾಡಿಕೊಂಡಿದ್ದರೆ ಮಾತ್ರ ಹೆಲ್ತ್ ಇನ್ಷೂರೆನ್ಸ್‍ನ ಹಣ ಕೈಸೇರುತ್ತದೆ. ಹೀಗಾಗಿ ಯಾರೂ ಆರೋಗ್ಯ ಕೆಡಿಸಿಕೊಳ್ಳುವ ರಿಸ್ಕ್ ಗೆ ಹೋಗೋದಿಲ್ಲ. ರಿಟೈರ್ ಆದ್ಮೇಲೂ ಆ್ಯಕ್ಟಿವ್ ಅಲ್ಲಿ 60ನೇ  ವರ್ಷಕ್ಕೆ ರಿಟೈರ್ ಆಗುತ್ತಾರೆ. ಕೆಲಸದಿಂದ ನಿವೃತ್ತಿ ಆದಮೇಲೆ ನಮ್ಮಂತೆ ಇಲ್ಲಿನವರಂತೆ ಮನೆಯ ಬೆಂಚನ್ನು ಬಿಸಿಮಾಡೋದಿಲ್ಲ. ಹೆಚ್ಚು ತಿರುಗಾಡುತ್ತಾರಂತೆ. ಓದು, ಫಿಶಿಂಗ್, ಸಣ್ಣಪುಟ್ಟ  ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಸಾಹಸಕ್ಕೆ ಇಳಿಯುತ್ತಾರೆ. ದುಃ ಖದ ಸಿನಿಮಾಗಳನ್ನು ನೋಡುವುದಿಲ್ಲ. ಸಣ್ಣಪುಟ್ಟ ಖುಷಿ ಕೊಡುವ ಪ್ರತಿ ಸಂಗತಿಗಳಲ್ಲೂ ಪಾಲ್ಗೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com