82 ವರ್ಷದ ಕೇರಳ ವ್ಯಕ್ತಿ ಯಕೃತ್ತು ನೀಡಿದ ಅತಿ ಹಿರಿಯ ದಾನಿ

ಯಕೃತ್ತು ದಾನ ಮಾಡಿರುವ 82 ವರ್ಷದ ಕೇರಳ ವ್ಯಕ್ತಿ ದಕ್ಷಿಣ ಭಾರತದಲ್ಲೇ ಅತಿ ಹಿರಿಯ ದಾನಿ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತಿರುವನಂತಪುರಂ: ಯಕೃತ್ತು ದಾನ ಮಾಡಿರುವ 82 ವರ್ಷದ ಕೇರಳ ವ್ಯಕ್ತಿ ದಕ್ಷಿಣ ಭಾರತದಲ್ಲೇ ಅತಿ ಹಿರಿಯ ದಾನಿ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ. 
ಕಳೆದ ತಿಂಗಳು ಅಪಘಾತದಿಂದ ಅಸ್ವಸ್ಥಗೊಂಡಿದ್ದ ದಾನಿ ವಿಕ್ರಮನ್ ಅವರ ಮಿದುಳು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದರು. ಈ ಯಕೃತ್ತು ಮರುಜೋಡಣೆ ಕೇರಳ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ನಡೆದಿದೆ. 
ಈ ಯಕೃತ್ತು ಪಡೆದಿರುವ ವ್ಯಕ್ತಿ ಕೊಲ್ಲಮ್ ಮೂಲದ 44 ವರ್ಷದ ವ್ಯಕ್ತಿ ಈಗ ಗುಣಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. 
ವಿಕ್ರಮನ್ ಅವರಿಗೆ ಬೇರೆ ಯಾವುದೇ ರೋಗಗಳು ಇಲ್ಲದೆ ಇನ್ನುಳಿದಂತೆ ಆರೋಗ್ಯವಾಗಿದ್ದರು ಎಂದು ಕಿಮ್ಸ್ ಸಿಎಂಡಿ ಎಂ ಐ ಸಹದುಲ್ಲ ತಿಳಿಸಿದ್ದಾರೆ. 
"ಅವರ ಕುಟುಂಬದ ಈ ಪ್ರಶಂಸಾತ್ಮಕ ನಡೆ, ಕಳೆದ ಹಲವು ವರ್ಷಗಳಿಂದ ಯಕೃತ್ತು ಸಂಬಂಧಿ ರೋಗದಿಂದ ತೀವ್ರವಾಗಿ ಅಸ್ವಸ್ಥರಾಗಿದ್ದ ವ್ಯಕ್ತಿ ಗುಣಮುಖರಾಗುವುದಕ್ಕೆ ಸಹಕರಿಸಲಿದೆ" ಎಂದು ಸಹದುಲ್ಲ ತಿಳಿಸಿದ್ದಾರೆ. 
ವಿಕ್ರಮನ್ ಕುಟುಂಬ ಯಕೃತ್ತು ದಾನ ನೀಡಲು ಒಪ್ಪಿಗೆ ನೀಡಿದ ತಕ್ಷಣ ಸರ್ಕಾರದ ಇಲಾಖೆ ಇದಕ್ಕೆ ಸಂಬಂಧಿಸಿದಂತೆ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ 12 ಘಂಟೆಗಳ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ಸಹಕರಿಸಿತು ಎಂದು ಕೂಡ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com