• Tag results for ದಾನ

ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರದ ಕೊರತೆ ಇಲ್ಲ: ಡಿ.ವಿ. ಸದಾನಂದಗೌಡ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು ಹೇಳಿದ್ದಾರೆ.

published on : 6th July 2020

65ಕ್ಕಿಂತ ಹಿರಿಯರಿಗೆ ಅಂಚೆ ಮತದಾನ ನಿರ್ಧಾರ ಹಿಂಪಡೆಯುವಂತೆ ಚುನಾವಣಾ ಆಯೋಗಕ್ಕೆ ಟಿಎಂಸಿ ಆಗ್ರಹ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಚುನಾವಣೆ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, 65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದಕ್ಕೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ತೀವ್ರ ವಿರೋಧ ವ್ಯಕ್ತಪಡಿಸಿದ್ದು, 65ಕ್ಕಿಂತ ಹಿರಿಯರಿಗೆ ಅಂಚೆ ಮತದಾನ ನಿರ್ಧಾರ ಹಿಂಪಡೆಯುವಂತೆ ಸೋಮವಾರ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.

published on : 6th July 2020

ಅಲಿಪುರ್‍ದೌರ್ ಟ್ರಾನ್ಸ್ಮಿಷನ್ ಕಂಪನಿ ಅದಾನಿ ಕಂಪನಿಗೆ 1,286 ಕೋಟಿ ರೂ. ಗಳಿಗೆ ಮಾರಾಟ!

ಅಲಿಪುರ್ದೌರ್ ಟ್ರಾನ್ಸ್ಮಿಷನ್ ಲಿಮಿಟೆಡ್ (ಎಟಿಎಲ್) ನ್ನು ಕಲ್ಪತರು ಪವರ್ ಟ್ರಾನ್ಸ್ಮಿಷನ್ ಲಿಮಿಟೆಡ್ ಅದಾನಿಗೆ 1,286 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ಹೇಳಿದೆ. 

published on : 6th July 2020

ಕ್ಷೇತ್ರಗಳಿಗೆ ನೀಡುವ ಅನುದಾನದಲ್ಲಿ ತಾರತಮ್ಯ: ಕಟೀಲ್'ಗೆ ಬಿಜೆಪಿ ಶಾಸಕರ ದೂರು

ತಮ್ಮ ಕ್ಷೇತ್ರಗಳಿಗೆ ಅನುದಾನದ ಕೊರತೆ ಎದುರಾಗಿದ್ದು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಆಡಳಿತಾರೂಢ ಬಿಜೆಪಿಯ ಶಾಸಕರ ನಿಯೋದ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ, ದೂರು ನೀಡಿದ್ದಾರೆ. 

published on : 20th June 2020

ಅಯ್ಯಪ್ಪನುಂ-ಕೋಶಿಯುಂ ಮಲಯಾಳಂ ಸಿನಿಮಾ ನಿರ್ದೇಶಕ ಸಚ್ಚಿ ಇನ್ನಿಲ್ಲ 

ಮಲಯಾಳಂ ಚಿತ್ರರಂಗದ  ಪ್ರತಿಭಾವಂತ ನಿರ್ದೇಶಕ ಕೆ. ಆರ್.ಸಚ್ಚಿದಾನಂದ್ ಅಲಿಯಾಸ್ ಸಚ್ಚಿ ಜೂನ್ 18ರಂದು ನಿಧನರಾಗಿದ್ದಾರೆ. ಇತ್ತೀಚೆಗೆ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚ್ಚಿ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ, ಮತ್ತೊಮ್ಮೆ ತೀವ್ರ ಹೃದಯ ಸ್ತಂಬನವಾಗಿ ಮೃತಪಟ್ಟಿದ್ದಾರೆ.

published on : 19th June 2020

ಕೊರೋನಾ ವೈರಸ್ ಬಿಕ್ಕಟ್ಟಿನ ನಡುವೆ ರಕ್ತದ ಕೊರತೆ: ರಕ್ತದಾನದ ಮೂಲಕ ಸಮಸ್ಯೆ ನಿವಾರಣೆಗೆ ಮುಂದಾದ ವೈದ್ಯರು!

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಮತ್ತೊಂದು ದಿಕ್ಕಿನಲ್ಲಿಯೂ ತಮ್ಮ ನಿರಂತರ ಹೋರಾಟ ನಡೆಸಿದ್ದಾರೆ. ವಿವಿಧ ರೋಗಿಗಳಿಗೆ ಎದುರಾಗುವ ರಕ್ತದ ಕೊರತೆಯನ್ನು ಸಹ ಅವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

published on : 15th June 2020

ರಕ್ತದಾನಿಯ ಶತಕದ ಕನಸು,ಜೀವ ಉಳಿಸುವ ಮನಸು: 63ನೇ ಬಾರಿ ರಕ್ತದಾನ ಮಾಡಿ ಮಾದರಿಯಾದ ಲಕ್ಷ್ಮೀಕಾಂತ್!

ಇಂದು ವಿಶ್ವ ರಕ್ತದಾನಿಗಳ ದಿನ. ಕೊಪ್ಪಳ ಜಿಲ್ಲೆಯಲ್ಲಿ ಈ ದಿನದ ಸ್ಪೆಷಲ್ ಸೆಲೆಬ್ರಿಟಿ ಎಂದರೆ ಲಕ್ಷ್ಮಿಕಾಂತ್ ಗುಡಿ. ಜೀವ ಉಳಿಸುವ ತುಡಿತದಲ್ಲಿರುವ ಅವರು ಸದಾ ಸೆಲೆಬ್ರಿಟಿಯೇ. ಈ ದಿನ ಬಂತೆಂದರೆ ಸಾಕು,ಎಲ್ಲರ ಕಣ್ಮುಂದೆ ಅವರ ಚಿತ್ರ ಕಾಣುತ್ತದೆ. ಹಲವು ಬಾರಿ ಅವರು ರಕ್ತದಾನ ಮಾಡಿ ಜನಮಾನಸದಲ್ಲಿ ನೆಲೆಯೂರಿದ್ದಾರೆ.

published on : 14th June 2020

ರಕ್ತದಾನಿಗಳ ದಿನ: ರಕ್ತದಾನ ಮಹತ್ವ ಸಾರಿದ ಸಿಎಂ ಯಡಿಯೂರಪ್ಪ

ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಶುಭ ಹಾರೈಸಿ, ರಕ್ತದಾನದ ಮಹತ್ವವನ್ನು ಸಾರಿದ್ದಾರೆ.

published on : 14th June 2020

ಜನೌಷಧಿ ಕೇಂದ್ರದಲ್ಲಿ ಗುಣಮಟ್ಟದ ಔಷಧಿ ಸಿಗುತ್ತದೆ, ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ:ಸದಾನಂದ ಗೌಡ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ಪರಿಕಲ್ಪನೆಯೊಂದಿಗೆ ರಸಗೊಬ್ಬರ ಇಲಾಖೆಯು ಹೆಜ್ಜೆಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಔಷಧ, ರಸಗೊಬ್ಬರ ಹಾಗೂ ರಾಸಾಯನಿಕ ವಲಯದಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ.

published on : 31st May 2020

ಅರಮನೆ ಮೈದಾನದಲ್ಲಿ ಕುಸಿದ ವಲಸಿಗರ ಶೆಡ್: ಪೊಲೀಸರಿಂದ ಇಬ್ಬರ ರಕ್ಷಣೆ

ಭಾರೀ ಮಳೆ ಮತ್ತು ಬಿರುಗಾಳಿಗೆ ಅರಮನೆ ಮೈದಾನದಲ್ಲಿ  ವಲಸೆ ಕಾರ್ಮಿಕರಿಗೆ ಹಾಕಲಾಗಿದ್ದ ಶೆಡ್ ನ ಮೇಲ್ಟಾವಣಿ ಗಾಳಿಗೆ ತೂರಿ ಹೋಗಿತ್ತು, ಮೇಲ್ಚಾವಣಿ ಕೆಳಗೆ ಸಿಕ್ಕಿಕೊಂಡಿದ್ದ ಇಬ್ಬರನ್ನು ಸದಾಶಿವನಗರ ಪೇದೆ ರಕ್ಷಿಸಿದ್ದಾರೆ.

published on : 30th May 2020

ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ವಿವಾದಕ್ಕೆ ಗುರಿಯಾದ ಸದಾನಂದಗೌಡ!

ದೆಹಲಿಯಿಂದ ವಿಮಾನವೊಂದರಲ್ಲಿ ಸೋಮವಾರ ಬೆಂಗಳೂರಿಗೆ ಆಗಮಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ನೇರವಾಗಿ ವಿಧಾನಸೌಧಕ್ಕೆ ತೆರಳಿ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಇದು ಇದೀಗ ವಿವಾದಕ್ಕೆ ಕಾರಣವಾಗಿದೆ.

published on : 25th May 2020

ಮುಂಗಾರಿಗೆ ರಸಗೊಬ್ಬರ ಕೊರತೆಯಾಗದು- ಸದಾನಂದ ಗೌಡ

ರಾಜ್ಯದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರೈತ ಸಮೂಹಕ್ಕೆ ರಸಗೊಬ್ಬರದ ಕೊರತೆ ಆಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

published on : 25th May 2020

ಬೆಂಗಳೂರು: ತಮ್ಮೂರಿಗೆ ತೆರಳಲು ಸಹಸ್ರಾರು ವಲಸಿಗ ಕಾರ್ಮಿಕರು ಸರದಿಯಲ್ಲಿ, ಅರಮನೆ ಮೈದಾನದಲ್ಲಿ ಅವ್ಯವಸ್ಥೆ 

ತಮ್ಮ ತಮ್ಮ ರಾಜ್ಯಗಳಿಗೆ ತೆರಳಲು ಸೇವಾ ಸಿಂಧು ಆಪ್ ನಲ್ಲಿ ಹೆಸರನ್ನು ದಾಖಲಿಸಲು ಒಡಿಶಾ, ಮಣಿಪುರ, ಜಾರ್ಖಂಡ್, ಬಿಹಾರ ಮತ್ತು ಉತ್ತರ ಪ್ರದೇಶದ ಸಹಸ್ರಾರು ಸಂಖ್ಯೆಯ ವಲಸಿಗ ಕಾರ್ಮಿಕರು ಅರಮನೆ ಮೈದಾನಕ್ಕೆ ಲಗ್ಗೆ ಇಟ್ಟಿದ್ದರಿಂದ ಗೊಂದಲಕಾರಿ ವಾತವಾರಣ ನಿರ್ಮಾಣವಾಯಿತು.

published on : 23rd May 2020

ಪಿಎಂ ಕೇರ್ಸ್ ನಿಧಿ ವಿರುದ್ಧ ಅವಹೇಳಕಾರಿ ಹೇಳಿಕೆ: ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲು

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ಗುರುವಾರ ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಎಫ್ಐಆರ್ ದಾಖಲಾಗಿದೆ. 

published on : 21st May 2020

ಔಷಧಗಳಿಗೆ ಅಗತ್ಯವಿರುವ ರಾಸಾಯನಿಕ ಮುಂದಿನ ದಿನಗಳಲ್ಲಿ ಭಾರತದಲ್ಲೇ ತಯಾರಿ: ಸದಾನಂದ ಗೌಡ

ಭಾರತ ಸ್ವಾವಲಂಬಿ ರಾಷ್ಟ್ರವಾಗುವತ್ತ ದಾಪುಗಾಲಿರಿಸಿದ್ದು ಔಷಧಗಳ ತಯಾರಿಕೆಗೆ ಅಗತ್ಯವಿರುವ ರಾಸಾಯನಿಕಗಳಿಗೆ ಚೀನಾ ದೇಶದ ಮೇಲೆ ಅವಲಂಬಿತವಾಗುವ ಬದಲು ದೇಶೀಯವಾಗಿ ಉತ್ಪಾದಿಸುವ ಕುರಿತಂತೆ ಯೋಜನೆ ರೂಪಿಸಲಾಗುತ್ತಿದೆ

published on : 16th May 2020
1 2 3 4 5 6 >