ನಿರ್ಗತಿಕರಿಗೆ ಮನೆ ನೀಡಿ ಹುಟ್ಟುಹಬ್ಬ ಆಚರಣೆ: ಕೊಡಗಿನ ಈ ವ್ಯಕ್ತಿ ಇತರರಿಗೆ ಮಾದರಿ

ಈ ಪ್ರಪಂಚದಲ್ಲಿ ಯಾರೂ ಶಾಶ್ವತವಲ್ಲ. ಕೊನೆಯ ಕ್ಷಣದಲ್ಲಿ ನಾವೇನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಹೀಗಾಗಿ ಹೆಚ್ಚೆಚ್ಚು ಆಸ್ತಿ ಗಳಿಸುವ ಬದಲು, ಯೋಗ್ಯ ಜೀವನ ನಡೆಸಲು ಅಗತ್ಯವಿದ್ದಷ್ಟು ಇಟ್ಟುಕೊಂಡು, ಉಳಿದದ್ದನ್ನು ನಿರ್ಗತಿಕರಿಗೆ ದಾನ ಮಾಡಬೇಕು. ಇದು ನನ್ನ ಬದುಕಿನ ಮಂತ್ರ.
ಬಿಎಂ ಶಂಕ್ರು ಮತ್ತು ವಸಂತಿ ಅವರ ಹೊಸ ಮನೆಯನ್ನು ಉದ್ಘಾಟಿಸಿದ ಗಣೇಶ್.
ಬಿಎಂ ಶಂಕ್ರು ಮತ್ತು ವಸಂತಿ ಅವರ ಹೊಸ ಮನೆಯನ್ನು ಉದ್ಘಾಟಿಸಿದ ಗಣೇಶ್.
Updated on

ಮಡಿಕೇರಿ: ವೈಭವದ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ಟ್ರೆಂಡ್. ಆದರೆ, ಇಲ್ಲೊಬ್ಬ ವ್ಯಕ್ತಿ ನಿರ್ಗತಿಕರಿಗೆ ಮನೆಗಳನ್ನು ಉಡುಗೊರೆಯಾಗಿ ನೀಡಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಕೊಡಗಿನ ಅರ್ಜಿ ಪಂಚಾಯತ್ ನಿವಾಸಿ ಗಣೇಶ್ ಅವರು, ನಿರ್ಗತಿಕರಿಗೆ ಸಹಾಯದ ಹಸ್ತ ಚಾಚುವ ಮೂಲಕ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅದ್ದೂರಿ ಆಚರಣೆಯ ಬದಲು ಬಡ ಕುಟುಂಬದವರೊಂದಿಗೆ ಕೇಕ್ ಕತ್ತರಿಸಿ, ಮನೆಯನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಈ ಪ್ರಪಂಚದಲ್ಲಿ ಯಾರೂ ಶಾಶ್ವತವಲ್ಲ. ಕೊನೆಯ ಕ್ಷಣದಲ್ಲಿ ನಾವೇನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಹೀಗಾಗಿ ಹೆಚ್ಚೆಚ್ಚು ಆಸ್ತಿ ಗಳಿಸುವ ಬದಲು, ಯೋಗ್ಯ ಜೀವನ ನಡೆಸಲು ಅಗತ್ಯವಿದ್ದಷ್ಟು ಇಟ್ಟುಕೊಂಡು, ಉಳಿದದ್ದನ್ನು ನಿರ್ಗತಿಕರಿಗೆ ದಾನ ಮಾಡಬೇಕು. ಇದು ನನ್ನ ಬದುಕಿನ ಮಂತ್ರವಾಗಿದೆ ಎಂದು ಗಣೇಶ್ ಅವರು ಹೇಳಿದ್ದಾರೆ.

ಗಣೇಶ್ ಅವರು ವಿದ್ಯುತ್ ಗುತ್ತಿಗೆದಾರನಾಗಿ ಕೆಲಸ ಮಾಡಿ, ಜೀವನ ನಡೆಸುತ್ತಿದ್ದಾರೆ. ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವು ನನಗೆ ಯೋಗ್ಯ ಜೀವನವನ್ನು ನೀಡಿದೆ. ಬಡ ಕುಟುಂಬದಲ್ಲಿ ಜನಿಸಿದ ನಾನು ಹಲವು ವರ್ಷಗಳ ಕಾಲ ಒಣಹುಲ್ಲಿನ ಗುಡಿಸಲಿನಲ್ಲಿ ವಾಸವಿದ್ದೆ. ಇದೀಗ ಶ್ರೀಮಂತನಾಗಿದ್ದೇನೆ. ಬಡತನದ ಸಂಕಷ್ಟ ತಿಳಿದ ನಾನು ನಿರ್ಗತಿಕರಿಗೆ ಸಹಾಯ ಮಾಡುವ ಹಂಬಲವನ್ನು ಹೊಂದಿದ್ದೇನೆಂದು ತಿಳಿಸಿದ್ದಾರೆ.

2000ರಲ್ಲಿ ಬೆಟೋಲಿ ಗ್ರಾಮ ಪಂಚಾಯತ್ (ಈಗ ಅರ್ಜಿ ಪಂಚಾಯತ್ ಎಂದು ಕರೆಯಲಾಗುತ್ತದೆ) ಚುನಾವಣೆಯಲ್ಲಿ 5 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಈ ವೇಳೆ ಜನರ ಜೀವನ ಪರಿಸ್ಥಿತಿ ಅರಿತುಕೊಂಡೆ. 2005ರಲ್ಲಿ ಮರು ಆಯ್ತೆಯಾದೆ. ಉಪಾಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದೆ. ನಂತರ ತಾಲ್ಲೂಕು ಪಂಚಾಯತ್ ಸದಸ್ಯನಾದೆ. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 95 ರಷ್ಟು ಅಂಕಗಳನ್ನು ಗಳಿಸಿದ ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಯುವತಿಯೊಬ್ಬಳನ್ನು ನಾನು ಭೇಟಿಯಾದೆ. ಆಕೆ ವಾಸಿಸುತ್ತಿದ್ದ ಗುಡಿಸಲಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಎಣ್ಣೆ ದೀಪದ ಕೆಳಗೆ ಓದುತ್ತಿದ್ದದ್ದ ವಿಡಿಯೋ ವೈರಲ್ ಆಗಿತ್ತು. ಅವರ ಕಥೆ ನನಗೆ ಸ್ಫೂರ್ತಿ ನೀಡಿತು. ಬಳಿಕ ನಾನು ಅವರ ಮನೆಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸಿದೆ.

2023ರ ಪಂಚಾಯತ್ ಸಮೀಕ್ಷೆ ಸಮಯದಲ್ಲಿ ಬುಡಕಟ್ಟು ಜನಾಂಗದ ಕಲಾ ಎಂಬ ಮಹಿಳೆ ಪರಿಚಯವಾಗಿತ್ತು. ಪಂಚಾಯಿತಿ ಮಿತಿಯಲ್ಲಿ ಉತ್ತಮ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಯಾವುದೇ ಕುಟುಂಬವೂ ಕಂಡು ಬರಲಿಲ್ಲ. ಈ ವೇಳೆ ಇವರ ಜೀವನ ಬದಲು ಮಾಡಲು ಬಯಸಿದ್ದೆ, ಅವರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು,

ಕಲಾ ಅವರ ಕುಟುಂಬಕ್ಕಾಗಿ ಗಣೇಶ್ ಅವರು, 4 ಕೋಣೆಗಳುಳ್ಳ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ, 2024ರ ಜನವರಿ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆ ಮನೆ ಕೀಲಿ ಕೈಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದೆ. ಈ ದಿನ ಸದಾ ನೆನೆಪಿನಲ್ಲಿರಬೇಕೆಂಬ ಕಾರಣಕ್ಕೆ ರಾಮಮಂದಿರ ಉದ್ಘಾಚನೆ ದಿನ ಬೀಗದ ಕೈಲಿ ನೀಡಿದ್ದೆ ಎಂದು ಗಣೇಶ್ ಅವರು ಹೇಳಿದ್ದಾರೆ.

2024 ರ ಏಪ್ರಿಲ್ ತಿಂಗಳಿನಲ್ಲಿ, ಬಿಲ್ಲವ ಸಮುದಾಯ ಸಂಘದ ತಾಲ್ಲೂಕು ಅಧ್ಯಕ್ಷರಾಗಿದ್ದಾಗ, ಈ ಸಮುದಾಯದ ಮಹಿಳೆಯೊಬ್ಬರ ಮನೆ ಕುಸಿದು ಬಿದ್ದಿರುವುದು ಅವರ ಗಮನಕ್ಕೆ ಬಂದಿತ್ತು. ಅವರಿಗೂ ಮನೆ ನಿರ್ಮಿಸಿಕೊಡಲು ನಿರ್ಧಸಿದ್ದರು, ಇದರಂತೆ ಮನೆ ನಿರ್ಮಿಸಿಕೊಟ್ಟಿದ್ದಾರೆ.

ಬಿಎಂ ಶಂಕ್ರು ಮತ್ತು ವಸಂತಿ ಅವರ ಹೊಸ ಮನೆಯನ್ನು ಉದ್ಘಾಟಿಸಿದ ಗಣೇಶ್.
Video: 52ನೇ ವಯಸ್ಸಿನಲ್ಲಿ 150 ಕಿ.ಮೀ ಈಜಿ ದಾಖಲೆ; Goli Shyamala ಸಾಹಸಕ್ಕೆ ಸಿಎಂ ಮೆಚ್ಚುಗೆ!

ಈ ಸಹಾಯದ ಬೆನ್ನಲ್ಲೇ ಹಲವಾರು ಕುಟುಂಬಗಳು ಗಣೇಶ್ ಅವರನ್ನು ಸಂಪರ್ಕಿಸುತ್ತಿದ್ದು, ಸಹಾಯಕ್ಕೆ ಮೊರೆ ಇಟ್ಟಿದ್ದಾರೆ. ಪಂಚಾಯತ್ ಮಿತಿಯಿಂದ ಒಟ್ಟು 5 ಕುಟುಂಬಗಳು ವಿದ್ಯುತ್ ಸಂಪರ್ಕಕ್ಕಾಗಿ ಸಹಾಯ ಕೋರಿದ್ದು, ಅವರಿಗೆ ನೆರವು ನೀಡಲಾಗಿದೆ ಎಂದು ಗಣೇಶ್ ಅವರು ತಿಳಿಸಿದ್ದಾರೆ.

ಇನ್ನು ತಮ್ಮ 50ನೇ ಹುಟ್ಟಹಬ್ಬದ ನೆನಪಿಗಾಗಿ ಶಂಕರ್ ಮತ್ತು ವಸಂತಿ ಎಂಬುವವರಿಗೆ 2 ಮನೆಗಳನ್ನು ನಿರ್ಮಿಸಿ, ಉಡುಗೊರೆಯಾಗಿ ನೀಡಿದ್ದಾರೆ.

ಕೆಲಸದ ನಿಮಿತ್ತ ಥೆರೆಮೆಕಾಡು ಪೈಸಾರಿ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಶಂಕರ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದ್ದೆ. ಅವರು ಗುಡಿಸಲಿನ ಹಾಗೂ ಕುಸಿಯುವ ಹಂತದಲ್ಲಿದ್ದ ಮನೆಯಲ್ಲಿ ವಾಸವಿದ್ದರು. ಈ ವೇಳೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದೆ. 1.60 ಲಕ್ಷ ರೂ. ಖರ್ಚು ಮಾಡಿ ಮನೆ ನಿರ್ಮಿಸಿ, ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಕೀಲಿ ಕೈಯನ್ನು ಅವರಿಗೆ ನೀಡಿದೆ. ಎಷ್ಟೇ ಆಸ್ತಿ ಇದ್ದರೂ, ಮತ್ತಷ್ಟು, ಮತ್ತಷ್ಟು ಎಂದು ಆಸ್ತಿ ಗಳಿಸಲು ನೋಡುತ್ತಾರೆ. ಆದರೆ, ಒಂದು ದಿನ ನಾವೆಲ್ಲರೂ ಈ ಪ್ರಪಂಚ ಬಿಟ್ಟು ಹೋಗಲೇಬೇಕು. ಬದುಕಿರುವಾಗ ಅಗತ್ಯ ಇರುವವರಿಗೆ ಸಹಾಯ ಮಾಡಬೇಕು. ಅಗತ್ಯವಿದ್ದಷ್ಟು ಇಟ್ಟುಕೊಂಡು, ಇತರರಿಗೆ ಸಹಾಯ ಮಾಡಿ ಎಂದು ಗಣೇಶ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com