ಕಡಿಮೆ ತಿಂದರೂ ತೂಕ ಇಳಿಕೆ ಅಸಾಧ್ಯ!

ತೂಕ ಹೆಚ್ಚಾದರೆ ಎಲ್ಲರೂ ಸಾಮಾನ್ಯವಾಗಿ ಹೇಳುವುದು ಡಯೆಟ್ ಮಾಡುತ್ತಿದ್ದೇನೆಂದು. ಇತ್ತೀಚಿನ ದಿನಗಳಲ್ಲಿ ಡಯೆಟ್ ಎಂಬುದು ಒಂದು ರೀತಿಯಲ್ಲಿ ಫ್ಯಾಷನ್ ಆಗಿ ಹೋಗಿದೆ. ಊಟದ ಸಮಯ ಬಂದಾಗ...
ಕಡಿಮೆ ತಿಂದರೂ ತೂಕ ಇಳಿಕೆ ಅಸಾಧ್ಯ! (ಸಾಂದರ್ಭಿಕ ಚಿತ್ರ)
ಕಡಿಮೆ ತಿಂದರೂ ತೂಕ ಇಳಿಕೆ ಅಸಾಧ್ಯ! (ಸಾಂದರ್ಭಿಕ ಚಿತ್ರ)

ವಾಷಿಂಗ್ಟನ್: ತೂಕ ಹೆಚ್ಚಾದರೆ ಎಲ್ಲರೂ ಸಾಮಾನ್ಯವಾಗಿ ಹೇಳುವುದು ಡಯೆಟ್ ಮಾಡುತ್ತಿದ್ದೇನೆಂದು. ಇತ್ತೀಚಿನ ದಿನಗಳಲ್ಲಿ ಡಯೆಟ್ ಎಂಬುದು ಒಂದು ರೀತಿಯಲ್ಲಿ ಫ್ಯಾಷನ್ ಆಗಿ ಹೋಗಿದೆ. ಊಟದ ಸಮಯ ಬಂದಾಗ ಊಟಕ್ಕೆ ಕರೆದರೆ ನಾನು ಡಯೆಟ್ ನಲ್ಲಿದ್ದೇನೆ ಏನನ್ನು ತಿನ್ನುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಸ್ವಲ್ಪ ತಿಂದು, ನನ್ನ ಊಟ ಇಷ್ಟೇ ಎಂದು ಹೇಳುತ್ತಾರೆ.

ಇಂತಹ ಫ್ಯಾಷನ್ ಡಯೆಟಿಗರಿಗೆ ಅಧ್ಯಾಯನವೊಂದು ಆಘಾತದ ವರದಿಯೊಂದನ್ನು ಹೊರಹಾಕಿದ್ದು, ಇತಿ-ಮಿತಿಯಲ್ಲಿ ಆಹಾರ ಸೇವನೆ ಮಾಡಿದರೂ ಕೂಡ ತೂಕ ಇಳಿಕೆ ಮಾಡಿವುದು ಅಸಾಧ್ಯವೆಂದು ಹೇಳಿದೆ.

ಜಾರ್ಜಿಯಾದ ನವ ವಿಶ್ವವಿದ್ಯಾಲಯ ಈ ವರದಿಯನ್ನು ಹೊರಹಾಕಿದ್ದು, ಇತಿಮಿತಿಯಲ್ಲಿ ತಿಂದರೂ ಕೂಡ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಅಧ್ಯಯನ ನಡೆಸುವ ಸಂದರ್ಭದಲ್ಲಿ ಕೆಲವು ಜನರಿಗೆ ಮಿತಿಯ ಆಹಾರದ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ವೇಳೆ ಸಾಕಷ್ಟು ಮಂದಿ ಆಹಾರದ ಪ್ರಮಾಣವೆಂದೇ ಉತ್ತರಿಸಿದ್ದರು. ತಿನ್ನುವ ಆಹಾರದಲ್ಲಿ ಅರ್ಧದಷ್ಟು ತಿಂದರೆ ಅದನ್ನೇ ಮಿತಿಯಲ್ಲಿ ಆಹಾರ ಸೇವನೆ ಮಾಡುತ್ತಿದ್ದೇವೆಂದು ಜನರು ತಿಳಿಯುತ್ತಾರೆ. ಆದರೆ, ಅದು ಡಯೆಟ್ ಎನಿಸಿಕೊಳ್ಳುವುದಿಲ್ಲ ಎಂದು ಅಧ್ಯಾಯನ ನಡೆಸಿದ ವಿಶ್ವವಿದ್ಯಾಲಯದ ಹೇಳಿಕೊಂಡಿದೆ.

ಆಹಾರದ ಪ್ರಮಾಣ ಅಳತೆ ಮಾಡುವಲ್ಲಿ ಸಾಕಷ್ಟು ಮಂದಿ ವಿಫಲರಾಗುತ್ತಾರೆ. ಅವರು ಎಷ್ಟು ತಿನ್ನುತ್ತಾರೆಂಬುದು ಎಷ್ಟೋ ಬಾರಿ ಅವರಿಗೆ ತಿಳಿಯುವುದಿಲ್ಲ. ಹೀಗಾಗಿ ಆಹಾರ ಎಂದಿನಂತೆ ಮಿತಿಯಲ್ಲಿರುವುದಿಲ್ಲ. ಇದರಿಂದ ತೂಕ ಇಳಿಕೆಯಾಗುವುದಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com