ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ರವಾಸದಲ್ಲಿದ್ದಾಗ ಫೋಟೊ ತೆಗೆಯುವುದರಿಂದ ಡಬಲ್ ಆಗುತ್ತೆ ನಿಮ್ಮ ಖುಷಿ!

ಸ್ನೇಹಿತರು, ಬಂಧುಗಳ ಜೊತೆ ಹೊರಗಡೆ ಸುತ್ತಾಡಲು, ಪ್ರವಾಸ ಹೋದಾಗ ಫೋಟೋ ತೆಗೆಯುತ್ತಿದ್ದರೆ ನಿಮ್ಮ ಖುಷಿ ಡಬಲ್ ಆಗುತ್ತದೆ,...

ನ್ಯೂಯಾರ್ಕ್: ಸ್ನೇಹಿತರು, ಬಂಧುಗಳ ಜೊತೆ ಹೊರಗಡೆ ಸುತ್ತಾಡಲು, ಪ್ರವಾಸ ಹೋದಾಗ ಫೋಟೋ ತೆಗೆಯುತ್ತಿದ್ದರೆ ನಿಮ್ಮ ಖುಷಿ ಡಬಲ್ ಆಗುತ್ತದೆ, ಆ ಅನುಭವದಲ್ಲಿ ಭಾರೀ ಮಜಾ ಸಿಗುತ್ತದೆ ಎನ್ನುತ್ತದೆ ಹೊಸ ಅಧ್ಯಯನ.

ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಯೇಲ್ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನದಿಂದ ಈ ಅಂಶ ಬಹಿರಂಗಗೊಂಡಿದೆ. ಫೋಟೋ ತೆಗೆಯುವುದರಿಂದ ಜನರ ವಿನೋದ, ಸಂತೋಷದ ಅನುಭವದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಮೇಲೆ ಅಧ್ಯಯನ ನಡೆಸಲಾಗಿತ್ತು.

'Personality and Social Psychology' ಎಂಬ ವೃತ್ತಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದ್ದು, ಕ್ರಿಸ್ಟಿನ್ ದಿಯೆಲ್, ಗಲ್ ಝೌಬರ್ಮೆನ್ ಮತ್ತು ಅಲಿಕ್ಸಾಂಡ್ರ ಬರಸ್ಚ್ ಎಂಬ ಲೇಖಕರು ಈ ವಿಷಯವನ್ನು ಬರೆದಿದ್ದಾರೆ.

ಈ ಪ್ರಯೋಗಕ್ಕೆ ಸುಮಾರು 2 ಸಾವಿರ ಮಂದಿಯನ್ನು ಸೇರಿಸಲಾಗಿತ್ತು. ಭಾಗವಹಿಸಿದವರಲ್ಲಿ ಆಸಕ್ತಿಯಿದ್ದವರು ಫೋಟೋ ತೆಗೆಯಬಹುದು ಇಲ್ಲವೇ ತೆಗೆಯದೇ ಇರಬಹುದು ಎಂದು ಸೂಚಿಸಲಾಗಿತ್ತು.

ಸಮೀಕ್ಷೆ ಮುಗಿದ ನಂತರ ಅವರು ನಡೆಸಿದ ಚಟುವಟಿಕೆಗಳ ಆಧಾರದ ಮೇಲೆ, ಸ್ನೇಹಿತರೊಡಗೂಡಿ ಫೋಟೋ ತೆಗೆದವರು ಹೆಚ್ಚು ಖುಷಿಯಾಗಿರುವುದು ಕಂಡುಬಂತು. ಸಮೀಕ್ಷೆಗೊಳಗಾದವರನ್ನು ವಸ್ತುಸಂಗ್ರಹಾಲಯವೊಂದಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಫೋಟೋ ತೆಗೆಯುತ್ತಿದ್ದವರು ಕಲಾಕೃತಿಗಳನ್ನು ಹೆಚ್ಚು ಸೂಕ್ಷ್ಮವಾಗಿ ಹೆಚ್ಚು ಹೊತ್ತು ವೀಕ್ಷಿಸುತ್ತಿದ್ದರು. ಫೋಟೋ ತೆಗೆಯದವರು ಸುಮ್ಮನೆ ನೋಡಿಕೊಂಡು ಮುಂದೆ ಹೋಗುತ್ತಿದ್ದರಂತೆ.

ಇನ್ನೊಂದು ಪ್ರಯೋಗದಲ್ಲಿ ಒಟ್ಟು 2 ಸಾವಿರ ಜನರಲ್ಲಿ ಕೆಲವರನ್ನು ಕಲೆ ಮತ್ತು ಕರಕುಶಲ ಕೆಲಸದಲ್ಲಿ ತೊಡಗಲು ಮತ್ತು ಇನ್ನು ಕೆಲವರನ್ನು ಅದನ್ನು ವೀಕ್ಷಿಸಲು ಹೇಳಲಾಯಿತು. ವೀಕ್ಷಿಸುತ್ತಿದ್ದವರು ಸುಮ್ಮನೆ ನೋಡುವ ಬದಲು ಅದರ ಫೋಟೋ ತೆಗೆಯುತ್ತಾ ಹೋದಂತೆ ಅವರಿಗೆ ಹೆಚ್ಚಿನ ಖುಷಿ ನೀಡಿತು. ಇವರು ಫೋಟೋ ತೆಗೆಯುವುದು ಕರಕುಶಲ ತಯಾರಿಸುತ್ತಿದ್ದವರ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುತ್ತಿರಲಿಲ್ಲ. ಅವರು ಕೂಡ ಖುಷಿಯಾಗಿದ್ದರು.

ಈ ಅಧ್ಯಯನದಿಂದ ತಿಳಿದುಬರುವುದೆಂದರೆ ನಾವು ಹೊರಗಡೆ ಸುತ್ತಾಡಲು, ಪ್ರವಾಸಕ್ಕೆ ಬಂಧು-ಮಿತ್ರರೊಂದಿಗೆ ಹೋಗುವಾಗ ಫೋಟೋ ತೆಗೆಯುತ್ತಿದ್ದರೆ ಸಮಯ ಹೋಗುವುದೂ ಗೊತ್ತಾಗುವುದಿಲ್ಲ. ಖುಷಿಯೂ ಇಮ್ಮಡಿಯಾಗುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com