
ಲಂಡನ್: ಲೈಂಗಿಕ ಸುಖ ಪಡೆಯಲು ಪುರುಷರು ಸೇವಿಸುವ ಸಣ್ಣ ನೀಲಿ ಮಾತ್ರೆ ವಯಾಗ್ರ ಹೃದಯಾಘಾತ ಸಂಭವವನ್ನು ಕಡಿಮೆಗೊಳಿಸುತ್ತದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ವಯಾಗ್ರ ಮಾತ್ರೆಯ ಈ ವಿಸ್ಮಯಕಾರಿ ಸಂಗತಿಯನ್ನು ಲಂಡನ್ ಪ್ರಸಿದ್ಧ ವಿಜ್ಞಾನಿ ಆಂಡ್ರ್ಯೂ ಟ್ರಾಫೋರ್ಡ್ ಹೇಳಿದ್ದಾರೆ.
ಮ್ಯಾಂಚೆಸ್ಟರ್ ಸಂಶೋಧಕರು ಸಕ್ಕರೆ ಕಾಯಿಲೆಯಿರುವ ಸುಮಾರು 6.000 ರೋಗಿಗಳಿಗೆ ವಯಾಗ್ರ ನೀಡಿದ್ದರು. ಇದರಿಂದ ಅವರ ಲೈಂಗಿಕ ಶಕ್ತಿ ವೃದ್ಧಿಯಾಗುವುದಲ್ಲದೇ ರಕ್ತದೊತ್ತಡ ಕೂಡ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.
ಹೃದಯ ತೊಂದರೆಯಿದ್ದರೂ ಲೈಂಗಿಕ ಕ್ರಿಯೆ ಬಗ್ಗೆ ಆಸಕ್ತಿಯಿದ್ದವರಿಗೆ ಈ ಮಾತ್ರೆ ನೀಡಲಾಯಿತು, ಆದರೆ ಇದರಿಂದ ಯಾವುದೇ ತೊಂದರೆಯಾಗಲಿಲ್ಲ ಎಂದು ಅಧ್ಯಯನ ತಿಳಿಸಿದೆ.
ಲೈಂಗಿಕ ಕ್ರಿಯೆಗಾಗಿ ಬಳಸುವ ವಯಾಗ್ರದಿಂದ ಹೃದಯಾಘಾತ ಸಂಭವ ಕಡಿಮೆಯಾಗುವುದರ ಜೊತೆಗೆ ಅಧಿಕ ಹೃದಯ ಬಡಿತವನ್ನು ಕಡಿಮೆಗೊಳ್ಳಲು ಈ ಔಷಧ ಸಹಕಾರಿಯಾಗಿದೆ, ಇದು ಇತ್ತೀಚೆಗೆ ನಡೆದ ಸಂಶೋಧನೆಯಿಂದ ದೃಢ ಪಟ್ಟಿದೆ ಎಂದು ಟ್ರಾಫೋರ್ಡ್ ತಿಳಿಸಿದ್ದಾರೆ.
ಈ ಅಧ್ಯಯನದ ವರದಿಯನ್ನು ಬಿಎಂಜೆ ಹಾರ್ಟ್ ಜರ್ನಲ್ ನಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.
Advertisement