ಭಾರತದಲ್ಲಿ ಸಿಗುವ ಶೇ. 68ಕ್ಕಿಂತಲೂ ಹೆಚ್ಚು ಹಾಲು ಕಲಬೆರಕೆ!

ಭಾರತದಲ್ಲಿ ಲಭಿಸುವ ಹಾಲಿನಲ್ಲಿ ಶೇ. 68 ಕ್ಕಿಂತಲೂ ಹೆಚ್ಚು ಹಾಲು ಕಲಬೆರಕೆಯಿಂದ ಕೂಡಿದ್ದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಂದರೆ ಇಲ್ಲಿ...
ಹಾಲು
ಹಾಲು
ನವದೆಹಲಿ: ಮನುಷ್ಯನ ಆರೋಗ್ಯಕ್ಕೆ ಹಾಲು ಸೇವನೆ ಅತ್ಯಗತ್ಯ. ಆದರೆ ನಾವು ಸೇವಿಸುವ ಹಾಲು ಪರಿಶುದ್ಧವಾಗಿರುತ್ತದೆಯೇ? ಎಂಬ ಪ್ರಶ್ನೆಗೆ ಅಧ್ಯಯನ ವರದಿಯೊಂದು ಉತ್ತರ ನೀಡಿದೆ.
ಭಾರತದಲ್ಲಿ ಲಭಿಸುವ ಹಾಲಿನಲ್ಲಿ ಶೇ. 68 ಕ್ಕಿಂತಲೂ ಹೆಚ್ಚು ಹಾಲು ಕಲಬೆರಕೆಯಿಂದ ಕೂಡಿದ್ದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಂದರೆ ಇಲ್ಲಿ ಮಾರಲ್ಪಡುವ ಹಾಲುಗಳು ಗುಣಮಟ್ಟದವುಗಳಲ್ಲ.
ಈ  ಹಾಲುಗಳಲ್ಲಿ ಕಾಸ್ಟಿಕ್ ಸೋಡಾ, ಡಿಟರ್ಜೆಂಟ್, ಗ್ಲುಕೋಸ್, ವೈಟ್ ಪೇಂಟ್ ಮತ್ತು ರಿಫೈನ್ಡ್ ಆಯಿಲ್‌ಗಳನ್ನು ಸೇರಿಸಿ ಕಲಬೆರಕೆ ಮಾಡಲಾಗುತ್ತಿದ್ದು, ಇವು ಆರೋಗ್ಯಕ್ಕೆ ಹಾನಿಕರವಾಗಿದೆ.
ಈ ವಿಷಯದ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಚರ್ಚೆ ನಡೆದಿದ್ದು, ಹಾಲಿನ ಕಲಬೆರಕೆಯನ್ನು ಪತ್ತೆ ಹಚ್ಚುವುದಕ್ಕಾಗಿ ಹೊಸ ಸ್ಕ್ಯಾನರ್ ತಯಾರಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಈ ಹಿಂದೆ ಕೆಮಿಕಲ್ ಟೆಸ್ಟ್  ಮೂಲಕ ಕಲಬೆರಕೆ ಪತ್ತೆ  ಹಚ್ಚಲಾಗುತ್ತಿದ್ದು ಇನ್ಮುಂದೆ ಸ್ಕ್ಯಾನರ್ ನಿಂದ ಪತ್ತೆ ಹಚ್ಚಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com