ಸಾಧಾರಣ ನೋವು ನಿವಾರಕ ಮಾತ್ರೆಗಳಿಂದ ಆರೋಗ್ಯಕ್ಕೆ ಅಪಾಯ

ದೇಹದಲ್ಲಿ ಸಣ್ಣ ನೋವು ಎಂದಾಕ್ಷಣ ಇತ್ತೀಚಿನ ದಿನಗಳಲ್ಲಿ ಜನರು ಮೊರೆ ಹೋಗುವುದು ನೋವು ನಿವಾರಕ ಮಾತ್ರೆಗಳಿಗೆ. ಆದರೆ,...
ನೋವು ನಿವಾರಕ ಮಾತ್ರೆಗಳಿಂದ ಸಾವು ಸಂಭವ
ನೋವು ನಿವಾರಕ ಮಾತ್ರೆಗಳಿಂದ ಸಾವು ಸಂಭವ
Updated on

ಲಂಡನ್: ದೇಹದಲ್ಲಿ ಸಣ್ಣ ನೋವು ಎಂದಾಕ್ಷಣ ಇತ್ತೀಚಿನ ದಿನಗಳಲ್ಲಿ ಜನರು ಮೊರೆ ಹೋಗುವುದು ನೋವು ನಿವಾರಕ ಮಾತ್ರೆಗಳಿಗೆ. ಆದರೆ, ಇಂತಹ ಮಾತ್ರೆಗಳು ಜೀವನ ಪರ್ಯಂತ ಸಮಸ್ಯೆಗಳನ್ನುಂಟು ಮಾಡುವುದರ ಬಗ್ಗೆ ಚಿಂತಿಸುವವರು ಮಾತ್ರ ಬೆರಳಿಣೆಕೆಯಷ್ಟು ಜನ. ಪ್ರತೀ ದಿನ ನೀವು ತೆಗೆದುಕೊಳ್ಳುವ ನೋವು ನಿವಾರಕ ಮಾತ್ರೆಗಳು ಅಲ್ಸರ್, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಸಮಸ್ತೆಯಗಳನ್ನುಂಟು ಮಾಡುವುದರೊಂದಿಗೆ ರೋಗವನ್ನು ಉಲ್ಪಣಗೊಳಿಸಲಿದೆ ಎಂದು ಸಂಶೋಧನೆಯೊಂದು ಹೇಳಿದೆ.

14 ಯುರೋಪಿಯನ್ ವಿಶ್ವವಿದ್ಯಾಲಯ ಹಾಗೂ ಆಸ್ಪತ್ರೆಗಳು ಜಂಟಿಯಾಗಿ ಈ ಸಂಶೋಧನೆಯನ್ನು ಮಾಡಿದ್ದು, ಸಂಶೋಧನಾ ವರದಿಯಲ್ಲಿ ಎನ್'ಎಸ್'ಎಐಡಿಎಸ್ ಗಳು ರೋಗಿಗಳಿಗೆ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೆಚ್ಚಿಸಲಿದೆ ಎಂದು ತಿಳಿಸಿದೆ.

ನಾನ್ ಸ್ಟಿರಾಯ್ಡ್ ಆ್ಯಂಟಿ ಇನ್ ಫ್ಲೇಮಟರಿ ಡ್ರಗ್ಸ್ ನ (ಎನ್'ಎಸ್'ಎಐಡಿಎಸ್) ಹೊಸ ಮಾತ್ರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇಂತಹ ಮಾತ್ರೆಗಳು ಹೃದಯ ಸಂಬಂಧಿ ಸಮಸ್ಯೆಗಳನ್ನುಂಟು ಮಾಡಲಿದೆ. ಈ ಕಾರಣದಿಂದಲೇ ಎನ್'ಎಸ್'ಎಐಡಿಎಸ್ ಮಾತ್ರೆಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಎಂದು ಡೆನ್ ಮಾರ್ಕ್'ನ ಆರ್ಹಸ್ ವಿಶ್ವವಿದ್ಯಾಲಯದ ಸಂಶೋಧಕ ಮಾರ್ಟಿನ್ ಸ್ಮಿತ್ ಅವರು ಹೇಳಿಕೊಂಡಿದ್ದಾರೆ.

ಎನ್'ಎಸ್'ಎಐಡಿಎಸ್'ರ ಹಳೆಯ ಮಾತ್ರೆಗಳನ್ನು ಇಂದಿಗೂ ಪಾಶ್ಚಿಮಾತ್ಯ ದೇಶಗಳು ಬಳಕೆ ಮಾಡುತ್ತಿದ್ದು, ವೈದ್ಯರ ಸಲಹೆಯಿಲ್ಲದೆಯೆ ಈ ಮಾತ್ರೆಗಳು ಲಭ್ಯವಾಗುತ್ತಿವೆ. ಇದು ನಿಜಕ್ಕೂ ಆಘಾತಕಾರಿ ಸಂಗತಿಯೆಂದು ಸಂಶೋಧಕ ಸ್ಮಿತ್ ಅವರು ಹೇಳಿದ್ದಾರೆ.

ಈ ಕುರಿತಂತೆ ಯುರೋಪಿಯನ್ ಹಾರ್ಟ್ ಜರ್ನಲ್ಸ್ ವರದಿ ಮಾಡಿದ್ದು, ಇದರಂತೆ ಸಂಧಿವಾತ ಸಮಸ್ಯೆಯಿಂದ ಬಳಲುವ ಜನರಿಗೆ ಎನ್'ಎಸ್'ಎಐಡಿಎಸ್ ಮಾತ್ರೆಗಳನ್ನು ನೀಡಲಾಗುತ್ತದೆ. ಇಂತಹ ಮಾತ್ರಗಳು ಬಹಳ ಅಪಾಯಕಾರಿಯಾಗಿದ್ದು, ಹೃದಯ ಸಮಸ್ಯೆಗಳನ್ನುಂಟು ಮಾಡುತ್ತದೆ.
 
ಎನ್'ಎಸ್'ಎಐಡಿಎಸ್ ರೋಗ ನಿರೋಧಕ ಮಾತ್ರಗಳಾಗಿಲ್ಲದಿರುವುದರಿಂದ ಬ್ಯಾಕ್ಟೀರಿಯಾಗಳಿಂದ ಬಂದ ಸೋಂಕುಗಳ ನಿವಾರಣೆಗೆ ಸಹಾಯಕವಾಗುವುದಿಲ್ಲ. ಈ ಔಷಧಿಗಳನ್ನು ಅಪಸಮಾನ್ಯತೆ ಹಾಗೂ ಮೂಳೆ ಸಂಬಂಧಿತ ರೋಗಗಳು, ಊತ ಸಮಸ್ಯೆ, ದೇಹಕ್ಕೆ ಸಂಬಂಧಿಸಿದ ಕೆಲವು ನೋವುಗಳಿಗೆ ಬಳಕೆ ಮಾಡಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com