ಖಾಲಿ ಹೊಟ್ಟೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ!

ಹೊಟ್ಟೆ ತುಂಬಿದಾಗಲೇ ಪ್ರಮುಖ ನಿರ್ದಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಏಕೆಂದರೆ ಊಟಕ್ಕೂ ಮುಂಚಿತವಾಗಿ ಬಿಡುಗಡೆಯಾಗುವ ಘ್ರೆಲಿನ್ ಎಂಬ ಹಾರ್ಮೋನು ಹಸಿವೆಯನ್ನು ಹೆಚ್ಚಿಸುವುದಷ್ಟೇ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಹೊಟ್ಟೆ ತುಂಬಿದಾಗಲೇ ಪ್ರಮುಖ ನಿರ್ದಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಏಕೆಂದರೆ ಊಟಕ್ಕೂ ಮುಂಚಿತವಾಗಿ ಬಿಡುಗಡೆಯಾಗುವ ಘ್ರೆಲಿನ್ ಎಂಬ ಹಾರ್ಮೋನು ಹಸಿವೆಯನ್ನು ಹೆಚ್ಚಿಸುವುದಷ್ಟೇ ಅಲ್ಲ ನಿರ್ಧಾರ ತೆಗೆದುಕೊಳ್ಳುವುದರ ಮತ್ತು ಉದ್ವೇಗ ನಿಯಂತ್ರಣಕ್ಕೂ ಇದು ಪ್ರಭಾವ ಬೀರುತ್ತದೆ ಎಂದಿದ್ದಾರೆ ಸಂಶೋಧಕರು.

"ಮೊದಲ ಬಾರಿಗೆ, ಊಟಕ್ಕೆ ಮುಂಚಿತವಾಗಿ ಅಥವಾ ಉಪವಾಸ ಇರುವಾಗ ಘ್ರೆಲಿನ್ ಹಾರ್ಮೋನು ಹೆಚ್ಚಾದಂತೆಲ್ಲಾ ಉದ್ವೇಗದಿಂದ ನಡೆದುಕೊಳ್ಳುವುದಕ್ಕೆ ಮತ್ತು ಸರಿಯಾದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಕುಂದಿಸುವುದಕ್ಕೆ ಕಾರಣವಾಗುತ್ತದೆ ಎಂದು ಸಾಬೀತುಪಡಿಸಿದ್ದೇವೆ" ಎಂದು ಸ್ವೀಡನ್ ನ ಗೋಥೆನ್ ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕ ರೋಲಿನಾ ಸ್ಕಿಬಿಕಾ ತಿಳಿಸಿದ್ದಾರೆ.

ಹಸಿವಿನ ಸಮಯಲ್ಲಿ ಘ್ರೆಲಿನ್ ಎಂಬ ಹಾರ್ಮೋನು ಹೊಟ್ಟೆಯೊಳಗೆ ವ್ಯುತ್ಪತ್ತಿಯಾಗುತ್ತದೆ. ಇಲಿಗಳ ಮೇಲೆ ನಡೆಸಿರುವ ಈ ಹೊಸ ಅಧ್ಯಯನದಲ್ಲಿ ಈ ಹಾರ್ಮೋನು ಉದ್ವೇಗ ನಿಯಂತ್ರಣ ಮತ್ತು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಋಣಾತ್ಮಕವಾಗಿ ಸ್ಪಂದಿಸುತ್ತದೆ ಎಂದು ತಿಳಿದುಬಂದಿದೆ.

'ಗೋ' ಎಂಬ ಸನ್ನೆ ಮಾಡಿದಾಗ ಸ್ವಿಚ್ ಅನ್ನು ಒತ್ತುವಂತೆ ಮತ್ತು 'ನೋ-ಗೋ' ಎಂಬ ಸನ್ನೆ ಮಾಡಿದಾಗ ಸ್ವಿಚ್ ಅನ್ನು ಒತ್ತುವುದರಿಂದ ತಡೆಯುವಂತೆ ಇಲಿಗಳಿಗೆ ತರಬೇತಿ ನೀಡಬಹುದಾಗಿದೆ. ಹಾಗೆ ಮಾಡಿದಾಗ ಅವುಗಳಿಗೆ ಸಕ್ಕರೆ ಉಂಡೆ ನೀಡಿ ಪುರಸ್ಕರಿಸಿ ತರಬೇತಿ ನೀಡಲಾಗುತ್ತದೆ. ಶಬ್ದ ಮಾಡಿಯೋ ಅಥವಾ ಬೆಳಕು ನಿಡೀಯೋ ಈ ಸನ್ನೆಗಳನ್ನು ಮಾಡಲಾಗುತ್ತದೆ.

'ನೋ-ಗೋ' ಸನ್ನೆ ಮಾಡಿದಾಗ ಕೂಡ ಸ್ವಿಚ್ ಒತ್ತುವುದು ಇಲಿಗಳಲ್ಲಿ ಉದ್ವೇಗದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ನೇರವಾಗಿ ಇಲಿಗಳ ಮೆದುಳಿಗೆ ಘ್ರೆಲಿನ್ ನೀಡಿ, 'ನೋ-ಗೋ' ಸನ್ನೆ ಮಾಡಿದಾಗ ಕೂಡ ಬಹಳಷ್ಟು ಬಾರಿ ಸ್ವಿಚ್ ಒತ್ತಿರುವುದು ತಿಳಿದುಬಂದಿದೆ. ಇದು ಸಕ್ಕರೆ ಉಂಡೆಯನ್ನು ಕಳೆದುಕೊಂಡ ನಂತರವೂ ಈ ತಪ್ಪನ್ನು ಇಲಿಗಳು ಎಸಗಿವೆ.

ಹೆಚ್ಚೆಚ್ಚು ಘ್ರೆಲಿನ್ ನೀಡಿದಂತೆ, ಪುರಸ್ಕಾರದ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದೆ ಇಲಿಗಳು ಸ್ವಿಚ್ ಒತ್ತಿವೆ ಎಂದಿರುವ ಈ ಅಧ್ಯಯನವನ್ನು ನ್ಯೂರೋಸೈಕೋಫಾರ್ಮಕಾಲಜಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com