ನವದೆಹಲಿ: ನ್ಯೂಸ್ ಪೇಪರ್ ಗಳಲ್ಲಿರುವ ಶಾಹಿ ಆಹಾರ ಪದಾರ್ಥಗಳಿಗೆ ಅಂಟಿಕೊಂಡು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಭಜ್ಜಿ, ಬೊಂಡ ವಡೆ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಕಟ್ಟಿಕೊಡಬಾರದು ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ಕ್ರಮ ಕೈಗೊಳ್ಳಬೇಕು ಎಂದು ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚಿಸಿದೆ.
ಈ ಸಂಬಂಧ ಎಲ್ಲಾ ಆಹಾರ ಉದ್ಯಮಿಗಳು ವಿಶೇಷವಾಗಿ ಸಂಘಟಿತವಲ್ಲದ ಆಹಾರ ಮಾರಾಟಗರರು, ಗ್ರಾಹರಿಗೆ ನ್ಯೂಸ್ ಪೇಪರ್ ಗಳಲ್ಲಿ ಆಹಾರ ಪದಾರ್ಥ ಪ್ಯಾಕ್ ಮಾಡಿಕೊಡದಂತೆ ಸುತ್ತೊಲೆ ನೀಡುವಂತೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಫ್ ಎಸ್ ಎಸ್ಎ ಐ ಆಯುಕ್ತರು ಸೂಚಿಸಿದ್ದಾರೆ.
ನ್ಯೂಸ್ ಪೇಪರ್ ಗಳಲ್ಲಿ ಆಹಾರ ಪದಾರ್ಥಗಳನ್ನು ಕಟ್ಟಿಕೊಟ್ಟು ಅದನ್ನು ಬಳಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾರಾಟಗಾರರಿಗೆ ಜಾಗೃತಿ ಮೂಡಿಸಬೇಕು ಎಂದು ಎಫ್ ಎಸ್ ಎಸ್ ಎಐ ಪತ್ರದಲ್ಲಿ ತಿಳಿಸಿದೆ.
ನ್ಯೂಸ್ ಪೇಪರ್ ಗಳಲ್ಲಿ ಆಹಾರ ಕಟ್ಟಿಕೊಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ಆದರೆ ಇದು ಸುರಕ್ಷತಾ ವಿಧಾನವಲ್ಲ. ನ್ಯೂಸ್ ಪೇಪರ್ ನಲ್ಲಿರುವ ಇಂಕ್ ರಸಾಯನಿಕ ವಸ್ತುವಾಗಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಈ ಸಂಬಂಧ ಆಹಾರ ಮಾರಾಟಗಾರರಿಗೆ ಜಾಗೃತಿ ಮೂಡಿಸಬೇಕು, ನ್ಯೂಸ್ ಪೇಪರ್ ನಲ್ಲಿ ಆಹಾರ ಪದಾರ್ಥ ಪ್ಯಾಕ್ ಮಾಡುವುದನ್ನು ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಸೂಚಿಸಿದೆ.
Advertisement