ತಾರತಮ್ಯ ಭಾವನೆಯಿಂದ ನಿದ್ರಾಹೀನತೆ

ನಿದ್ರಾಹೀನತೆಗೆ ಹಲವಾರು ಕಾರಣಗಳಿರುತ್ತವೆ. ಒತ್ತಡದ ಜೀವನ ಶೈಲಿ ಒಂದು ರೀತಿಯ ಕಾರಣವಾದರೆ ಮತ್ತೊಂದು ಪ್ರಮುಖ ಕಾರಣ ತಾರತಮ್ಯ ಭಾವನೆ ಎದುರಿಸುವುದು ಎನ್ನುತ್ತಿದೆ ಹೊಸ ಸಂಶೋಧನಾ ವರದಿ.
ತಾರತಮ್ಯ ಭಾವನೆಯಿಂದ ನಿದ್ರಾಹೀನತೆ
ತಾರತಮ್ಯ ಭಾವನೆಯಿಂದ ನಿದ್ರಾಹೀನತೆ
Updated on
ನ್ಯೂಯಾರ್ಕ್: ನಿದ್ರಾಹೀನತೆಗೆ ಹಲವಾರು ಕಾರಣಗಳಿರುತ್ತವೆ. ಒತ್ತಡದ ಜೀವನ ಶೈಲಿ ಒಂದು ರೀತಿಯ ಕಾರಣವಾದರೆ ಮತ್ತೊಂದು ಪ್ರಮುಖ ಕಾರಣ ತಾರತಮ್ಯ ಭಾವನೆ ಎದುರಿಸುವುದು ಎನ್ನುತ್ತಿದೆ ಹೊಸ ಸಂಶೋಧನಾ ವರದಿ. 
ಅಮೆರಿಕದ ವೆಸ್ಟ್ ವರ್ಜಿನಿಯಾ ವಿಶ್ವವಿದ್ಯಾನಿಲಯದಲ್ಲಿ 441 47 ವರ್ಷದ ವರೆಗಿನ ಮಧ್ಯಮ ವಯಸ್ಕರನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಮೂರನೇ ಒಂದು ಭಾಗದಷ್ಟು ಸಂದರ್ಶಕರು ಜನಾಂಗಿಯ ಸೇರಿದಂತೆ ವಿವಿಧ ರೀತಿಯ  ತಾರತಮ್ಯ ಮನೋಭಾವನೆಯಿಂದಾಗಿ ನಿದ್ದೆ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ನಿದ್ದೆಯ ಕ್ರಮಗಳನ್ನು ಅರಿಯಲು ಸಹಕಾರಿಯಾಗುವಂತೆ ಸಮೀಕ್ಷೆಗೊಳಪಟ್ಟವರಿಗೆ ಆಕ್ಟಿವಿಟಿ ಮಾನಿಟರ್ ಡಿವೈಸ್ ನ್ನು ಅಳವಡಿಸಲಾಗಿದ್ದು ಓರ್ವ ವ್ಯಕ್ತಿ ಹಾಸಿಗೆಯಲ್ಲಿ ಕಳೆದ ಸಮಯ ಹಾಗೂ ನಿದ್ರಿಸಿದ ಸಮಯದ ಆಧಾರದಲ್ಲಿ ನಿದ್ರಾ ಕ್ಷಮೆತೆಯನ್ನು ಅಂದಾಜಿಸಲಾಗಿದೆ.  
ತಾರತಮ್ಯದ ಭಾವನೆ ಮಧ್ಯಮ ವಯಸ್ಸಿನವರಲ್ಲಿ ಕಂಡುಬರುವ ನಿದ್ರಾಹೀನತೆಗೆ ಇರುವ ಪ್ರಮುಖ ಕಾರಣಗಳಲ್ಲಿ ಒಂದು.  ಪ್ರತಿದಿನವೂ ತಾರತಮ್ಯ, ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಬಗ್ಗೆ ಸಮೀಕ್ಷೆಗೊಳಪಟ್ಟವರನ್ನು ಪ್ರಶ್ನಿಸಲಾಗಿದೆ ಎಂದು ವಿವಿಯ ಸಂಶೋಧಕರು ತಿಳಿಸಿದ್ದಾರೆ. ಸಮೀಕ್ಷೆಗೊಳಪಟ್ಟವರ ಪೈಕಿ ಮೂರನೇ ಒಂದು ಭಾಗದಷ್ಟು ಜನರು ತಾರತಮ್ಯದ ಮನೋಭಾವನೆಯಿಂದ ನಿದ್ದೆ ಬರುತ್ತಿಲ್ಲ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com