ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಪುರುಷರಿಗಿಂತ ನೆನಪು ಶಕ್ತಿ ಹೆಚ್ಚು: ಅಧ್ಯಯನ

ಹೆಚ್ಚು ನೆನಪು ಶಕ್ತಿ ಕೌಶಲ್ಯದ ವಿಚಾರ ಬಂದಾಗ ಮಹಿಳೆಯರು ಪುರುಷರಿಗಿಂತ ಹೆಚ್ಚು ಅಂಕ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ನ್ಯೂಯಾರ್ಕ್: ಹೆಚ್ಚು ನೆನಪು ಶಕ್ತಿ ಕೌಶಲ್ಯದ ವಿಚಾರ ಬಂದಾಗ ಮಹಿಳೆಯರು ಪುರುಷರಿಗಿಂತ ಹೆಚ್ಚು ಅಂಕ ಗಳಿಸುತ್ತಾರೆ ಎಂದು ಸಂಶೋಧನೆಯೊಂದು ಹೇಳುತ್ತದೆ.
ಆದರೂ ಕೂಡ, ಮಹಿಳೆಯರ ಲೈಂಗಿಕ ಹಾರ್ಮೋನ್ ಆದ ಈಸ್ಟ್ರೋಜಿನ್ ಮಟ್ಟ ಕಡಿಮೆಯಾಗುವ ಹಂತದಲ್ಲಿ ಅಥವಾ ಮಹಿಳೆಯರ ಋತುಚಕ್ರ ನಿಲ್ಲುವ ಹಂತದಲ್ಲಿ ಮಹಿಳೆಯರ ನೆನಪು ಶಕ್ತಿ ಕೂಡ ಮಾಸಲು ಆರಂಭವಾಗುತ್ತದೆ.
ಮನುಷ್ಯನ ವಯಸ್ಸು ಮತ್ತು ನೆನಪು ಶಕ್ತಿ ಕುಂದುವಿಕೆ ಮಧ್ಯೆ ಸಂಬಂಧವಿದೆ. ಮೆನೊಪಾಸ್ ಎಂಬ ವೃತ್ತಪತ್ರಿಕೆಯಲ್ಲಿ ಈ ಬಗ್ಗೆ ನಡೆಸಲಾದ ಅಧ್ಯಯನ ಪ್ರಕಟಗೊಂಡಿದ್ದು, ಮಹಿಳೆಯರು ಋತುಮತಿಯಾಗುವುದು ನಿಂತಾಗ ಮರೆಗುಳಿತನ ಜಾಸ್ತಿಯಾಗಿ ಮೆದುಳು ಚಟುವಟಿಕೆ ಕಡಿಮೆಯಾಗುತ್ತದೆ. ಅಲ್ಲದೆ ಪುರುಷರಿಗೆ ಹೋಲಿಸಿದರೆ  ಪುರುಷರು ಹೋಲಿಸಿದರೆ ಮಹಿಳೆಯರಲ್ಲಿ ನೆನಪಿನ ಕೊರತೆ ಮತ್ತು ಬುದ್ಧಿಮಾಂದ್ಯತೆ ಅಪಾಯ ಜಾಸ್ತಿ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಅಲ್ಲದೆ, ಈಸ್ಟ್ರೋಜಿನ್ ಹಾರ್ಮೋನ್ ಗಳು ಮಧ್ಯವಯಸ್ಸಿನಲ್ಲಿ ಮಹಿಳೆಯರಲ್ಲಿ ಕಡಿಮೆಯಾಗುವುದರಿಂದ ಆರಂಭದ ಹಂತದ ಕಲಿಕೆ ಮತ್ತು ನೆನಪು ಸಂಗ್ರಹ ಮತ್ತು ಬಲವರ್ಧನೆ ನಿರ್ವಹಣೆ ಸಂದರ್ಭದಲ್ಲಿ ಹಿಂದಿನ ವಿಷಯಗಳನ್ನು ಪುನಃ, ನೆನಪಿಸಿಕೊಳ್ಳುವ ಪ್ರಮಾಣದ ಮಟ್ಟ ಕಡಿಮೆಯೆನ್ನುತ್ತದೆ ಅಧ್ಯಯನ.
ಈ ಎಲ್ಲಾ ಕೊರತೆಗಳ ನಡುವೆಯೂ ಮಧ್ಯ ವಯಸ್ಸಿನ ಮಹಿಳೆಯರು ಅವರ ವಯೋಮಾನದ ಪುರುಷರಿಗೆ ಹೋಲಿಕೆ ಮಾಡಿದರೆ ನೆನಪು ಶಕ್ತಿ ಪ್ರಮಾಣ ಹೆಚ್ಚು ಎನ್ನುತ್ತದೆ ಸಂಶೋಧನೆ.
ಮೆದುಳು ಜಡತ್ವ ಮತ್ತು ನೆನಪಿನ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಏಕೆಂದರೆ ನೆನಪಿನ ಕೊರತೆ ಜೊತೆ ಇದು ಸಂಬಂಧ ಹೊಂದಿರುತ್ತದೆ ಎನ್ನುತ್ತಾರೆ ಜಾನ್ ಪಿಂಕರ್ಟಾನ್ ಎಂಬ ನಾರ್ಥ್ ಅಮೆರಿಕಾದ ಮೆನೊಪಾಸ್ ಸೊಸೈಟಿಯ ಕಾರ್ಯಕಾರಿ ನಿರ್ದೇಶಕ.
ಅಧ್ಯಯನಕ್ಕೆ 45ರಿಂದ 55 ವರ್ಷ ವಯಸ್ಸಿನ 212 ಮಂದಿ ಪುರುಷರು ಮತ್ತು ಮಹಿಳೆಯರನ್ನು ಬಳಸಿಕೊಳ್ಳಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com