ಕ್ಯಾನ್ಸರ್ ರೋಗಿಗಳ ಸಾವಿಗೆ ರಕ್ತ ಹೆಪ್ಪುಗಟ್ಟುವಿಕೆ ಕಾರಣ: ಸಂಶೋಧನೆ

ಕೀಮೋಥೆರಪಿ ಚಿಕಿತ್ಸೆ ವೇಳೆ ರಕ್ತ ಹೆಪ್ಪು ಗಟ್ಟುವುದು ಕ್ಯಾನ್ಸರ್ ರೋಗಿಗಳು ಸಾವನ್ನಪ್ಪಲು ಕಾರಣ ಎಂದು ನ್ಯೂಜಿಲೆಂಡ್ ವಿಜ್ಞಾನಿಗಳ ಸಂಶೋಧನೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವೆಲ್ಲಿಂಗ್ಟನ್: ಕೀಮೋಥೆರಪಿ ಚಿಕಿತ್ಸೆ ವೇಳೆ ರಕ್ತ ಹೆಪ್ಪು ಗಟ್ಟುವುದು ಕ್ಯಾನ್ಸರ್ ರೋಗಿಗಳು  ಸಾವನ್ನಪ್ಪಲು ಕಾರಣ ಎಂದು ನ್ಯೂಜಿಲೆಂಡ್ ವಿಜ್ಞಾನಿಗಳ ಸಂಶೋಧನೆ ತಿಳಿಸಿದೆ.

ಕೀಮೋಥೆರಪಿ ರೋಗಿಯಲ್ಲಿನ ಕ್ಯಾನ್ಸರ್ ಕೋಶಗಳಿಂದ ಸಣ್ಣ ಸಣ್ಣ ಗುಳ್ಳೆಗಳು ಬಿಡುಗಡೆ ಮಾಡುತ್ತದೆ. ಇದು ರಕ್ತ ಹೆಪ್ಪುಗಟ್ಟಲು ಕಾರಣವಾಗುತ್ತದೆ ಎಂದು ಒಟಾಗೋ ವಿವಿ ಸಂಶೋಧಕರು ಕಂಡು ಹಿಡಿದಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಅಂಗಗಳಲ್ಲಿ ಗೆಡ್ಡೆಗಳು ಬೆಳೆಯುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲದ ಕಾರಣ ಹೆಚ್ಚಿನ ಕ್ಯಾನ್ಸರ್ ರೋಗಿಗಳು ಸಾವನ್ನಪ್ಪುತ್ತಾರೆ. ಜೊತೆಗೆ ರಕ್ತ ಹೆಪ್ಪು ಗಟ್ಟುವುದು ಕೂಡ ಕ್ಯಾನ್ಸರ್ ರೋಗಿಗಳ ಸಾವಿಗೆ ಮತ್ತೊಂದು ಕಾರಣ ಎಂದು ಹೇಳಿದ್ದಾರೆ.

ಪ್ರಮುಖ ಅಂಗಗಳಿಗೆ ರಕ್ತ ಹಾಗೂ ಆಮ್ಲಜನಕ ಸರಬರಾಜು ಮಾಡುವ ದೊಡ್ಡ ರಕ್ತ ನಾಳಗಳನ್ನು ಹೆಪ್ಪುಗಟ್ಟುವ ರಕ್ತ ಬ್ಲಾಕ್ ಮಾಡುತ್ತದೆ.

ಜೀವ ಉಳಿಸಲು ನಡೆಸುವ ಕೀಮೋಥೆರಪಿ ಕ್ಯಾನ್ಸರ್ ರೋಗಿಗಳಲ್ಲಿ 6-ರಿಂದ 7 ಪಟ್ಟು ಹೆಚ್ಚು ರಕ್ತ ಹೆಪ್ಪು ಗಟ್ಟಲು ಕಾರಣವಾಗುತ್ತದೆ. ಕ್ಯಾನ್ಸರ್ ಮತ್ತು ಅದರಿಂದ ರಕ್ತ ಹೆಪ್ಪುಗಟ್ಟುವುದು ಸುಮಾರು 100 ವರ್ಷಗಳಿಂದಲೂ ಇದೆ. ಕೀಮೋ ಥೆರಪಿ ಮಾಡುವಾಗ ಬಿಡುಗಡೆಗೊಳ್ಳುವ ಸಣ್ಣ ಸಣ್ಣ ಬಬಲ್ ಗಳು ಪೊರೆಯಲ್ಲಿ ರಕ್ತ ಹೆಪ್ಪುಗೊಳ್ಳುವಂತೆ ಮಾಡುತ್ತವೆ ಎಂದು ಸಹಾಯಕ ಪ್ರಾಧ್ಯಾಪಕ ಅಲೆಕ್ಸ್ ಮೆಕೆಲ್ಲಾನ್ ತಿಳಿಸಿದ್ದಾರೆ.

ಶ್ವಾಸಕೋಶ, ಬ್ರೈನ್ ಕ್ಯಾನ್ಸರ್  ರೋಗಿಗಳಲ್ಲಿ ಈ ರಕ್ತ ಹೆಪ್ಪು ಗಟ್ಟುವಿಕೆಯಿಂದ ಹೆಚ್ಚಿನ ಪ್ರಮಾಣದ ಅಪಾಯ ತಂದೊಡ್ಡುತ್ತವೆ ಎಂದು ಹೇಳಿದೆ. ರಕ್ತ ಹೆಪ್ಪು ಗಟ್ಟುವಿಕೆಯೇ ಕೀಮೋಥೆರಪಿ ವೇಳೆ ಕ್ಯಾನ್ಸರ್ ರೋಗಿಗಳು ಸಾವನ್ನಪ್ಪಲು ಕಾರಣ ಎಂಬುದನ್ನು ಸಂಶೋಧನೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com