ನಿಮಗೆ ಶ್ವಾಸಕೋಶದ ಸಮಸ್ಯೆ ಇದ್ದಲ್ಲಿ ರಾತ್ರಿ ಹೊತ್ತು ಈ ಲಕ್ಷಣಗಳು ಕಾಣಿಸಬಹುದು

ಕ್ರೋನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ), ಶ್ವಾಸಕೋಶದ ಒಳಗಿನ ವಾತಾವರಣವನ್ನು ಹಾನಿ ಮಾಡುವ ಒಂದು ಸ್ಥಿತಿ ಎದೆ ಬಿಗಿತ, ಉಸಿರುಗಟ್ಟುವಿಕೆ, ಉಬ್ಬಸ ಮತ್ತು ನಿರಂತರ ಕೆಮ್ಮು ಮುಂತಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ
ಶ್ವಾಸಕೋಶದ ಸಮಸ್ಯೆಯ ರಾತ್ರಿ ವೇಳೆಯ ಲಕ್ಷಣಗಳು
ಶ್ವಾಸಕೋಶದ ಸಮಸ್ಯೆಯ ರಾತ್ರಿ ವೇಳೆಯ ಲಕ್ಷಣಗಳು
ಹೊಸದಿಲ್ಲಿ: ಕ್ರೋನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ), ಶ್ವಾಸಕೋಶದ ಒಳಗಿನ ವಾತಾವರಣವನ್ನು ಹಾನಿ ಮಾಡುವ ಒಂದು ಸ್ಥಿತಿ ಎದೆ ಬಿಗಿತ, ಉಸಿರುಗಟ್ಟುವಿಕೆ, ಉಬ್ಬಸ ಮತ್ತು ನಿರಂತರ ಕೆಮ್ಮು ಮುಂತಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ, ಇದು ದೇಹದಲ್ಲಿನ ರೋಗನಿರೋಧಕತೆ ಕಡಿಮೆ ಮಾಡುವುದಲ್ಲದೆ ರೋಗಿಯ ಸಾವಿಗೂ ಪ್ರಮುಖ ಕಾರಣವಾಗಲಿದೆ.
ಭಾರತದಲ್ಲಿ, ಸಿಒಪಿಡಿ, ಕಾರಣದಿಂದ ಐದು ಲಕ್ಷ ಮಂದಿ ಸಾವನ್ನಪ್ಪಿದ್ದಾರೆ, ಈ ರೋಗದ ಕಾರಣದಿಂದ ಅಮೇರಿಕಾ ಮತ್ತು ಯುರೋಪಿನಲ್ಲಿ ಸಾಯುತ್ತಿರುವ ಜನರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿದೆ. 2016 ರ ವರ್ಷದಲ್ಲಿ 57 ಮಿಲಿಯನ್ ಗಿಂತ ಹೆಚ್ಚು ಜನರು ಇದರಿಂದ ಬಳಲುತ್ತಿದ್ದರೆಂದು ಅಂದಾಜಿಸಲಾಗಿದೆ, ದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ರೋಗಗಳಲ್ಲಿ ಸಿಒಪಿಡಿ  ಒಂದಾಗಿದೆ.
ಸುಮಾರು ಶೇ. 75 ನಷ್ಟು ರೋಗಿಗಳ ಮೇಲೆ ಪರಿಣಾಮ ಬೀರುವ ಸಿಒಪಿಡಿ, ಯ ಒಂದು ಪ್ರಮುಖ ಅಂಶವೆಂದರೆ, ರಾತ್ರಿಯ ಅಸಹಜತೆ, ಇದು ವೈದ್ಯರ ಗಮನಕ್ಕೆ ಸಹ ಬರುವುದಿಲ್ಲ. ನೈಟ್ ಸಿಂಡ್ರೋಮ್ ಎನ್ನುವುದು ಸಿಒಪಿಡಿಯ ಲಕ್ಷಣವಾಗಿದೆ, ಆದರೆ ರೋಗಿಗಳು ಸಹ ತಾವು ಇದನ್ನು ವೈದ್ಯರಿಗೆ ವರದಿ ಮಾಡುವುದಿಲ್ಲ, ಹೀಗಾಗಿ ಈ ರೋಗವು ಅವರ ಒಟ್ಟಾರೆ ಆರೋಗ್ಯದ ಮೇಲೆ ಹಾನಿಕರ ಪರಿಣಾಮ ಬೀರುತ್ತವೆ.
ಸಿಒಪಿಡಿ,ನೈಟ್ ಸಿಂಡ್ರೋಮ್ ನ್ನು  ವಿವರಿಸುತ್ತಾ ಪಲ್ಮೊನಾಲಜಿಸ್ಟ್, ಸಂಸ್ಥಾಪಕ ಡಾ. ಪಿಪಿ ಬೋಸ್, ಸಾನ್ಸ್ "ನಿದ್ರೆಯಲ್ಲಿ ಸಾಮಾನ್ಯವಾಗಿ ನಮ್ಮ ಉಸಿರಾಟದ ಬದಲಾಗುತ್ತದೆ ಸ್ನಾಯುಗಳ ವಿಶ್ರಾಂತಿ ಕಾರಣದಿಂದಾಗಿ ಸ್ವಲ್ಪವೇ ಗಾಳಿಪಟ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿಯಲ್ಲಿ, ದೇಹದ ಒಟ್ಟಾರೆ ಶಾಂತ ಸ್ಥಿತಿ ಮತ್ತು ಕಡಿಮೆ ಆಮ್ಲಜನಕದ ಬೇಡಿಕೆಯಿಂದಾಗಿ ಅವನ ಉಸಿರಾಟದ ವೇಗವು ಸಾಮಾನ್ಯವಾಗಿರುತ್ತದೆ ಆದರೆ ಸಿಒಪಿಡಿ ಯಿಂದ ಬಳಲುತ್ತಿರುವ ಜನರಲ್ಲಿ ಈ ಬದಲಾವಣೆಯು ಅಧಿಕ ಸವಾಲನ್ನು ಒಡ್ಡುತ್ತದೆ ಏಕೆಂದರೆ ಅವರ ಶ್ವಾಸಕೋಶದ ಗಾಳಿಯ ಹರಿವು ಈಗಾಗಲೇ ನಿರ್ಬಂಧಿಸಲ್ಪಟ್ಟಿರುತ್ತದೆ,ಆದ್ದರಿಂದ, ಉಸಿರಾಟದಲ್ಲಿ ಈ ನೈಟ್ ಸಿಂಡ್ರೋಮ್ ತಕ್ಷಣದ ಅಥವಾ ದೀರ್ಘಕಾಲದ ರೋಗಕ್ಕೆ ಕಾರಣವಾಗಬಹುದು. "
ರಾತ್ರಿಯ ಸಮಯ ರೋಗಲಕ್ಷಣದ ತಕ್ಷಣದ ಪರಿಣಾಮಗಳು ಆಯಾಸ ಮತ್ತು ಕಡಿಮೆ ಉಸಿರಾಟವನ್ನು  ಒಳಗೊಂಡಿರುತ್ತವೆ, ದೀರ್ಘಕಾಲೀನ ಪರಿಣಾಮಗಳು ಶ್ವಾಸಕೋಶ ಕ್ರಿಯೆಯ ಬದಲಾವಣೆಗಳನ್ನು ಒಳಗೊಂಡು , ಹೆಚ್ಚಿದ ಉಸಿರಾಟ ತೊಂದರೆಗಳು, ಉಸಿರು ಒಳ ಬರುವ ಹೊರ ಹೋಗುವ ಕ್ರಿಯೆಗೆ ಅಡಚಣೆ  ಅಥವಾ ಹೃದಯರಕ್ತನಾಳದ ಕಾಯಿಲೆ, ಖಿನ್ನತೆ, ಮತ್ತು ಸಾವನ್ನು  ಒಳಗೊಂಡಿರುತ್ತದೆ.
ನೈಟ್ ಸಿಂಡ್ರೋಮ್ ಮತ್ತು ನಿದ್ರಾ ಭಂಗ ಸಿಒಪಿಡಿ, ರೋಗಿಗಳಲ್ಲಿ ತುಂಬಾ ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ಸೂಚಿಸುತ್ತದೆ.
"ಅದರ ಗಂಭೀರವಾದ ಆರೋಗ್ಯ ಸಮಸ್ಯೆ ಮತ್ತು ಒಟ್ಟಾರೆ ಸಿಒಪಿಡಿ, ನಿರ್ವಹಣೆಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ, ಪ್ರಮುಖ ಸೂಚಕದಂತೆ ನೈಟ್ ಸಿಂಡ್ರೋಮ್ ಕಾಣಿಸಿದೊಡನೆ ಎಚ್ಚರದ ಕ್ರಮಗಳನ್ನು  ತೆಗೆದುಕೊಳ್ಳಬೇಕು. ಸಿಒಪಿಡಿ ಯಲ್ಲಿ ಬೆಳಿಗ್ಗೆ ಮತ್ತು ರಾತ್ರಿ ರೋಗಲಕ್ಷಣಗಳಲ್ಲಿ ಗಮನಾರ್ಹ ವ್ಯತ್ಯಾಸವಿದೆ. ಬೆಳಿಗ್ಗೆ ರೋಗಲಕ್ಷಣವು ಶ್ವಾಸಕೋಶ ಮತ್ತು ಕೆಮ್ಮು ಹೆಚ್ಚಳವನ್ನು ಉಂಟು ಮಾಡಿದ್ದರೆ, ರಾತ್ರಿಯಲ್ಲಿ ಅದು ಉಬ್ಬಸ, ಎದೆ ಬಿಗಿತ, ಆಗಾಗ್ಗೆ ನಿದ್ರಾ ಭಂಗ, ನಿದ್ರಾಹೀನತೆ ಮತ್ತು ನಿದ್ರಾ ಅವಧಿಯನ್ನು ಕಡಿತಗೊಳಿಸುವುದು ಇದೆಲ್ಲವನ್ನೂ ಹೊಂದಿರುತ್ತದೆದೆ. ಆದ್ದರಿಂದ,ಪರಿಣಾಮಕಾರಿ ಚಿಕಿತ್ಸೆಯ ನಿಯಮ ಅನುಸಾರ ಎರಡೂ ರೋಗಲಕ್ಷಣಗಳನ್ನು ಗಮನಿಸಿ ಚಿಕಿತ್ಸೆ ಪಡೆಯಬೇಕು, "ಹೈದರಾಬಾದ್ ನ ಅಪೊಲೊ ಹಾಸ್ಪಿಟಲ್ ನ ಶ್ವಾಸಕೋಶ ಶಾಸ್ತ್ರಜ್ಞ, ಡಾ.ಆರ್. ವಿಜಿಕುಮಾರ್ ಹೇಳುತ್ತಾರೆ.
ಆದ್ದರಿಂದ ಸಿಒಪಿಡಿ ರೋಗಿಗಳಿಗೆ ಚಿಕಿತ್ಸೆ ಪಡೆಯುವುದಕ್ಕೆ ಬಂದಾಗ, ನೈಟ್ ಸಿಂಡ್ರೋಮ್ ನ ಲಕ್ಷಣವನ್ನು ನಿರ್ವಹಿಸುವ ಮೂಲಕ ಸರಿಯಾಗಿ ನಿದ್ರ ಬರುವಂತೆ ಚಿಕಿತ್ಸೆ ನೀಡುವುದು ಬಹಳ ಮುಖ್ಯ . ಇದಕ್ಕಾಗಿ, ನಿದ್ರೆಯ ತೊಂದರೆಗೆ ಔಷಧಿ ನೀಡುವುದರಿಂದ ಶ್ವಾಸಕೋಶ ಸಂಬಂಧ ರೋಗಗಳಿಗೆ ಬಹಳ ಪರಿನಾಮಕಾರಿ ಚಿಕಿತ್ಸೆ ನೀಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com