ಸ್ಟೆತಾಸ್ಕೋಪ್ ಬಳಸುವ ಮುನ್ನ ನೋಡಿ, ಕೊಳಕಾಗಿದ್ದರೆ ರೋಗಾಣು ಹರಡುವುದು ಗ್ಯಾರಂಟಿ!

ನಿಮಗೆ ಆರೋಗ್ಯವಿಲ್ಲವೆಂದು ಆಸ್ಪತ್ರೆಗೆ ಹೋದಾಗ ವೈದ್ಯರು ಸ್ವಚ್ಛವಾಗಿರುವ ಸ್ಟೆತೊಸ್ಕೋಪ್ ನಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ನಿಮಗೆ ಆರೋಗ್ಯವಿಲ್ಲವೆಂದು ಆಸ್ಪತ್ರೆಗೆ ಹೋದಾಗ ವೈದ್ಯರು ಸ್ವಚ್ಛವಾಗಿರುವ ಸ್ಟೆತಾಸ್ಕೋಪ್ ನಿಂದ ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾರ ಎಂದು ಪರೀಕ್ಷಿಸಿಕೊಳ್ಳಿ. ಶುಚಿಯಾಗಿರದ ಸ್ಟೆತಾಸ್ಕೋಪ್ ನಲ್ಲಿ ಪ್ರತಿಜೀವಕ ನಿರೋಧಕ ಬ್ಯಾಕ್ಟೀರಿಯಾಗಳು ಇರುವ ಸಾಧ್ಯತೆಯಿರುತ್ತದೆ.
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಸೋಂಕು ನಿಯಂತ್ರಣ ಮಾರ್ಗಸೂಚಿ ಪ್ರಕಾರ, ಮರುಬಳಕೆ ಮಾಡುವ ವೈದ್ಯಕೀಯ ಸಲಕರಣೆಗಳು ಸೋಂಕುರಹಿತವಾಗಿರಬೇಕು.
ಸ್ಟೆತಾಸ್ಕೋಪ್ ನ ಸ್ವಚ್ಛತೆ ಮುಖ್ಯವಾಗಿದ್ದರೂ ಕೂಡ ವೈದ್ಯರು ಅದರ ನೈರ್ಮಲ್ಯಕ್ಕೆ ಕಡಿಮೆ ಆದ್ಯತೆ ನೀಡುತ್ತಾರೆ ಎಂದು ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಸ್ಟೆತಾಸ್ಕೋಪ್ ಶುಚಿಯಾಗಿಲ್ಲದಿದ್ದರೆ ರೋಗಿಗಳಿಗೆ ಇನ್ನಷ್ಟು ಖಾಯಿಲೆಗಳು, ಸೋಂಕು, ಚರ್ಮದ ಸೋಂಕುಗಳು ಬರುವ ಸಾಧ್ಯತೆಯಿದೆ. ಪ್ರತಿ ರೋಗಿಗಳನ್ನು ತಪಾಸಣೆ ಮಾಡುವುದರಿಂದ ಸ್ಟೆತಾಸ್ಕೋಪ್ ನ್ನು ಹಗಲು-ರಾತ್ರಿಯೆನ್ನದೆ ವೈದ್ಯರು ಬಳಸುವುದರಿಂದ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗಿ ಅವು ಒಬ್ಬರಿಂದ ಮತ್ತೊಬ್ಬ ರೋಗಿಗೆ ಹರಡುವ ಸಾಧ್ಯತೆ ಹೆಚ್ಚು ಎಂದು ಅಮೆರಿಕಾದ ವರ್ಜೀನಿಯಾದ ಸೋಂಕು ನಿಯಂತ್ರಣ ಮತ್ತು ಎಪಿಡೆಮಿಯಾಲಜಿ ವೃತ್ತಿಪರರ ಸಂಘದ ಅಧ್ಯಕ್ಷ ಲಿಂಡಾ ಗ್ರೀನೆ ಹೇಳುತ್ತಾರೆ.
ಕೈಯ ಸ್ವಚ್ಛತೆಯನ್ನು ನಿರ್ಲಕ್ಷಿಸಿದಷ್ಟೇ ಸ್ಟೆತಾಸ್ಕೋಪ್ ಸ್ವಚ್ಛವಾಗಿಲ್ಲದಿದ್ದರೆ ಅಷ್ಟೇ ಗಂಭೀರ ವಿಷಯ ಎನ್ನುತ್ತಾರೆ ಗ್ರೀನೆ.
ಅಮೆರಿಕಾದ ಇನ್ಫೆಕ್ಷನ್ ಕಂಟ್ರೋಲ್ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟಗೊಂಡಿದೆ. ಸ್ಟೆತಾಸ್ಕೋಪ್ ನೈರ್ಮಲ್ಯವನ್ನು ಎಲ್ಲಾ ಆಸ್ಪತ್ರೆ ಕೈ ನೈರ್ಮಲ್ಯ ಉಪಕ್ರಮಗಳಲ್ಲಿ ಸೇರಿಸಿಕೊಳ್ಳಬೇಕು ಮತ್ತು ವೈದ್ಯರಲ್ಲಿ, ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜವಾಬ್ದಾರಿ ಹೆಚ್ಚಿಸಬೇಕು ಎಂದು ಅಧ್ಯಯನದಲ್ಲಿ ಒತ್ತಾಯಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com