ಈಗಾಗಲೆ ನಿಮ್ಮ ದೇಹದಲ್ಲಿ ಗಾಯ, ನೋವು ಇದೆಯೇ? ಹಾಗಾದರೆ ಯೋಗ ಮಾಡುವ ಮುನ್ನ ಯೋಚಿಸಿ!

ಮನುಷ್ಯನ ದೇಹದ ನೋವು ಮತ್ತು ಖಾಯಿಲೆಗಳನ್ನು ವಾಸಿ ಮಾಡಲು ಬಹುತೇಕ ಮಂದಿ ಮಾಡುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ವಾಷಿಂಗ್ಟನ್: ಮನುಷ್ಯನ ದೇಹದ ನೋವು ಮತ್ತು ಖಾಯಿಲೆಗಳನ್ನು ವಾಸಿ ಮಾಡಲು ಬಹುತೇಕ ಮಂದಿ ಮಾಡುವ ಯೋಗದಿಂದ ಅಡ್ಡ ಪರಿಣಾಮಗಳು ಸಹ ಉಂಟಾಗುತ್ತದೆ ಎನ್ನುತ್ತಾರೆ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕರು.
ದೇಹದ ಒಂದು ಭಾಗದ ನೋವಿಗೆ ಮಾಡುವ ಯೋಗದ ಭಂಗಿಗಳಿಂದ ಇನ್ನೊಂದು ಭಾಗಗಳ ಮೇಲೆ ನೋವು ಉಂಟಾಗಬಹುದು ಎಚ್ಚರವಿರಲಿ ಎಂದು ಸಂಶೋಧಕರು ಹೇಳಿದ್ದಾರೆ. ಯೋಗದಿಂದ ಗಾಯಗಳಾಗುವ ಸಾಧ್ಯತೆಯಿರುವುದಲ್ಲದೆ ಈಗಿರುವ ಗಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಯೋಗದಿಂದ ಮಾಂಸಖಂಡಗಳ ನೋವು ಶೇಕಡಾ 10 ರಷ್ಟು ಜನರಲ್ಲಿ  ಮತ್ತು ಈಗಾಗಲೇ ನೋವು ಇರುವ ಜನರಲ್ಲಿ ಶೇಕಡಾ 21 ರಷ್ಟು ಮಂದಿಯಲ್ಲಿ ಜಾಸ್ತಿಯಾಗುತ್ತದೆ. ಮುಖ್ಯವಾಗಿ ಕಾಲಿನ ಮೇಲ್ಬಾಗದಲ್ಲಿ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ನೋವಿನ ತೀವ್ರತೆ ವಿಚಾರ ಬಂದಾಗ, ಯೋಗದಿಂದ ಬರುವ ಮೂರನೇ ಒಂದು ಭಾಗಕ್ಕಿಂತಲೂ ಅಧಿಕ ನೋವುಗಳು ಯೋಗ ಮಾಡುವುದನ್ನು ನಿಲ್ಲಿಸುವುದರಿಂದ ತಡೆಗಟ್ಟಬಹುದು.
ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿರುವ ಪ್ರಕಾರ, ಯೋಗ ಮಾಡುವವರು ಗಾಯಗಳುಂಟಾಗುವ ಅಪಾಯಗಳ ಬಗ್ಗೆ ಚರ್ಚೆ ನಡೆಸಬೇಕು ಮತ್ತು ಯಾವುದಾದರೂ ಮೊದಲಿನ ಗಾಯಗಳಿದ್ದರೆ ಯೋಗ ಬೋಧಕರು ಮತ್ತು ಭೌತಚಿಕಿತ್ಸಕರು ಸುರಕ್ಷಿತ ಯೋಗ ಭಂಗಿಗಳನ್ನು ಹೇಳಿಕೊಡಬೇಕೆನ್ನುತ್ತಾರೆ.
ಮೇಲ್ಭಾಗದ ತುದಿಗಳು (ಭುಜ, ಮೊಣಕೈ, ಮಣಿಕಟ್ಟು, ಕೈ) ಇತ್ಯಾದಿ ಭಾಗಗಳಿಗೆ ಯೋಗದಿಂದ ನೋವುಂಟಾದರೆ ಅದಕ್ಕೆ ಕೆಳಮುಖವಾಗಿ ನಾಯಿಯ ರೀತಿ ಹಾಗೂ ಅದೇ ಮಾದರಿಯ ಯೋಗದ ಭಂಗಿಗಳು ಕಾರಣವಾಗುತ್ತದೆ. ಇದು ಶರೀರದ ಮೇಲಿನ ಅವಯವಗಳಿಗೆ ಭಾರ ಹಾಕುತ್ತದೆ.
ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಶೇಕಡಾ 74ರಷ್ಟು ಮಂದಿ ಯೋಗದಿಂದ ಈಗಿರುವ ನೋವು ವಾಸಿಯಾಗಿದೆ ಎನ್ನುತ್ತಾರೆ. ಮಸ್ಕ್ಯುಲೋಸ್ಕೆಲಿಟಲ್ ನೋವು ಮತ್ತು ಯೋಗ ಅಭ್ಯಾಸದ ನಡುವಿನ ಸಂಕೀರ್ಣ ಸಂಬಂಧವನ್ನು ಇದು ಎತ್ತಿ ತೋರಿಸುತ್ತದೆ.
ಈ ತರಹದ ಅಧ್ಯಯನಗಳು ಸಾಮಾನ್ಯ ಜನತೆಗೆ ಮತ್ತು ವೈದ್ಯರಿಗೆ ಉಪಯೋಗವಾಗಲಿದೆ. ಅವರವರ ದೇಹಕ್ಕೆ ಯಾವ ಯೋಗ ಮತ್ತು ವ್ಯಾಯಾಮಗಳು ಹೊಂದಿಕೆಯಾಗುತ್ತದೆ ಎಂದು ತಿಳಿದುಕೊಳ್ಳಬಹುದು. ಸರಿಯಾದ ಸಮಯದಲ್ಲಿ ಸೂಕ್ತ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ಮತ್ತು ಯೋಗ ಆರಂಭಿಸುವ ಮುನ್ನ ಅದನ್ನು ಹೇಳಿಕೊಡುವವರಿಗೆ ನಮ್ಮ ದೇಹದ ನೋವು, ಗಾಯಗಳನ್ನು ಹೇಳುವುದರಿಂದ ಯೋಗದಿಂದ ಉಂಟಾಗುವ ನೋವನ್ನು ತಡೆಗಟ್ಟಬಹುದು. ಈ ಅಧ್ಯಯನವು ಬಾಡಿವರ್ಕ್ ಅಂಡ್ ಮೂವ್ಮೆಂಟ್ ಥೆರಪಿಸ್ ಜರ್ನಲ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com