ಮದ್ಯದ ಜೊತೆಗೆ ಎನರ್ಜಿ ಡ್ರಿಂಕ್ ಬೆರೆಸಿ ಕುಡಿಯುವುದು ಹೆಚ್ಚು ಹಾನಿಕಾರಕ: ಅಧ್ಯಯನ

ನಿಮಗೆ ಮದ್ಯದ ಜೊತೆಗೆ ಹೆಚ್ಚು ಕೆಫೇನ್ ಅಂಶ ಇರುವ ಎನರ್ಜಿ ಪಾನೀಯಗಳನ್ನು ಬೆರೆಸಿ ಕುಡಿಯುವುದಕ್ಕೆ ಇಷ್ಟವೇ? ಮದ್ಯ ಮಾತ್ರ ಕುಡಿಯುವುದಕ್ಕಿಂತಲೂ ಇದು ಹೆಚ್ಚು ಹಾನಿಕಾರಕ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಟೊರೊಂಟೊ: ನಿಮಗೆ ಮದ್ಯದ ಜೊತೆಗೆ ಹೆಚ್ಚು ಕೆಫೇನ್ ಅಂಶ ಇರುವ ಎನರ್ಜಿ ಪಾನೀಯಗಳನ್ನು ಬೆರೆಸಿ ಕುಡಿಯುವುದಕ್ಕೆ ಇಷ್ಟವೇ? ಮದ್ಯ ಮಾತ್ರ ಕುಡಿಯುವುದಕ್ಕಿಂತಲೂ ಇದು ಹೆಚ್ಚು ಹಾನಿಕಾರಕ ಎನ್ನುತ್ತದೆ ಅಧ್ಯಯನವೊಂದು. 
ಎರಡು ಪಾನೀಯಗಳನ್ನು ಬೇರೆಬೇರೆಯಾಗಿ ಬೆರಸಿ ಕುಡಿಯುವುದು ಅಥವಾ ಬಾರ್ ಗಳಲ್ಲಿ ಮೊದಲೇ ಬೆರೆಸಿಟ್ಟ ವಿಧಾನವು ಮದ್ಯಪಾನಿಯರಲ್ಲಿ ಚಾಲ್ತಿಯಲ್ಲಿದೆ. 
"ಮದ್ಯ ಕುಡಿದಾಗ ಉಂಟಾಗುವ ಪರಿಣಾಮವನ್ನು ಕೆಫೇನ್ ಅಂಶ ಮರೆಮಾಚುತ್ತದೆ" ಎಂದು ಕೆನಡಾದ ವಿಕ್ಟೊರಿಯಾ ವಿಶ್ವವಿದ್ಯಾಲಯದ ಅಧ್ಯಯನಕಾರ ಆದ್ರಾ ರೋಮರ್ ಹೇಳಿದ್ದಾರೆ. 
ಆಲ್ಕೋಹಾಲ್ ಮತ್ತು ಡ್ರಗ್ಸ್ ಅಧ್ಯಯನ ಜರ್ನಲ್ ನಲ್ಲಿ ಪ್ರಕಟವಾಗಿರುವ ಈ ವಿಸ್ತೃತ ಅಧ್ಯಯನದ ಪ್ರಕಾರ ಕೆಲವು ಉದ್ದೇಶಪೂರ್ವಕವಲ್ಲದ ಹಾನಿಗಳಿವೆ ಎನ್ನುತ್ತದೆ - ಅವುಗಳೆಂದರೆ ಬೀಳುವುದು, ಮೋಟಾರ್ ವಾಹನಗಳ ಅಪಘಾತ ಮತ್ತು ಕೆಲವು ಉದ್ದೇಶಪೂರ್ವಕ ಹಾನಿಕಾರಕ ಸಂಗತಿಗಳೆಂದರೆ ಹೊಡೆದಾಟ, ದೈಹಿಕ ಹಿಂಸೆ ಎಂದು ಪಟ್ಟಿ ಮಾಡಿದೆ. 
ಮದ್ಯವನ್ನು ಎನರ್ಜಿ ಪಾನೀಯಗಳ ಜೊತೆಗೆ ಬೆರೆಸಿ ಕುಡಿಯುವುದರಿಂದ ಅಪಾಯಕಾರಿ ಕಾರ್ಯಗಳಿಗೆ ಮುನ್ನಾಗುವ, ದೈಹಿಕ ಆಸೆಗಳ ಬಯಕೆಯಿಂದ ಉಂಟಾಗುವ ಹಾನಿಗಳನ್ನು ಕೂಡ ಸಂಶೋಧಕರು ಅಧ್ಯಯನ ಮಾಡಿದ್ದಾರೆ. 
"ಸಾಮಾನ್ಯವಾಗಿ ಮದ್ಯ ಕುಡಿದ ಮೇಲೆ ಒಬ್ಬರಿಗೆ ದೈಹಿಕವಾಗಿ ಸುಸ್ತಾಗಿ ಮನೆಗೆ ನಡೆಯುತ್ತಾರೆ. ಆದರೆ ಈ ಎನರ್ಜಿ ಪಾನೀಯಗಳು ಅದನ್ನು ಮರೆಮಾಚುತ್ತವೆ. ಆದುದರಿಂದ ಕುಡಿತದ ಪ್ರಮಾಣ ಮತ್ತು ಪರಿಣಾಮದ ಬಗ್ಗೆ ಎಚ್ಚರ ತಪ್ಪುವಂತೆ ಅದು ಮಾಡುತ್ತದೆ. ಇದು ಹೆಚ್ಚಿನ ಮದ್ಯೆ ಸೇವಿಸುವಂತೆ ಪ್ರಚೋದಿಸಿ ಅಪಾಯಕಾರಿ ಕಾರ್ಯಗಳಿಗೆ ಒಡ್ಡುತ್ತದೆ ಮತ್ತು ಅಪಾಯಕಾರಿ ಮದ್ಯ ಸೇವಿಸುವ ಚಟವನ್ನು ಬೆಳೆಸುತ್ತದೆ" ಎಂದು ರೋಮರ್ ಅಧ್ಯಯನದಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com