ಹಳದಿ ಬಣ್ಣದ ಆಲೂಗಡ್ಡೆಯಲ್ಲಿ ಹೇರಳ ವಿಟಮಿನ್ ಎ, ಇ

ಪಿಷ್ಟ ಆಹಾರವನ್ನು ಹೆಚ್ಚಾಗಿ ಅವಲಂಬಿಸಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಜನರ ಕಾಯಿಲೆಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಪಿಷ್ಟ ಆಹಾರವನ್ನು ಹೆಚ್ಚಾಗಿ ಅವಲಂಬಿಸಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಜನರ ಕಾಯಿಲೆಗಳನ್ನು ತಡೆಗಟ್ಟಲು ಅಗತ್ಯ ವಿಟಮಿನ್ ಗಳ ಪೂರೈಕೆಗೆ ಸಂಶೋಧಕರು ಪ್ರಯೋಗಾತ್ಮಕ ಹಳದಿ ಬಣ್ಣದ ಆಲೂಗಡ್ಡೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಸಾಮಾನ್ಯವಾಗಿ ಅಕ್ಕಿ, ಗೋಧಿ ಮತ್ತು ಜೋಳದ ನಂತರ ಜನರು ಹೆಚ್ಚು ತಿನ್ನುವ ಆಹಾರ ಪದಾರ್ಥ ಆಲೂಗಡ್ಡೆ. ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ದೇಶಗಳಲ್ಲಿ ಆಲೂಗಡ್ಡೆ ಪ್ರಧಾನ ಆಹಾರ ಕೂಡ ಹೌದು. ಇದು ಮನುಷ್ಯನ ದೇಹದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಇಯ ಕೊರತೆಯನ್ನು ನೀಗಿಸುತ್ತದೆ. ಮನುಷ್ಯನ ದೇಹದ ಆರೋಗ್ಯಕ್ಕೆ ಬಿಳಿ ಆಲೂಗಡ್ಡೆಯಿಂದ ಹಳದಿ ಬಣ್ಣದ ಆಲೂಗಡ್ಡೆ ಉತ್ತಮ ಎಂದು ಸಂಶೋಧನೆ ಹೇಳುತ್ತದೆ. 
ಒಹಿಯೊ ರಾಜ್ಯ ವಿಶ್ವವಿದ್ಯಾಲಯದ ಸಂಶೋಧಕರು ಈ ಪ್ರಯೋಗ ನಡೆಸಿದ್ದು, ಹಳದಿ-ಕಂದು ಮಿಶ್ರಿತ ಆಲೂಗಡ್ಡೆಯಲ್ಲಿ ಶೇ 42ರಷ್ಟು ವಿಟಮಿನ್ ಎ ಇರುತ್ತದೆ. ವಿಟಮಿನ್ ಎ ಮಕ್ಕಳ ದಿನನಿತ್ಯದ ಆಹಾರದಲ್ಲಿದ್ದರೆ ಒಳ್ಳೆಯದು. ಇದರಿಂದ ದೃಷ್ಟಿಯ ಬೆಳವಣಿಗೆ, ರೋಗನಿರೋಧಕ ಶಕ್ತಿ, ಅಂಗಾಂಗಗಳ ಬೆಳವಣಿಗೆಗೆ ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ಹೆಚ್ಚಿಸುತ್ತದೆ.
ಚಿನ್ನದ ಬಣ್ಣದ ಆಲೂಗಡ್ಡೆಯಲ್ಲಿ ಶೇ.34ರಷ್ಟು ವಿಟಮಿನ್ ಇ ಸಹ ಇದ್ದು ಅದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತ, ನರಗಳು, ಸ್ನಾಯುಗಳು, ದೃಷ್ಟಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ಹಾನಿಯಾಗುವುದರ ವಿರುದ್ಧ ರಕ್ಷಣೆ ನೀಡುತ್ತದೆ.
ಸಂತಾನೋತ್ಪತ್ತಿ ಸಮಯದಲ್ಲಿ 150 ಗ್ರಾಂನಷ್ಟು ಆಲೂಗಡ್ಡೆಯನ್ನು ಸೇವಿಸುತ್ತಿದ್ದರೆ ದೇಹಕ್ಕೆ ಶೇ.15ರಷ್ಟು ವಿಟಮಿನ್ ಎ ಮತ್ತು ಶೇಕಡಾ 17ರಷ್ಟು ವಿಟಮಿನ್ ಇ ದೊರಕುತ್ತದೆ. ದೇಹಕ್ಕೆ ಶಕ್ತಿ ಸಿಗಲು ಸುಮಾರು 8 ಲಕ್ಷ ಮಂದಿ ಆಲೂಗಡ್ಡೆ ಸೇವನೆಯನ್ನು ಅವಲಂಬಿಸಿಕೊಂಡಿದ್ದು ಹಲವರು ಈ ಪೌಷ್ಟಿಕಾಂಶಗಳನ್ನು ಸರಿಯಾಗಿ ಸೇವಿಸುವುದಿಲ್ಲ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಾರ್ಕ್ ಫೈಲ್ಲಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com