ಮಕ್ಕಳಲ್ಲಿ ಆಂಟಿ ಬಯೊಟಿಕ್ಸ್ ಗಳ ಅಧಿಕ ಬಳಕೆ ಸೋಂಕುಗಳಿಗೆ ಕಾರಣವಾಗಬಹುದು: ಅಧ್ಯಯನ

ಅಸ್ತಮಾ ಅಥವಾ ಉಬ್ಬಸದಿಂದ ಬಳಲುತ್ತಿರುವ ಮಕ್ಕಳಿಗೆ ಅನಗತ್ಯವಾಗಿ ಪ್ರತಿಜೀವಕಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅಸ್ತಮಾ ಅಥವಾ ಉಬ್ಬಸದಿಂದ ಬಳಲುತ್ತಿರುವ ಮಕ್ಕಳಿಗೆ ಅನಗತ್ಯವಾಗಿ ಪ್ರತಿಜೀವಕಗಳನ್ನು(ಆಂಟಿಬಯೊಟಿಕ್ಸ್) ನೀಡಲಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ಅಸ್ತಮಾ ಒಂದು ದೀರ್ಘಕಾಲದ ಶ್ವಾಸಕೋಶ ರೋಗವಾಗಿದ್ದು, ಅದು ಶ್ವಾಸಕೋಶದಲ್ಲಿ ವಾಯು ಸಂಚರಿಸುವುದನ್ನು ಹಿರಿದು ಮತ್ತು ಕಿರಿದು ಮಾಡುತ್ತದೆ. ಕಫ, ಉಸಿರಾಟದಲ್ಲಿ ತೊಂದರೆ ಮತ್ತು ಎದೆ ಬೇನೆ ಅಸ್ತಮಾ ರೋಗದ ಲಕ್ಷಣವಾಗಿದೆ.
ಅನೇಕ ಸಂದರ್ಭಗಳಲ್ಲಿ ಅಸ್ತಮಾ ರೋಗದ ಲಕ್ಷಣವನ್ನು ಸಾಮಾನ್ಯವಾಗಿ ಉಸಿರಾಟದ ಸೋಂಕು ಎಂದು ಭಾವಿಸಿ ಆಂಟಿಬಯೊಟಿಕ್ ಔಷಧಿಗಳನ್ನು ವೈದ್ಯರು ನೀಡುತ್ತಾರೆ. ಮಕ್ಕಳು ಆಂಟಿಬಯೊಟಿಕ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಔಷಧ-ನಿರೋಧಕ ಸೋಂಕುಗಳು ಉತ್ಪತ್ತಿಯಾಗಿ ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಸೇಂಕು ಕಾಯಿಲೆಗಳು ಹೆಚ್ಚಾಗುತ್ತವೆ. ಜಾಸ್ತಿಯಾಗುತ್ತಾ ಹೋದಂತೆ ಔಷಧ ನೀಡಿ ಗುಣಪಡಿಸಲು ಕೂಡ ಕಷ್ಟವಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಅಸ್ತಮಾ ಕಾಯಿಲೆ ವಾಸಿಯಾಗಲು ಆಂಟಿಬಯೊಟಿಕ್ಸ್ ನೀಡಲೇ ಬಾರದು ಎಂದು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾರ್ಗಸೂಚಿಗಳು ಸ್ಪಷ್ಟವಾಗಿ ಹೇಳುತ್ತವೆ. ಯಾಕೆಂದರೆ ಇದು ಬ್ಯಾಕ್ಟೀರಿಯಾ ಸೋಂಕಿನ ಜೊತೆ ಸಂಪರ್ಕ ಹೊಂದಿರುತ್ತದೆ ಎನ್ನುತ್ತಾರೆ ನೆದರ್ಲ್ಯಾಂಡಿನ ಎರಸ್ಮಸ್ ವಿಶ್ವವಿದ್ಯಾಲಯದ ಎಸ್ಮೆ ಬಾನ್.
ಆಂಟಿಬಯೊಟಿಕ್ ಔಷಧಿಗಳನ್ನು ಅಸಮರ್ಪಕವಾಗಿ ಬಳಸುವುದು ವ್ಯಕ್ತಿಗಳ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಇದರಿಂದ ಭವಿಷ್ಯದಲ್ಲಿ ಗುಣಪಡಿಸಲಾಗದ ಸೋಂಕು ಕೂಡ ಬರಬಹುದು ಎನ್ನುತ್ತಾರೆ. ನ್ಯೂಮೊನಿಯಾದಂತಹ ಬ್ಯಾಕ್ಟೀರಿಯಾ ಸೋಂಕುಗಳಿದ್ದರೆ ಮಾತ್ರ ಆಂಟಿಬಯೊಟಿಕ್ಸ್ ಗಳನ್ನು ನೀಡಬಹುದು ಎಂದು ಬಾನ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com