ಆರೋಗ್ಯಕರ ಜೀವನ ಮತ್ತು ಆರೋಗ್ಯಕರ ಹೃದಯಕ್ಕಾಗಿ ಪಂಚ ಸೂತ್ರಗಳು!

ಹೃದಯ ಸಂಬಂಧಿ ರೋಗಗಳ ವಿಚಾರದಲ್ಲಿ ಭಾರತ ಇತ್ತೀಚಿನ ದಿನಗಳಲ್ಲಿ ವಿಶ್ವದ ರಾಜಧಾನಿಯಾಗುತ್ತಿದ್ದು, ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದೇ ಇದಕ್ಕೆ ಕಾರಣ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಹೃದಯ ಸಂಬಂಧಿ ರೋಗಗಳ ವಿಚಾರದಲ್ಲಿ ಭಾರತ ಇತ್ತೀಚಿನ ದಿನಗಳಲ್ಲಿ ವಿಶ್ವದ ರಾಜಧಾನಿಯಾಗುತ್ತಿದ್ದು, ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಗಣನೀಯ  ಏರಿಕೆಯಾಗಿರುವುದೇ ಇದಕ್ಕೆ ಕಾರಣ..
ವರ್ಲ್ಡ್ ಹಾರ್ಟ್ ಫೆಡರೇಶನ್ ದತ್ತಾಂಶಗಳು ತಿಳಿಸಿರುವಂತೆ ಭಾರತದಲ್ಲಿ ಕೇವಲ ಒಂದೇ ವರ್ಷದಲ್ಲಿ ಸುಮಾರು 17.5 ಮಿಲಿಯನ್ ಮಂದಿ ಹೃದಯ ಸಂಬಂಧಿ ಖಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಈ ಪೈಕಿ 6.7 ಮಿಲಿಯಿನ್ ಮಂದಿ  ಪಾರ್ಶ್ವವಾಯು ಮತ್ತು 7.4 ಮಿಲಿಯನ್ ಮಂದಿ ಹೃದ್ರೋಗದಿಂದ ಬಳಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲು ಪ್ರತೀ ವರ್ಷ ಸೆಪ್ಟೆಂಬರ್ 29ರಂದು ವಿಶ್ವ  ಹೃದಯ ದಿನವಾಗಿ ಆಚರಿಸಲಾಗುತ್ತದೆ. ಆಂದು ವಿವಿಧ ಸಂಘ ಸಂಸ್ಥೆಗಳು ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಜಾಗೃತಿ ಅಭಿಯಾನ ನಡೆಸುತ್ತವೆ.  ಬದಲಾದ ಜೀವನ ಶೈಲಿ ಹಾಗೂ ಆಧುನಿಕ ಜೀವನ ಶೈಲಿಗಳಿಂದಾಗಿ ನಾವು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಇವುಗಳಿಂದ ದೂರವಿರವು ನಾವು ಸುಲಭವಾಗಿ ಕೈಗೊಳ್ಳಬಹುದಾದ ಆರೋಗ್ಯಕಾರಿ ಪಂಚ  ಸೂತ್ರಗಳು ಇಲ್ಲಿವೆ..

ನಿತ್ಯ ತಪ್ಪದೇ ವ್ಯಾಯಾಮ ಮಾಡಿ
ಹೃದಯವನ್ನು ಮತ್ತು ದೇಹವನ್ನು ಆರೋಗ್ಯಕರವಾಗಿಡುವಲ್ಲಿ ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ. ನಿತ್ಯ 30-45 ನಿಮಿಷಗಳ ವ್ಯಾಯಾಮಕ್ಕೆ ಮೀಸಲಿರಿಸಿದರೆ ಉತ್ತಮ. ದೇಹವನ್ನು ಆರೋಗ್ಯವಿಗಿಟ್ಟುಕೊಳ್ಳಲು ವ್ಯಾಯಾಮ  ಉತ್ತಮ ಉಪಾಯ...ನಡಿಗೆ, ಯೋಗಭ್ಯಾಸ, ಜಾಗಿಂಗ್ ನಂತಹ ದೈಹಿಕ ಕಸರತ್ತು ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿಟ್ಟುಕೊಳ್ಳಬಹುದು.. ದೃಢವಾಗಿ ಮತ್ತು ಸುಂದರವಾಗಿಡಲು  ವ್ಯಾಯಾಮ ತುಂಬಾ ಸಹಕಾರಿ. ದೈಹಿಕ ಕಸರತ್ತು ಸಾಧ್ಯವಾಗಲಿಲ್ಲ ಎಂದಾದರೇ ಕನಿಷ್ಟ ಪಕ್ಷ ನಡಿಗೆಯಾದರು ಮಾಡಲೇಬೇಕು..ದೇಹವು ಆರೋಗ್ಯಶಾಲಿಯಾಗಿ ಇರಬೇಕಾದರೆ ದಿನವೂ ನಡೆಯುವುದು ಬಹಳ ಆವಶ್ಯಕ. ದೇಹವು  ಸಮತೋಲನದಲ್ಲಿರಲು ನಡಿಗೆಯು ಸುಲಭ ರೀತಿಯ ವ್ಯಾಯಾಮ. ಯೋಗದಲ್ಲಿ ಆಸಕ್ತಿ ಇರುವವರು ವೀರಭದ್ರಾಸನ, ತದಾಸಾನ, ಉಟ್ಟಟಾಸನಾ, ಭುಜಂಗಾಸನ, ವಿಕ್ಷಕ್ಷನ ಈ ಆಸನಗಳು ಹೃದಯವನ್ನು ಆರೋಗ್ಯವಾಗಿರಿಸಲು  ನೆರವಾಗುತ್ತದೆ. ನಿತ್ಯ ಕನಿಷ್ಠ ಐದು ಯೋಗಾಸನಗಳನ್ನು ಮಾಡಿದರೂ ನೀವು ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರವಿರಬಹುದು.

ಆರೋಗ್ಯಕಾರಿ ಡಯಟ್
ಆರೋಗ್ಯಕಾರಿ ಡಯಟ್ ಅಥವಾ ಆರೋಗ್ಯಕಾರಿ ಆಹಾರಗಳ ಸೇವನೆ ಕೂಡ ನಿಮ್ಮನ್ನು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿಡುತ್ತದೆ. ನೀವು ತಿನ್ನುವ ಆಹಾರ ಪದಾರ್ಥಗಳು ಪ್ರೊಟೀನ್ ಗಳಿಂದ ಕೂಡಿವೆಯೇ ಎಂಬುದನ್ನು  ಖಚಿತಪಡಿಸಿಕೊಂಡು ತಿನ್ನಬೇಕು. ತರಕಾರಿ, ಧಾನ್ಯಗಳು ಹಾಗೂ ಮೊಳಕೆ ಕಟ್ಟಿದ ಧಾನ್ಯಗಳ ಆಹಾರಗಳು ದೇಹಕ್ಕೆ ಅತ್ಯುತ್ತಮವಾರುತ್ತವೆ. ಅಂತೆಯೇ ಸಕ್ಕರೆ, ಉಪ್ಪಿನ ಅಂಶ ಆಹಾರಗಳಲ್ಲಿ ನಿಯಂತ್ರಣದಲ್ಲಿದ್ದರೆ ಒಳಿತು. ಗ್ಯಾಸ್  ಸಹಿತ ಪೇಯಗಳಿಂದ ದೂರವಿರಿ.. ಇದು ದೇಹದ ಕೆಟ್ಟ ಬೊಜ್ಜಿಗೆ ಕಾರಣವಾಗುತ್ತದೆ. ಸಾಧ್ಯವಾದಷ್ಟು ಹೆಚ್ಚೆಚ್ಚು ನೀರು ಕುಡಿಯಿರಿ.. ಪ್ರಮುಖವಾಗಿ ಬಿಸಿ ನೀರು ದೇಹಾರೋಗ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.  ಬೇಕರಿ ತಿನಿಸು ಮತ್ತು ಸಂಸ್ಕರಿಸಿದ ಆಹಾರಗಳಿಂದ ಸಾಧ್ಯವಾದಷ್ಟೂ ದೂರವಿರಿ..ಬೆಳಗ್ಗಿನ ತಿಂಡಿಯನ್ನು ತಪ್ಪಿಸಬೇಡಿ ಮತ್ತು ಸಮಯಕ್ಕೆ ಸರಿಯಾಗಿ ಊಟ/ ಉಪಹಾರ ಮಾಡಿ..

ದೇಹದ ತೂಕದ ಮೇಲೆ ಗಮನವಿರಲಿ
ಅಧಿಕ ದೇಹ ತೂಕ ಕೂಡ ಹೃದಯದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ದೇಹದ ತೂಕದ ಮೇಲೆ ಆಗಾಗ ಮಗನ ಹರಿಸಿ..ಆ ಮೂಲಕ ಬೊಜ್ಜು ಸಮಸ್ಯೆ ಮೇಲೆ ಗಮನ ಹರಿಸಿ ಬೊಜ್ಜು ಹೆಚ್ಚಾಗದಂತೆ  ಮುಂಜಾಗ್ರತಾ ಕ್ರಮ ವಹಿಸಿ..ಅಧಿಕ ಬೊಜ್ಜು ಮತ್ತು ಅಧಿಕ ದೇಹದ ತೂಕ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡಕ್ಕೆ ದಾರಿ ಮಾಡಿಕೊಡಬಹುದು.

ಮದ್ಯಪಾನ ಮತ್ತು ಧೂಮಪಾನ ದೂರವಿರಿ
ಮದ್ಯಪಾನ ಮತ್ತು ಧೂಮಪಾನ ಮಾಡುವುದರಿಂದ ಗಂಭೀರ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಧೂಮಪಾನ ಮತ್ತು ಮದ್ಯಪಾನದಿಂದಾಗಿ ಹೃದಯದ ಮೇಲೆ ಒತ್ತಡ ಹೇರುವ ಮೂಲಕ ಹೃದಯ ಸಂಬಂಧಿ  ಕಾಯಿಲೆಗಳಿಗೆ ದಾರಿ ಮಾಡುತ್ತದೆ. ಮಿತಿ ಮೀರಿದ ಧೂಮಪಾನ ಕ್ಯಾನ್ಸರ್ ಗೆ ಕಾರಣವಾದರೆ, ಅತ್ಯಧಿಕ ಮದ್ಯಪಾನ ಕರುಳಿನ ಕ್ಯಾನ್ಸರ್ ಗೆ ಕಾರಣವಾಗಬಲ್ಲದು. ಮದ್ಯಪಾನ ಮತ್ತು ಧೂಮಪಾನ ರಕ್ತದ ಒತ್ತಡ ಹೆಚ್ಚಾಗುವಂತೆ  ಮಾಡಿ ಹೃದಯದ ಬಡಿತ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಷ್ಟು ಮಾತ್ರವಲ್ಲದೇ ಇಡೀ ಹೃದಯದ ಕಾರ್ಯ ವ್ಯವಸ್ಥೆಯ ಮೇಲೆಯೇ ಇದು ಪರಿಣಾಮ ಬೀರುತ್ತದೆ.

ಒತ್ತಡದ ನಿಯಂತ್ರಿಸಿಕೊಳ್ಳಿ
ಆರೋಗ್ಯಕರ ಜೀವನ ಹಾಗೂ ಆರೋಗ್ಯಕರ ಹೃದಯದ ಮೇಲೆ ಒತ್ತಡ ಕೂಡ ವ್ಯತಿರಿಕ್ತ ಪರಿಣಾಮ ಬೀರಬಲ್ಲದು..ಒತ್ತಡ ಹೆಚ್ಚಾದರೆ ತಲೆನೋವು ಸೇರಿದಂತೆ ದೇಹದ ಇತರೆ ಅಂಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕ್ರಮೇಣ  ಇದು ನಿಮ್ಮಲ್ಲಿ ಆತಂಕ ಮತ್ತು ಖಿನ್ನತೆಗೆ ದಾರಿ ಮಾಡುತ್ತದೆ. ನಿಮ್ಮ ದೈಹಿಕ ಸಾಮರ್ಥ್ಯವನ್ನು ಕುಂದಿಸುತ್ತದೆ. ಹೀಗಾಗಿ ಒತ್ತಡದ ಜೀವನದಿಂದ ಸಾಧ್ಯವಾದಷ್ಟು ದೂರವಿರಿ..ಇಲ್ಲವೇ ಒತ್ತಡ ಮುಕ್ತರಾಗಲು ನಿಮಗಿಷ್ಟವಾದ ಕೆಲಸ  ಅಂದರೆ ಸಂಗೀತ ಕೇಳುವುದು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು, ಪುಸ್ತಕ ಓದುವುದು, ಯೋಗ ಅಥವಾ ಧ್ಯಾನ ಇತ್ಯಾದಿಗಳನ್ನು ಮಾಡಿ..ಇದರಿಂದ ನಿಮ್ಮ ಒತ್ತಡ ನಿವಾರಣೆಯಾಗುತ್ತದೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com