ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರಿನ ಟಾಪ್ 10 ಸಾವಿನ ಕಾರಣಗಳಲ್ಲಿ ಯಕೃತ್ತು ಸಮಸ್ಯೆಯೂ ಒಂದು- ವೈದ್ಯರ ಹೇಳಿಕೆ

ವ್ಯಾಯಾಮ ಕೊರತೆ ಹಾಗೂ ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶ ಆಹಾರ ಸೇವನೆಯಿಂದ 40 ವರ್ಷದೊಳಗಿನ ಜನರಲ್ಲಿ ಯಕೃತ್ತು ಸಂಬಂಧಿತ ರೋಗಗಳು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಇಲ್ಲಿನ ವಿಕ್ರಮ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಬೆಂಗಳೂರು: ವ್ಯಾಯಾಮ ಕೊರತೆ ಹಾಗೂ ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶ ಆಹಾರ ಸೇವನೆಯಿಂದ 40 ವರ್ಷದೊಳಗಿನ ಜನರಲ್ಲಿ ಯಕೃತ್ತು ಸಂಬಂಧಿತ ರೋಗಗಳು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಇಲ್ಲಿನ ವಿಕ್ರಮ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಯಕೃತ್ತು ಸಂಬಂಧಿತ ರೋಗಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. 40-45 ವರ್ಷದೊಳಗಿನ ಹೆಚ್ಚಿನ ಮಂದಿಯಲ್ಲೇ ಈ ರೋಗ ಕಾಣಿಸಿಕೊಳ್ಳುತ್ತಿದೆ. ಅತಿಯಾದ ಮಧ್ಯ ಸೇವನೆ ಮತ್ತಿತರ  ಜೀವನಶೈಲಿಗೊಳಗಾಗಿರುವ ಯುವಕರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಟಾಪ್ 10 ಸಾವಿನ ಕಾರಣಗಳಲ್ಲಿ  ಯಕೃತ್ತು ಸಮಸ್ಯೆಯೂ ಒಂದಾಗಿದ್ದು,  ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು  ವೈದ್ಯ ಡಾ. ಸಿ. ವಿಕ್ರಮ್ ಬೆಳ್ಳಿಯಪ್ಪ ಹೇಳುತ್ತಾರೆ.

 ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದಲ್ಲಿ ಪ್ರತಿವರ್ಷ 10 ಲಕ್ಷ ಜನರು ಯಕೃತ್ತು ಸಂಬಂಧಿತ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಾಜು 40-45 ವರ್ಷದೊಳಗಿನವರಲ್ಲಿಯೇ ಇದು ಹೆಚ್ಚಾಗಿ ಕಂಡುಬರುತ್ತಿದೆ.  ಆದರೆ, ಈಗ ಅತಿಯಾದ ಮಧ್ಯಸೇವನೆ, ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶ ವಿರುವ ಆಹಾರ ಸೇವನೆಯಿಂದ ಯುವಕರಲ್ಲಿಯೂ ಇದು ಹೆಚ್ಚಾಗಿದೆ. ಮಹಿಳೆಯರಿಗಿಂತಲೂ ಪುರುಷರೇ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಯಕೃತ್ತು ಕಸಿ ವಿಧಾನದಿಂದ ಕೆಲವರ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಹೊಸ ತಂತ್ರಜ್ಞಾನದ ಬಗ್ಗೆ ಸಂಶೋಧನೆ ಮಾಡಲಾಗುತ್ತಿದೆ. ವಿಶ್ವ ಯಕೃತ್ತು ದಿನ ಅಂಗವಾಗಿ 70 ಜನ ವೈದ್ಯರಲ್ಲಿ 32 ವೈದ್ಯರು ಕಾರ್ಯನಿರ್ವಹಿಸಿ ಯಕೃತ್ತು ಸೇರಿದಂತೆ ತಮ್ಮ ದೇಹದ ಪ್ರಮುಖ ಅಂಗಗಳನ್ನು ಧಾನ ಮಾಡುವುದಾಗಿ ವಾಗ್ದಾನ ಮಾಡಿರುವುದಾಗಿ ಡಾ. ದೀರಾಜ್ ಕಾರಂತ್ ಸಿ ಹೇಳುತ್ತಾರೆ.

 ಆರೋಗ್ಯಕರ  ಯಕೃತ್ತು ಗಾಗಿ ಮಾಡಬೇಕಾದ ಕಾರ್ಯಗಳು

 *ಕಬ್ಬಿನಾಂಶ ಕಡಿಮೆ ಪ್ರಮಾಣದಲ್ಲಿರುವ ಆಹಾರ ಸೇವಿಸಬೇಕು
* ರಕ್ತ ಸುಲಭವಾಗಿ ಸಂಚರಿಸಲು ಹಾಲಿನ ಉತ್ಪನ್ನ, ಧಾನ್ಯ, ಹಣ್ಣು, ತರಕಾರಿ, ಸೇವನೆ ಉತ್ತಮ
* ಮಧ್ಯಪಾನ, ದೂಮಪಾನ , ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು
* ಸುರಕ್ಷಿತ ಲೈಂಗಿಕ ಸಂಪರ್ಕ ವಿಧಾನ
* ನಿರಂತರ ವ್ಯಾಯಾಮ




Related Stories

No stories found.

Advertisement

X
Kannada Prabha
www.kannadaprabha.com