ಅನಿಯಂತ್ರಿತ ಆಹಾರ ಸೇವನೆ ಮಧುಮೇಹ ಹೆಚ್ಚಲು ಕಾರಣ

ಸಾಂಪ್ರದಾಯಿಕ ಆಹಾರ ಎಂದಿಗೂ ಆರೋಗ್ಯಕರ ಎಂದು ಹೇಳುವವರು ಮತ್ತೊಮ್ಮೆ ಆಲೋಚಿಸಬೇಕಾದ ಸಂದರ್ಭ ಬಂದಿದೆ. ಏಕೆಂದರೆ,...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಸಾಂಪ್ರದಾಯಿಕ ಆಹಾರ ಎಂದಿಗೂ ಆರೋಗ್ಯಕರ ಎಂದು ಹೇಳುವವರು ಮತ್ತೊಮ್ಮೆ ಆಲೋಚಿಸಬೇಕಾದ ಸಂದರ್ಭ ಬಂದಿದೆ. ಏಕೆಂದರೆ, ಅನಿಯಂತ್ರಿತ ಆಹಾರ ಸೇವನೆ ಮಧುಮೇಹ ಹೆಚ್ಚಲು ಕಾರಣವೆಂದು ಅಧ್ಯಯನವೊಂದು ತಿಳಿಸಿದೆ. 
ಆಯುರ್ವೇದದ 6 ಹಿರಿಯ ವೈದ್ಯರು ಈ ಅಧ್ಯಯನವನ್ನು ನಡೆಸಿದ್ದು, ಅಧ್ಯಯನದಲ್ಲಿ ಗ್ರಾಮೀಣ ಪ್ರೇದಶದಲ್ಲಿರುವ ಜನರೇ ಹೆಚ್ಚು ಮಧುಮೇಹ ರೋಗಕ್ಕೆ ಒಳಗಾಗಿರುವುದಾಗಿ ತಿಳಿದುಬಂದಿದೆ. 
ಗ್ರಾಮ್ಯ ಆಹಾರ-ವಿಹಾರ ಇನ್ ರಿಲೇಶನ್ ಟು ಮಧುಮೇಹ ಎಂಬ ಹೆಸರಿನಲ್ಲಿ ಅಧ್ಯಯನವನ್ನು ನಡೆಸಲಾಗಿದ್ದು, ಅಧ್ಯಯನದಲ್ಲಿ ಗ್ರಾಮೀಣ ಪ್ರದೇಶದ ಜನರು ಅನಿಯಂತ್ರಿತ ಆಹಾರ ಸೇವನೆ ಮಾಡುತ್ತಿರುವುದರಿಂದ ಮಧುಮೇಹ ರೋಗ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. 
ಈ ಅಧ್ಯಯನದ ವರದಿಯಲನ್ನು ಬಲ್ಗೇರಿಯಾ ಮೂಲದ ವರ್ಲ್ಡ್ ಜರ್ನಲ್ ಆಫ್ ಫಾರ್ಮಸಿಟಿಕಲ್ ರಿಸರ್ಚ್ (ಡಬ್ಲ್ಯೂಜೆಪಿಆರ್) ಪ್ರಕಟಿಸಿದೆ. 
ಅಧ್ಯಯನ ನಡೆಸಿದ 6 ವೈದ್ಯರ ಪೈಕಿ ಒಬ್ಬರಾಗಿರುವ ಪ್ರೊ.ರಾಧಕೃಷ್ಣ ಬಿಶ್ವಾಲ್ ಅವರು ಅಧ್ಯಯನ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಗ್ರಾಮ ಆಹಾರ ವಿಹಾರ ಅಂದರೆ, ಅನಿಯಂತ್ರಿತ  ಆಹಾರ ಸೇವನೆಗಳಿಂದ ಮಧುಮೇಹ, ಹೈಪರ್ ಅಸಿಡಿಟಿ, ಹೈಪರ್ ಟೆನ್ಶನ್ ಮತ್ತು ಕುಷ್ಠರೋಗ ಬರುತ್ತದೆ. ನಿಯಮವಿಲ್ಲದ ಆಹಾರ ಸೇವನೆ, ಜೀವನಶೈಲಿ, ಅಭಾಗಲಬ್ಧ ಆಹಾರ, ಹೊಂದಿಕೊಳ್ಳದ ಆಹಾರ, ಬೆಳಗಿನ ಸಮಯದಲ್ಲಿ ಮಲಗುವುದು, ಲೈಂಗಿಕತೆ, ಅನಿಯಮಿತ ಅಥವಾ ಹೆಚ್ಚಿನ ದೈಹಿಕ ಚಟುವಟಿಕೆಗಳು, ಅನಿಯಂತ್ರಿತ ಮದ್ಯಪಾನದಂತಹ ಚಟುವಟಿಕೆಗಳು ಗ್ರಾಮೀಣ ಭಾಗದಲ್ಲಿರುವ ಬಹುತೇಕ ಮಂದಿಯಲ್ಲಿ ಮಧುಮೇಹ ರೋಗ ಕಾಣಿಸಿಕೊಳ್ಳು ಕಾರಣವಾಗಿದೆ ಎಂದು ಹೇಳಿದ್ದಾರೆ. 
ಗ್ರಾಮೀಣ ಭಾಗದ ಜನರು ಉಪ್ಪು, ಹುಳಿ, ಖಾರ ಹಾಗೂ ಅತೀ ಹೆಚ್ಚು ಎಣ್ಣೆಯಿಂದ ಕರಿದಿರುವ ಪದಾರ್ಥಗಳನ್ನು ಸೇವನೆ ಮಾಡುವುದುಂಟು. ಇದರಿಂದ ಬೊಜ್ಜು ಹಾಗೂ ಮಧಮೇಹ ಹೆಚ್ಚಾಗಲಿದ್ದು, ಇದರಿಂದ ಚಯಾಪಚಯ ವ್ಯಾಧಿಗಳು ಎದುರಾಗುತ್ತೇವೆ. ಅನಿಯಂತ್ರಿತ  ಆಹಾರ ಹಾಗೂ ವರ್ತನೆಗಳ ಅಭ್ಯಾಸ ಕೂಡ ಮನುಷ್ಯನ ದೇಹಕ್ಕೆ ವಿಷವಿದ್ದಂತೆ ಎಂದು ತಿಳಿಸಿದ್ದಾರೆ. 
ಅಧ್ಯಯನದ ಮತ್ತೊಬ್ಬ ಪ್ರೊ.ಶಾಂತನು ದಾಸ್ ಮಾತನಾಡಿ, ಅನಿಯಮಿತ ಗಂಟೆಗಳಲ್ಲಿ ಆಹಾರ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಾಗಲು ಕಾರಣವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಏರುಪೇರಾಗದಂತೆ ತಡೆಯಲು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವನೆ ಮಾಡಬೇಕು ಎಂದಿದ್ದಾರೆ. 
ಕೆಲ ಜನರು ಕೋಳಿ ಮಾಂಸದಿಂದ ಅಥವಾ ಮೀನಿನಿಂದ ತಯಾರಿಸಿದ ಆಹಾರ ಸೇವನೆ ಮಾಡಿದ ಬಳಿಕ ಮೊಸರನ್ನು ಸೇವನೆ ಮಾಡುತ್ತಾರೆ. ಇನ್ನು ಕೆಲವರು ಆಹಾರ ತಿಂದ ಕೂಡಲೇ ಹಣ್ಣುಗಳನ್ನು ತಿನ್ನುವುದು, ಫಿಶ್ ಕರ್ರಿ ತಿಂದ ಬಳಿಕ ಹಾಲು ಕುಡಿಯುವುದು, ಆಹಾರದಲ್ಲಿ ಬಳಕೆ ಮಾಡಿದ್ದ ಎಣ್ಣೆಯನ್ನೇ ಮರು ಬಳಕೆ ಮಾಡುವವರು ಅತೀ ವೇಗವಾಗಿ ರೋಗಕ್ಕೆ ಒಳಗಾಗುತ್ತಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com