ಸುಂದರ ತ್ವಚೆಗೆ ಇಲ್ಲಿವೆ ಕೆಲ ಮನೆಮದ್ದುಗಳು...

ಹೊಳೆಯುವ ಮುಖವನ್ನು ಯಾರು ತಾನೆ ಬಯಸುವುದಿಲ್ಲ ಹೇಳಿ? ತಾವು ಸುಂದರವಾಗಿ ಕಾಣಬೇಕೆಂದು ಪ್ರತೀಯೊಬ್ಬರೂ ಬಯಸುತ್ತಾರೆ. ತಾವು ಸುಂದರವಾಗಿ ಕಾಣಬೇಕೆಂದು ಸಾಕಷ್ಟು ಮಂದಿ ಮಾರುಕಟ್ಟೆಯಲ್ಲಿ ಸಿಗುವ ಸಿಕ್ಕ ಸಿಕ್ಕ ರಾಸಾಯನಿಕ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೊಳೆಯುವ ಮುಖವನ್ನು ಯಾರು ತಾನೆ ಬಯಸುವುದಿಲ್ಲ ಹೇಳಿ? ತಾವು ಸುಂದರವಾಗಿ ಕಾಣಬೇಕೆಂದು ಪ್ರತೀಯೊಬ್ಬರೂ ಬಯಸುತ್ತಾರೆ. ತಾವು ಸುಂದರವಾಗಿ ಕಾಣಬೇಕೆಂದು ಸಾಕಷ್ಟು ಮಂದಿ ಮಾರುಕಟ್ಟೆಯಲ್ಲಿ ಸಿಗುವ ಸಿಕ್ಕ ಸಿಕ್ಕ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಿ ಮುಖವನ್ನು ಹಾಳು ಮಾಡಿಕೊಳ್ಳುತ್ತಾರೆ. 
ಆರೋಗ್ಯಕರವಾದ ತ್ವಚೆ ಪಡೆಯುವುದು ಅಷ್ಟು ಸುಲಭವಲ್ಲ. ಕೇವಲ ಬಯಸಿದರಷ್ಟೇ ಸಾಲದು, ಅದಕ್ಕಾಗಿ ಕಾಳಜಿಯನ್ನೂ ವಹಿಸಬೇಕು. ಹೊಳೆಯುವ ತ್ವಚೆ ಪಡೆಯಲು ಸಾದ್ಯವಾದಷ್ಟು ರಾಸಾಯನಿಕ ವಸ್ತುಗಳನ್ನು ನಿಯಂತ್ರಿಸಿ ಮನೆಯಲ್ಲಿಯೇ ಮಾಡಿದ ಮನೆಮದ್ದುಗಳನ್ನು ಬಳಕೆ ಮಾಡಿ. 
ತ್ವಚೆಯ ಆರೈಕೆಗೆ ಕೆಲ ಮನೆಮದ್ದುಗಳು ಇಲ್ಲಿವೆ...
  • ಆಲೂಗಟ್ಟೆ, ಗೆಣಸು, ಕ್ಯಾರೆಟ್ ಹಾಗೂ ಕುಂಬಳಕಾಯಿಯನ್ನು ಬೇಯಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಬಾದಾಮಿ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಹಾಕಿ ಮುಖಕ್ಕೆ ಪ್ಯಾಕ್ ಹಾಕಿ. 
  • ಮಕ್ಕಳಂತೆ ತಮ್ಮ ಮುಖ ಕೂಡ ಸಾಫ್ಟ್ ಸಾಫ್ಟ್ ಆಗಿರಬೇಕೆಂದು ಬಯಸುವವರು, ರೋಸ್ ವಾಟರ್ ಹಾಗೂ ಅಲೋವೆರಾ ಮಾಸ್ಕ್ ಬಳಸಿ, ಗುಲಾಬಿ ಹಾಗೂ ಅಲೋವೆರಾ ಮಾಸ್ಕ್ ಹಾಕಿಕೊಳ್ಳಲು, ಒಂದು ಚಮಚ ಅಲೋವೆರಾ ಜೆಲ್, ಒಂದು ಚಮಚ ರೋಸ್ ವಾಟರ್ ಹಾಗೂ ಕ್ಯಾಲಮಿನ್ ಪುಡಿಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಪ್ಯಾಕ್ ಹಚ್ಚಿಕೊಳ್ಳಿ.
  • ಸ್ಟ್ರಾಬೆರ್ರಿ ಪೇಸ್ಟ್, ಟೊಮೆಟೋ ಅರ್ಧ, ಸೊತೆಕಾಯಿ ಒಂದು ತುಂಡು, ಕಲ್ಲಂಗಡಿ ಹಣ್ಣು ಸ್ವಲ್ಪ. ಎಲ್ಲವನ್ನೂ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಗುಲಾಬಿ ಎಣ್ಣೆ, ಓಟ್ಸ್ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಈ ಪೇಸ್ಟ್'ನ್ನು ಎಲ್ಲಾ ರೀತಿಯ ಚರ್ಮದವರೂ ಕೂಡ ಬಳಕೆ ಮಾಡಬಹುದಾಗಿದೆ. 
  • ಒಂದು ಚಮಚ ಜೇನುತುಪ್ಪ, 2-3 ಹನಿ ನಿಂಬೆ ಹಣ್ಣಿನ ರಸ, ಮೊಟ್ಟೆಯ ಬಿಳಿ ಭಾಗವನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 
  • 1 ಚಮಚ ಜೇನುತುಪ್ಪ, 2 ಚಮಚ ಮೊಸರನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಮಸಾಜ್ ಮಾಡಿ. ನಂತರ ಬೆಚ್ಚಗಿನ ನೀರಿನಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಒರೆಸಿದರೆ, ಹೊಳೆಯುವ ಮುಖವನ್ನು ಪಡೆಯಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com