ಪುರುಷರಿಗೂ ಇರಲಿ ತ್ವಚೆಯ ಕಾಳಜಿ: ಚರ್ಮದ ಆರೈಕೆಗೆ ಇಲ್ಲಿದೆ ಮಾಹಿತಿ

ತ್ವಚೆ ಆರೈಕೆಗೆ ಮಹಿಳೆಯರು ನೀಡುವಷ್ಟು ಮಹತ್ವವನ್ನು ಪುರುಷರು ನೀಡುವುದಿಲ್ಲ. ಚರ್ಮದ ಆರೈಕೆ ಕೇವಲ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಕೂಡ ಮುಖ್ಯವಾಗಿರುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ತ್ವಚೆ ಆರೈಕೆಗೆ ಮಹಿಳೆಯರು ನೀಡುವಷ್ಟು ಮಹತ್ವವನ್ನು ಪುರುಷರು ನೀಡುವುದಿಲ್ಲ. ಚರ್ಮದ ಆರೈಕೆ ಕೇವಲ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಕೂಡ ಮುಖ್ಯವಾಗಿರುತ್ತದೆ. ಭವಿಷ್ಯದಲ್ಲಿ ಎದರಾಗುವ ಸುಕ್ಕು, ಮೊಡವೆ, ಒರಟುತನದಂತಹ ಚರ್ಮ ಸಮಸ್ಯೆಗಳು ಎದುರಾಗುವುದಕ್ಕೂ ಮುನ್ನ ಈಗಲೇ ಚರ್ಮದ ಆರೈಕೆ ಮಾಡಿಕೊಳ್ಳುವುದು ಉತ್ತಮ. 
ಹಾಗಾದರೆ ಪುರುಷರು ತಮ್ಮ ತ್ವಚೆಯ ಆರೈಕೆಯನ್ನು ಹೇಗೆ ಮಾಡಿಕೊಳ್ಳಬಹುದು?... ಅದಕ್ಕೆ ಕೆಲ ತಜ್ಞರು ನೀಡಿರುವ ಸಲಹೆಗಳು ಇಂತಿವೆ...
  • ಸಾಧಾರಣವಾಗಿ ಮಹಿಳೆಯರಿಗಿಂತ ಪುರುಷರ ಚರ್ಮ ಹೆಚ್ಚು ಎಣ್ಣೆಯುಕ್ತವಾಗಿರುತ್ತದೆ. ಇದರಿಂದ ಮೊಡವೆಗಳ ಸಮಸ್ಯೆಗಳು ಎದುರಾಗುತ್ತವೆ. ಎಣ್ಣೆ ಚರ್ಮದಿಂದ ದೂರ ಉಳಿಯರು ಪುರುಷರು ಫೇಸ್ ಜೆಲ್'ಗಳನ್ನು ಬಳಕೆ ಮಾಡಬೇಕಾಗುತ್ತದೆ. ಫೇಸ್ ಜೆಲ್ ಬಳಕೆಯಿಂದ ಪಿಗ್ಮೆಂಟೇಶನ್ ಮತ್ತು ಕಲೆಗಳು ದೂರಾಗಲಿವೆ. 
  • ಮುಖ ಕ್ಷೌರ ಮಾಡಿಕೊಳ್ಳುವ ಮುನ್ನ ಸಾಕಷ್ಟು ಎಚ್ಚರ ವಹಿಸಬೇಕು. ಪ್ರತಿನಿತ್ಯ ಶೇವ್ ಮಾಡಿಕೊಳ್ಳುವುದರಿಂದ ಮುಖದ ಚರ್ಮ ಗಡಸಾಗುವ ಸಾಧ್ಯತೆಗಳಿರುತ್ತವೆ. ಇದರಿಂತ ಚರ್ಮ ಕಪ್ಪಾಗುವ ಸಾಧ್ಯತೆಗಳಿರುತ್ತವೆ. ಶೇವ್ ಮಾಡಿಕೊಳ್ಳುವುದಕ್ಕೂ ಮುನ್ನ ಫೇಶಿಯಲ್ ಜೆಲ್ ಅಥವಾ ಸಾವಯವ ಮುಖ ತೈಲಗಳನ್ನು ಬಳಕೆ ಮಾಡುವುದು ಮುಖ್ಯವಾಗುತ್ತದೆ. 
  • ಶ್ರಮದಾಯಕ ಕೆಲಸಗಳಲ್ಲಿ ತೊಡಗಿಕೊಳ್ಳುವ ಪುರುಷರು ಕಣ್ಣುಗಳಿಗೆ ವಿಶ್ರಾಂತಿಕೊಡುವುದು ಮುಖ್ಯವಾಗುತ್ತದೆ. ಈ ವೇಳೆ ಪುರುಷರು ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ನ್ನು ಹಾಕಿ ಕಣ್ಣಿನ ಮೇಲಿಟ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಇಲ್ಲವೇ ಸೌತೆಕಾಯಿಯನ್ನು ತೆಳ್ಳಗೆ ಕತ್ತರಿಸಿಕೊಂಡು ಕಣ್ಣಿನ ಮೇಲಿಟ್ಟು ವಿಶ್ರಾಂತಿ ಪಡೆದುಕೊಳ್ಳಬೇಕು. 
  • ಮಹಿಳೆಯರಿಗೆ ಹೋಲಿಕೆ ಮಾಡಿದರೆ ಪುರುಷರ ಚರ್ಚ ಅತ್ಯಂತ ಬೇಗ ಟ್ಯಾನ್ ಆಗುತ್ತವೆ. ಈ ವೇಳೆ ಪುರುಷರು ಪ್ರತಿನಿತ್ಯ ಎಸ್'ಪಿಎಫ್ ಇರುವ ಕ್ರೀಮ್ ಗಳನ್ನು ಬಳಕೆ ಮಾಡಬೇಕು. ಇದು ರಾಸಾಯನಿಕ ವಸ್ತುಗಳೆಂದು ತಿಳಿಯದೆಯೇ ಚರ್ಮದ ಆರೋಗ್ಯಕ್ಕೆಂದು ಬಳಕೆ ಮಾಡಬೇಕು. 
  • ಪುರುಷರ ಚರ್ಮ ಅತ್ಯಂತ ಬೇಗ ಒಣಗಿ ಹೋಗುತ್ತವೆ. ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಚರ್ಮದ ಮೇಲೆ ಪ್ಯಾಚ್ ಗಳಾಗುವುದು, ಚರ್ಮ ಕಪ್ಪಗಾಗುವ ಸಮಸ್ಯೆಗಳುಂಟಾಗುತ್ತವೆ. ಈ ವೇಳೆ ಹೈಡ್ರೇಟಿಂಗ್ ಶೀಟ್ ಮಾಸ್ಕ್ ಗಳನ್ನು ಬಳಕೆ ಮಾಡಬೇಕು. ಇದು ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರೂ ಕೂಡ ಬಳಕೆ ಮಾಡಬಹುದಾಗಿದೆ. 
  • ಪ್ರತೀನಿತ್ಯ ರಾತ್ರಿ ಮಲಗುವುದಕ್ಕೂ ಮುನ್ನ ಮುಖವನ್ನು ಚೆನ್ನಾಗಿ ತೊಳೆಯಬೇಕು. ಇದರಿಂದ ಚರ್ಮ ಉಸಿರಾಡಲು ಸಹಾಯಕವಾಗುತ್ತವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com