ದೀರ್ಘಕಾಲಿಕ ದೃಷ್ಟಿಹೀನತೆಗೆ ರೆಟಿನಾದ ರೋಗಗಳು ಪ್ರಮುಖ ಕಾರಣಗಳಲ್ಲೊಂದು

ಕಾರ್ನಿಯಾ (ಕಣ್ಣಿನ ಮುಂಭಾಗ) ಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ತಿಳಿದಿದ್ದರೂ, ರೆಟಿನಾಗೆ (ಕಣ್ಣಿನ ಹಿಂಭಾಗ) ಸಂಬಂಧಿಸಿದ ರೋಗಗಳನ್ನು ಗುರುತಿಸುವುದು ಸುಲಭವಲ್ಲ.
ದೀರ್ಘಕಾಲಿಕ ದೃಷ್ಟಿಹೀನತೆಗೆ ರೆಟಿನಾದ ರೋಗಗಳು ಪ್ರಮುಖ ಕಾರಣಗಳಲ್ಲೊಂದು

2020ರ ವೇಳೆಗೆ ಭಾರತದಲ್ಲಿ ದೃಷ್ಟಿಹೀನರ ಸಂಖ್ಯೆಯು 15 ದಶಲಕ್ಷಗಳಿಗೆ ಏರುವುದೆಂದು ಅಂದಾಜಿಸಲಾಗಿದೆ. ಕಾರ್ನಿಯಾ (ಕಣ್ಣಿನ ಮುಂಭಾಗ) ಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ತಿಳಿದಿದ್ದರೂ, ರೆಟಿನಾಗೆ (ಕಣ್ಣಿನ ಹಿಂಭಾಗ) ಸಂಬಂಧಿಸಿದ ರೋಗಗಳನ್ನು ಗುರುತಿಸುವುದು ಸುಲಭವಲ್ಲ. ದೃಷ್ಟಿ ಹೀನತೆಗೆ ಕಾರಣವಾದ ಇತರ ರೋಗಗಳಿಗೆ ಸಂಬಂಧಿಸಿದಂತೆ ರೆಟೀನಾದ ರೋಗಗಳು ದೃಷ್ಟಿ ಹೀನತೆಯ ಬಹುದೊಡ್ಡ ಪಾಲನ್ನು ಹೊಂದಿದೆ.

ವಿವಿಧ ರೆಟಿನಾದ ರೋಗಗಳಲ್ಲಿ, ವಯಸ್ಸು ಆಧಾರಿತ ಮ್ಯಾಕ್ಯುಲಾರ್ ಡಿಜನರೇಶನ್ (AMD) ಮತ್ತು ಡಯಾಬಿಟಿಕ್ ಮ್ಯಾಕ್ಯುಲಾರ್ ಎಡೀಮಾ (DME) ಎರಡು ಮುಂದುವರೆಯುವ ರೋಗಗಳು ಮುಖ್ಯವಾದವು. ರೋಗಿಗಳನ್ನು ಸರಿಯಾದ ಸಮಯದಲ್ಲಿ ರೋಗನಿರ್ಣಯ ಮಾಡಿದಲ್ಲಿ AMD ಮತ್ತು DME ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಆದ್ದರಿಂದ, ಈ ರೋಗವನ್ನು ಬೇಗನೆ ಪತ್ತೆ ಮಾಡಲು ಅದಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

ವಯೋ ಆಧಾರಿತ ಮ್ಯಾಕ್ಯುಲಾರ್ ಡಿಜನರೇಶನ್ (AMD) ಮತ್ತು ಡಯಾಬಿಟಿಕ್ ಮ್ಯಾಕ್ಯುಲಾರ್ ಎಡೀಮಾ (DME)

ರೆಟಿನಾ ಕಣ್ಣಿನ ಭಾಗವಾಗಿದ್ದು, ಇದರ ಮೇಲೆ ಅಂತಿಮ ಚಿತ್ರವು ಮೂಡುತ್ತದೆ, ಕ್ಯಾಮರಾದಲ್ಲಿರುವ ಫಿಲಂ ಮೇಲೆ ಚಿತ್ರ ಮೂಡಿದಂತೆ. ರೆಟಿನಾಗೆ ಹಾನಿಯಾದರೆ, ದೃಷ್ಟಿಗೂ ಹಾನಿಯಾಗುತ್ತದೆ.

ವಯೋ ಆಧಾರಿತ ಮ್ಯಾಕ್ಯುಲಾರ್ ಡಿಜನರೇಶನ್ ವೃದ್ಧರಲ್ಲಿ ದೃಷ್ಟಿಹೀನತೆಯ ಪ್ರಮುಖ ಕಾರಣಗಳಲ್ಲೊಂದಾಗಿದೆ. ಇದು ವಿಶ್ವದ ದೃಷ್ಟಿಹೀನತೆಯ 8.7%ರಷ್ಟು ಭಾಗವಾಗಿದೆ. ಡಯಾಬಿಟಿಕ್ ರೆಟಿನೊಪಥಿ ಕಣ್ಣಿನ ಹಿಂಭಾಗದಲ್ಲಿರುವ ರೆಟಿನಾದ ರಕ್ತನಾಳಗಳನ್ನು ಹಾಳುಮಾಡುತ್ತದೆ. ಇದು ವಿಶ್ವದ ದೃಷ್ಟಿಹೀನತೆಯ 4.8% ಭಾಗವನ್ನು ಹೊಂದಿದೆ. ರೆಟಿನೊಪಥಿಯು ಡಯಾಬೆಟಿಕ್ ಮ್ಯಾಕ್ಯುಲಾರ್ ಎಡೀಮಾ (DME) ಗೆ ಮುಂದುವರೆದು, ಇದು ಆಖನ ಸಾಮಾನ್ಯ ರೀತಿಯಾಗಿದೆ. ಹಾಳಾದ ರಕ್ತನಾಳಗಳಿಂದ ದ್ರವಗಳು ರೆಟಿನಾದ ಮ್ಯಾಕ್ಯುಲಾಗೆ ಸೋರಿಕೆ ಆದಾಗ, ರೆಟಿನಾ ಬಾತುಕೊಂಡು ದೃಷ್ಟಿಗೆ ತೊಂದರೆಯಾಗುತ್ತದೆ.

ಸಾಮಾನ್ಯ ರೋಗಲಕ್ಷಣಗಳು ಮತ್ತು ಸೂಚನೆಗಳು
ರೆಟಿನಾದ ರೋಗಗಳ ಲಕ್ಷಣಗಳು ರೆಟಿನಾದ ಡಿಸಾರ್ಡರ್ ನ ವಿಧಾನದ ಆಧರಿಸಿದೆ. ಆದರೆ, ಬಹಳಷ್ಟು ಲಕ್ಷಣಗಳು ಮತ್ತೆಮತ್ತೆ ಕಾಣುತ್ತವೆ ಅಥವ ಅನೇಕ ರೋಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಉದಾಹರಣೆಗೆ:
•    ಮಸುಕಾದ ಅಥವಾ ಅಸ್ಪಷ್ಟವಾದ ಅಥವಾ ವಿಕೃತವಾದ ದೃಷ್ಟಿ
•    ತಪ್ಪಾದ ಬಣ್ಣಗಳು ಕಾಣುತ್ತವೆ
•    ಕಡಿಮೆಯಾದ ಕಾಂಟ್ರಾಸ್ಟ್ ಅಥವಾ ವರ್ಣಗಳ ಸಂವೇದನೆ
•    ದೃಷ್ಟಿಯಲ್ಲಿ ಕಪ್ಪು ಚುಕ್ಕೆಗಳು ಕಾಣುವುದು
•    ಡೊಂಕಾಗಿ ಕಾಣುವ ನೇರವಾದ ರೇಖೆಗಳು
•    ದೂರದ ವಸ್ತುಗಳನ್ನು ನೋಡುವುದು ಕಷ್ಟವಾಗುವುದು

ಸಮಯೋಚಿತ ರೋಗನಿರ್ಣಯ ಮತ್ತು ಚಿಕಿತ್ಸೆಯ ಪದ್ಧತಿ
"ರೆಟಿನಲ್ ಡಿಸಾರ್ಡರ್ ಸಿಂಡ್ರೋಂ ನಿಂದಾಗಿ ರೆಟಿನಾ ಚಿಕಿತ್ಸಾಲಯಕ್ಕೆ ಬರುವ ರೋಗಿಗಳಲ್ಲಿ 50-60% ಜನರು ಈಗಾಗಲೇ ರೋಗದ ಮುಂದುವರೆದ ಸ್ಥಿತಿಯಲ್ಲಿದ್ದಾರೆ. ಮಧುಮೇಹದಿಂದ ಬಳಲುವ ಯುವಜನತೆಯಲ್ಲಿ ಡಯಾಬಿಟಿಕ್ ರೆಟಿನೊಪಥಿಯ ರೋಗನಿರ್ಣಯವಾದರೆ, ಡಯಾಬಿಟಿಕ್ ಮ್ಯಾಕ್ಯುಲಾರ್ ಎಡೀಮಾದಿಂದ ದೃಷ್ಟಿಹೀನತೆಯ ಅಪಾಯವನ್ನು ಅವರು ಎದುರಿಸುತ್ತಾರೆ. ಇದರಿಂದ ಜೀವನದಲ್ಲಿ ಉತ್ಪಾದಕ ವರ್ಷಗಳ ನಾಶವಾಗುತ್ತದೆ, ಹಾಗಿಗಾಗಿ ದೈಹಿಕ ಅಸ್ವಸ್ಥತೆಯ ಜೊತೆಗೆ ಮಾನಸಿಕ ಮತ್ತು ಹಣಕಾಸಿನ ಸಮಸ್ಯೆಗಳೂ ಉಂಟಾಗುತ್ತವೆ. ಸಮಯೋಚಿತ ರೋಗನಿರ್ಣಯದಿಂದ ರೋಗಿಗಳು ಬೇಗನೆ ತಮ್ಮ ರೋಗದ ಬಗ್ಗೆ ತಿಳಿದು, ಚಿಕಿತ್ಸೆ ಪಡೆದು, ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಬಹುದು. ರೋಗಿಯು ಅಥವಾ ಅವರ ಆರೈಕೆ ಮಾಡುವವರು ರೋಗದ ಲಕ್ಷಣಗಳನ್ನು ಅರ್ಥಮಾಡಿಕೊಂಡಾಗ ಮತ್ತು ಸಮಯದಲ್ಲಿ ತಜ್ಞರ ಸಲಹೆ ಪಡೆದಾಗ ಮಾತ್ರ ಇದು ಸಾಧ್ಯವಾಗುತ್ತದೆ" ಎಂದು ಡಾ. ಶ್ರೀಭಾರ್ಗವ ನಟೇಶ್, ನೇತ್ರ ಕಣ್ಣಿನ ಆಸ್ಪತ್ರೆ, ಬೆಂಗಳೂರು, ಹೇಳುತ್ತಾರೆ.

"ರೆಟಿನಾ ರೋಗಗಳ ಮುಂಚಿತವಾದ ಲಕ್ಷಣಗಳನ್ನು ಮತ್ತು ಗುರುತುಗಳನ್ನು ಪತ್ತೆಮಾಡುವಲ್ಲಿ ರೋಗಿಗಳು ಎಚ್ಚರ ವಹಿಸಬೇಕು. ಬಹಳಷ್ಟು ಸಲ, AMD ಯ ರೋಗಲಕ್ಷಣಗಳನ್ನು ವೃದ್ಧಾಪ್ಯವೆಂದು ತಿಳಿಯಲಾಗುತ್ತದೆ. ಮಧುಮೇಹಿಗಳು ಪ್ರತಿ ಆರು ತಿಂಗಳಿಗೊಮ್ಮೆ ಕಣ್ಣಿನತಜ್ಞರು/ರೆಟಿನಾಲಜಿಸ್ಟ್ ಅನ್ನು ಭೇಟಿಯಾಗಲು ಸಲಹೆ ನೀಡುತ್ತೇವೆ ಏಕೆಂದರೆ ಅವರಿಗೆ ಡಯಾಬಿಟಿಕ್ ರೆಟಿನೊಪಥಿ ಬರುವ ಹೆಚ್ಚಿನ ಅಪಾಯವಿದೆ. AMD ಮತ್ತು DME ಗಳ ಶೀಘ್ರ ರೋಗನಿರ್ಣಯದಿಂದ ದೃಷ್ಟಿಹೀನತೆಯನ್ನು ತಪ್ಪಿಸುವ ಹೆಚ್ಚು ಸಾಧ್ಯತೆಯಿರುತ್ತದೆ."
ಇಂದು ರೋಗದ ವರ್ಧನೆಯನ್ನು ಕಡಿಮೆ ಮಾಡುವ ಅಥವಾ ನಿಲ್ಲಿಸುವ ಚಿಕಿತ್ಸೆಗಳು ಲಭ್ಯವಿದೆ. ಭಾರತದಲ್ಲಿ ಲಭ್ಯವಿರುವ ಕೆಲವು ಚಿಕಿತ್ಸೆಯ ಆಯ್ಕೆಗಳೆಂದರೆ ಲೇಸರ್ ಫೊಟೊಕ್ಯಾಗ್ಯುಲೇಶನ್, ಆಂಟಿ ವಿಇಜಿಎಫ್ (ವ್ಯಾಸ್ಕ್ಯುಲಾರ್ ಎಂಡೊಥೀಲಿಯಲ್ ಗ್ರೋತ್ ಫ್ಯಾಕ್ಟರ್) ಚುಚ್ಚುಮದ್ಧುಗಳು ಮತ್ತು ಇವೆರಡನ್ನೂ ಒಳಗೊಂಡ ಸಮ್ಮಿಶ್ರ ಚಿಕಿತ್ಸೆಗಳು ಎಂದು ಡಾ. ರಾಜಾ ನಾರಾಯಣನ್, ಎಲ್ ವಿ ಪ್ರಸಾದ್ ಕಣ್ಣಿನ ಸಂಸ್ಥೆ, ಹೈದರಾಬಾದ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com