ಗರ್ಭಾವಸ್ಥೆಯಲ್ಲಿ ಖಿನ್ನತೆಯು ನಿಮ್ಮ ಮಕ್ಕಳ ನಿದ್ರೆಯ ಮೇಲೆ ಪರಿಣಾಮ ಬೀರಬಹುದು

ನಿಮ್ಮ ಮಗುವಿಗೆ ನಿದ್ರೆ ಸಮಸ್ಯೆಯಾಗುತ್ತಿದೆಯೆ? ಹೌದು ಎಂದಾದರೆ ನೀವು ಗರ್ಭಿಣಿಯಾಗಿದ್ದಾಗ ಖಿನ್ನತೆಗೆ ಒಳಗಾಗುತ್ತಿದ್ದದ್ದೂ ಇದಕ್ಕೆ ಕಾರಣವಾಗಿರಬಹುದು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ನಿಮ್ಮ ಮಗುವಿಗೆ ನಿದ್ರೆ ಸಮಸ್ಯೆಯಾಗುತ್ತಿದೆಯೆ? ಹೌದು ಎಂದಾದರೆ ನೀವು ಗರ್ಭಿಣಿಯಾಗಿದ್ದಾಗ ಖಿನ್ನತೆಗೆ ಒಳಗಾಗುತ್ತಿದ್ದದ್ದೂ ಇದಕ್ಕೆ ಕಾರಣವಾಗಿರಬಹುದು. ತಾಯಿಯ ಪ್ರಸವ ಪೂರ್ವ ಅಥವಾ ಪ್ರಸವದ ವೇಳೆಯ ಖಿನ್ನತೆ ಮಕ್ಕಳಲ್ಲಿ ನಿದ್ರೆಯ ಸಮಸ್ಯೆಯನ್ನು ತಂದೊಡ್ಡಬಹುದು ಎಂದು ಹೊಸ ಅಧ್ಯಯನ ಒಂದು ಹೇಳಿದೆ.
ಗರ್ಭಿಣಿಯ ಗರ್ಭಾವಸ್ಥೆ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಯಾರು ಹೆಚ್ಚು ಹೆಚ್ಚು ಸಂತಸದಲ್ಲಿರುತ್ತಾರೆಯೋ ಅವರ ಮಕ್ಕಳು ನಿದ್ರೆಯ ಸಮಸ್ಯೆಯನ್ನು ಹೊಂದುವುದಿಲ್ಲ ಎಂದು ಅಧ್ಯಯನದಿಂದ ತಿಳಿದುಬ್ಂದಿದೆ.
"ಗರ್ಭಿಣಿ ತಾಯಿಯ ಆರೋಗ್ಯ ಹಾಗೂ ಸಂತಸದ ಕುರಿತಂತೆ ಕಾಳಜಿ ವಹಿಸಬೇಕು ಎನ್ನುವುದನ್ನು ಈ ಅಧ್ಯಯನ ಬಹಿರಂಗಪಡಿಸಿದೆ. ಹಾಗೆಯೇ ಗರ್ಭಿಣಿ ಸ್ತ್ರೀಗೆ ಅವರ ಕುಟುಂಬ, ಸಮುದಾಯದ ಸಹಕಾರ ಬೇಕೆಂದು ಇದು ತೋರಿದೆ" ಅಮೆರಿಕಾದ ಪೆನ್ಸಲ್ವೇನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಿಯಾಂಗ್ ನಾಂಗ್ ಲಿಯು ಹೇಳಿದ್ದಾರೆ.
ಇದು ತಾಯಿಯ ಆರೋಗ್ಯ ಮಾತ್ರವಲ್ಲ ಮಕ್ಕಳ ವರ್ತನೆ, ದೀರ್ಘಕಾಲದ, ನಿದ್ರೆ ಸಮಸ್ಯೆಯನ್ನೂ ಸಹ ದೂರಮಾಡಲಿದೆ ಎಂದು ಅವರು ವಿವರಿಸಿದ್ದಾರೆ.
ಬಾಲ್ತಿಮೋರ್ ನ "ಸ್ಲೀಪ್ 2018" ಸಭೆಯಲ್ಲಿ ಈ ಅಧ್ಯಯನ ವರದಿ ಮಂಡನೆಯಾಗಿದ್ದು ಇದಕ್ಕಾಗಿ ಸುಮಾರು ಆರು ವರ್ಷದೊಳಗಿನ ಮಕ್ಕಳನ್ನೊಳಗೊಂಡ 833 ಶಿಶುವಿಹಾರಗಳ ದತ್ತಾಂಶವನ್ನು ಬಳಸಿಕೊಳ್ಳಲಾಗಿದೆ.
ಪ್ರಸವಪೂರ್ವ, ಪ್ರಸವದ ವೇಳೆಯ ಖಿನ್ನತೆ ಸೇರಿದಂತೆ ಗರ್ಭಿಣಿ, ತಾಯಿಯ ಭಾವನಾತ್ಮಕ ಸ್ಥಿತಿಯನ್ನು ಸಹ ಈ ಅಧ್ಯಯನದಲ್ಲಿ ಸೇರಿಸಲಾಗಿದೆ. ಈ ಕುರಿತಂತೆ ಸಂತಸದ ವಿಚಾರ ಸಂಬಂಧ ಐದು, ಖಿನ್ನತೆ ಸಂಬಂಧ ಮೂರು ಹಂತದ ಪ್ರಶ್ನೆಗಳನ್ನು ಸಿದ್ದಪಡಿಸಲಾಗಿತ್ತು.
ಪ್ರಸವ ಪೂರ್ವ ಅಥವಾ ಪ್ರಸವದ ಖಿನ್ನತೆ ಇರುವ ತಾಯಂದಿರ ಮಕ್ಕಳಲ್ಲಿ ನಿದ್ರೆಗೆ ಸಂಬಂಧಿಸಿ ಸಮಸ್ಯೆಯಾಗುವುದು ಮಾತ್ರವಲ್ಲ ಅಂತಹಾ ಮಕ್ಕಳ ವರ್ತನೆಯಲಿಯೂ ಬದಲಾವಣೆಗಳಿರುತ್ತದೆ ಎನ್ನುವುದನ್ನು ಅಧ್ಯಯನ ವರದಿ ಬಹಿರಂಗಪಡಿಸಿದೆ. 
ಗರ್ಭಾವಸ್ಥೆಯಲ್ಲಿರುವ ವೇಳೆಯಲ್ಲಿ ತಾಯಿಯ ಭಾವೋದ್ವೇಗ, ಖಿನ್ನತೆ ಸಮಸ್ಯೆಗಳು ಮಗುವಿನ ವರ್ತನೆ ಮೇಲೆ ಪರಿಣಾಮ ಉಂಟು ಮಾಡಲಿದೆ ಎಂದು ಲಿಯು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com