ಸರಿಯಾದ ಆಹಾರ ಮತ್ತು ಸಾಕಷ್ಟು ನಿದ್ರೆ ಚಿರ ಯೌವ್ವನದ ಗುಟ್ಟು

ನಡುಹರೆಯಕ್ಕೆ ಬಂದಾಗ ಮಹಿಳೆಯರಿಗೆ ಮತ್ತು ಪುರುಷರಿಗೆ ತಮ್ಮ ಚಹರೆ, ಆರೋಗ್ಯದ ಬಗ್ಗೆ ಯೋಚನೆಯಾಗುತ್ತದೆ. ವಯಸ್ಸಾದಂತೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಡುಹರೆಯಕ್ಕೆ ಬಂದಾಗ ಮಹಿಳೆಯರು ಮತ್ತು ಪುರುಷರು ತಮ್ಮ ಚಹರೆ, ಆರೋಗ್ಯದ ಬಗ್ಗೆ ಯೋಚನೆಯಾಗುತ್ತದೆ. ವಯಸ್ಸಾದಂತೆ ಕಾಣಬಾರದು, ದೀರ್ಘಕಾಲದವರೆಗೆ ಬದುಕಬೇಕು ಎಂಬ ಆಸೆ ಎಲ್ಲರಲ್ಲಿ ಇರುತ್ತದೆ. ಹಾಗಾದರೆ ದೀರ್ಘಾಯಸ್ಸು ಮತ್ತು ಮುಪ್ಪಾದಂತೆ ಕಾಣದಿರುವುದರ ಗುಟ್ಟೇನು ಎಂದು ಕೇಳಿದರೆ ಸರಿಯಾದ ಆಹಾರ ಸೇವನೆ, ಸಾಕಷ್ಟು ನಿದ್ದೆ ಮತ್ತು ಧನಾತ್ಮಕವಾಗಿ ಯೋಚಿಸುವುದು.

ಮನುಷ್ಯನ ವಯಸ್ಸು ಮತ್ತು ಆರೋಗ್ಯಕ್ಕೆಹಲವು ಅಂಶಗಳು ಕಾರಣವಾಗುತ್ತದೆ. ಅವುಗಳಲ್ಲೊಂದು ನಾವು ಸೇವಿಸುವ ಆಹಾರ. ನೀವು ಶರೀರಕ್ಕೆ ಏನು ತೆಗೆದುಕೊಳ್ಳುತ್ತೀರಿ ಅದರ ಮೇಲೆ ಬಾಹ್ಯ ನೋಟ ಅವಲಂಬಿಸಿರುತ್ತದೆ. ಮತ್ತೊಂದು ನಾವು ಯೋಚನೆ ಮಾಡುವ ರೀತಿ. ಧನಾತ್ಮಕವಾಗಿ ಯೋಚಿಸುತ್ತಾ, ಸಂತೋಷವಾಗಿದ್ದರೆ ನಮ್ಮ ಚರ್ಮಗಳು ಹೆಚ್ಚು ಕಾಂತಿಯುತವಾಗಿರುತ್ತದೆ. ಅಸಂತೋಷವಾಗಿದ್ದರೆ, ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದರೆ ನಮ್ಮ ದೇಹಕ್ಕೆ ಕೂಡ ಬೇಗನೆ ಮುಪ್ಪು ಬರುತ್ತದೆ ಎಂದು ಸೋನಿ ಬಿಬಿಸಿ ಅರ್ತ್ ಶೋ ಹೌ ಟು ಸ್ಟೇ ಯಂಗ್ ನಲ್ಲಿ ಪೌಷ್ಚಿಕಾಂಶ ಮತ್ತು ಕ್ಷೇಮ ತಜ್ಞೆ ನೇಹ ರಂಗ್ಲಾನಿ ಹೇಳಿದ್ದಾರೆ. ಮನುಷ್ಯನಿಗೆ ಬೇಕಾದ ಮೂರನೇ ಅಂಶ ನಿದ್ದೆ. ದೇಹಕ್ಕೆ ಸಾಕಷ್ಟು ನಿದ್ದೆ, ವಿಶ್ರಾಂತಿ ಸಿಕ್ಕಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುತ್ತಾರೆ ಅವರು.

ಮನುಷ್ಯ ಸೇವಿಸುವ ಆಹಾರ ಆತನ ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಿಎಲ್ ಸಿಸಿ ಆರೋಗ್ಯ ತಜ್ಞೆ ಅಂಜು ಗೈ. ಉತ್ತಮ ಸಮತೋಲಿತ ಆಹಾರ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಿಂದ ದಿನನಿತ್ಯದ ಚಟುವಟಿಕೆಗಳು ಕೂಡ ಉಲ್ಲಾಸದಾಯಕವಾಗಿರುತ್ತದೆ. ನಾವು ಪ್ರತಿನಿತ್ಯ ಮಾಡುವ ಶಾರೀರಿಕ ಚಟುವಟಿಕೆಗಳ ಆಧಾರದಲ್ಲಿ ಆಹಾರವನ್ನು ಸೇವಿಸಬೇಕು ಎನ್ನುತ್ತಾರೆ ಗೈ.

ಹಣ್ಣು. ತರಕಾರಿಗಳು, ಬೀಜ, ಧಾನ್ಯಗಳು, ದ್ವಿದಳ ಧಾನ್ಯಗಳು ದೇಹಕ್ಕೆ ಅತ್ಯಂತ ಮುಖ್ಯವಾಗಿರುತ್ತದೆ, ನೈಸರ್ಗಿಕ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು, ಸಂಸ್ಕರಿತ ಆಹಾರ ಪದಾರ್ಥಗಳು ಅಷ್ಟು ಉತ್ತಮವಲ್ಲ, ದೇಹಕ್ಕೆ ಅವಶ್ಯವಿರುವ ಪೌಷ್ಟಿಕಾಂಶ, ವಿಟಮಿನ್, ಜೀವಸತ್ವಗಳು ದೇಹಕ್ಕೆ ಸಿಕ್ಕಿದರೆ ಚರ್ಮ ಕಾಂತಿಯುತವಾಗಿ ಉಳಿದು ವಯಸ್ಸಾದಂತೆ ಕಾಣುವುದಿಲ್ಲ ಎನ್ನುತ್ತಾರೆ ರಂಗ್ಲಾನಿ.

ಅನಾರೋಗ್ಯಕರ ಆಹಾರ ಸೇವನೆಯಿಂದ ಆರೋಗ್ಯ ಹಾಳಾಗುವುದಲ್ಲದೆ ಚರ್ಮ ಹಾಳಾಗುತ್ತದೆ. ಕಾಫಿ, ಟೀ, ಆಲ್ಕೋಹಾಲ್, ಸಿಗರೇಟು ಸೇವನೆ ಇತ್ಯಾದಿ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತವೆ ಎನ್ನುತ್ತಾರೆ ರಂಗ್ಲಾನಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com