ಆಹಾರ ಪದ್ಧತಿ ಬದಲಾದಂತೆ ತೂಕ, ಎತ್ತರ ಕೂಡ ಬದಲಾಗುತ್ತದೆ: ಸಂಶೋಧನೆ

ಮನುಷ್ಯನ ಆರೋಗ್ಯಕ್ಕೆ ಆಹಾರ ಪದ್ಧತಿ ಎಂಬುದು ಅತ್ಯಂತ ಮುಖ್ಯವಾದದ್ದು. ಆಹಾರದ ಪದ್ಧತಿ ಬದಲಾದಂತೆ ವ್ಯಕ್ತಿಯ ತೂಕ ಹಾಗೂ ಎತ್ತರ ಕೂಡ ಬದಲಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಮನುಷ್ಯನ ಆರೋಗ್ಯಕ್ಕೆ ಆಹಾರ ಪದ್ಧತಿ ಎಂಬುದು ಅತ್ಯಂತ ಮುಖ್ಯವಾದದ್ದು. ಆಹಾರದ ಪದ್ಧತಿ ಬದಲಾದಂತೆ ವ್ಯಕ್ತಿಯ ತೂಕ ಹಾಗೂ ಎತ್ತರ ಕೂಡ ಬದಲಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. 
ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ಜನಸಂಖ್ಯೆ 9 ಬಿಲಿಯನ್ ದಾಟಲಿದೆ. ಪ್ರಸ್ತುತ 7.6 ಬಿಲಿಯನ್ ರಷ್ಟು ಜನಸಂಖ್ಯೆಯಿದ್ದು, 2050ನೇ ವರ್ಷದಷ್ಟರಲ್ಲಿ 9 ಬಿಲಿಯನ್ ರಷ್ಟು ಜನಸಂಖ್ಯೆಗೆ ಆಹಾರ ಪೂರೈಕೆ ಮಾಡುವುದು ಅತ್ಯಂತ ಕಠಿಣವಾಗಲಿದೆ ಎಂದು ನಾರ್ವೇಜಿಯನ್ ವಿಶ್ವವಿದ್ಯಾಲಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧಕ ಗಿಬ್ರನ್ ವಿಟಾ ಅವರು ಹೇಳಿದ್ದಾರೆ. 
ಸಂಶೋಧನೆಯಲ್ಲಿ 1975 ಮತ್ತು 2014ರಲ್ಲಿ 186 ದೇಶಗಳಲ್ಲಿ ಬದಲಾಗುತ್ತಿರುವ ಸಂಖ್ಯೆಯನ್ನು ಗಮನಿಸಲಾಗಿದೆ. ಸಂಶೋಧನೆಯನ್ನು ಆಯಾಮಗಳಲ್ಲಿ ಅಧ್ಯಯನ ನಡೆಸಲಾಗಿದೆ. ಸರಾಸರಿಯಷ್ಟು ಜನರು ಹೆಚ್ಚೆಚ್ಚು ಎತ್ತರ ಹಾಗೂ ತೂಕ ಹೆಚ್ಚಾಗುತ್ತಿರುವುದು ಮತ್ತು ವೃದ್ಧಾಪ್ಯಕ್ಕೆ ಜಾರುತ್ತಿರುವುದನ್ನು ಗಮನಿಸಲಾಗಿದೆ ಎಂದು ತಿಳಿಸಿದ್ದಾರೆ. 
2014ರಲ್ಲಿ ವಯಸ್ಕ ಜನರಲ್ಲಿ ಶೇ.14 ರಷ್ಟು ತೂಕ ಹೆಚ್ಚಾಗಿದೆ. ಶೇ.1.3 ರಷ್ಟು ಎತ್ತರ ಹೆಚ್ಚಾಗಿದೆ. 6.2ರಷ್ಟು ಜನರು ವೃದ್ಧಾಪ್ಯಕ್ಕೆ ಜಾರಿದ್ದಾರೆ. 1975ಕ್ಕೆ ಹೋಲಿಕೆ ಮಾಡಿದರೆ, ಪ್ರಸ್ತುತ ಜನರಿಗೆ ಶೇ.6.1ರಷ್ಟು ಹೆಚ್ಚು ಶಕ್ತಿಯ ಅಗತ್ಯವಿದೆ. ಇದೇ ಟ್ರೆಂಡ್ ಸಾಕಷ್ಟು ದೇಶಗಳಲ್ಲಿಯೂ ಮುಂದುವರೆದಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 
1975ರಲ್ಲಿ ಜನರು ದಿನಕ್ಕೆ 2,465 ಕಿಲೋ ಕ್ಯಾಲರಿಗಳಷ್ಟು ಆಹಾರ ಸೇವಿಸುತ್ತಿದ್ದರು. 2014 ರಲ್ಲಿ ಇದು 2,615 ಕಿಲೋ ಕ್ಯಾಲರಿಗೆ ಬಂದು ನಿಂತಿದೆ. ಸೇ.129ರಷ್ಟು ಆಹಾರ ಸೇವನೆ ಹೆಚ್ಚಾಗಿರುವುದು ಇದರಲ್ಲಿ ಕಂಡು ಬಂದಿದೆ. ಈ ಬೆಳವಣಿಗೆಗೆ ಜನಸಂಖ್ಯೆ ಹೆಚ್ಚಾಗುತ್ತಿರುವುದೇ ಕಾರಣ. ಶೇ.15 ರಷ್ಟು ಎತ್ತರ ಹಾಗೂ ತೂಕಗಳು ಹೆಚ್ಚಾಗುತ್ತಿವೆ ಎಂದು ಸಂಶೋಧನಾ ವರದಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com