ಮಹಿಳೆಯರನ್ನು ಕಾಡುವ ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ನೈಸರ್ಗಿಕ ವಿಧಾನಗಳು

ಭಾರತದಲ್ಲಿ ಸಾಂಕ್ರಾಮಿಕ ರೋಗ ಎನಿಸುವಷ್ಟು ಅತೀ ವೇಗವಾಗಿ ಬೆಳೆಯುತ್ತಿರುವ ಕಾಯಿಲೆಯೆಂದರೆ ಅದು ಮಧುಮೇಹ. ದೇಹದಲ್ಲಿರುವ ಗ್ಲೂಕೋಸ್ ಪ್ರಮಾಣವನ್ನು ಸರಿಯಾಗಿ ಬಳಸಿಕೊಳ್ಳದೇ ರಕ್ತದಲ್ಲಿ ಮತ್ತು ಮೂತ್ರದಲ್ಲಿ ಹೆಚ್ಚು ಸಕ್ಕರೆ ಅಂಶಕ್ಕೆ ಕಾರಣವಾಗುವ ದೇಹಸ್ಥಿತಿಯೇ ಮಧುಮೇಹ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಭಾರತದಲ್ಲಿ ಸಾಂಕ್ರಾಮಿಕ ರೋಗ ಎನಿಸುವಷ್ಟು ಅತೀ ವೇಗವಾಗಿ ಬೆಳೆಯುತ್ತಿರುವ ಕಾಯಿಲೆಯೆಂದರೆ ಅದು ಮಧುಮೇಹ. ದೇಹದಲ್ಲಿರುವ ಗ್ಲೂಕೋಸ್ ಪ್ರಮಾಣವನ್ನು ಸರಿಯಾಗಿ ಬಳಸಿಕೊಳ್ಳದೇ ರಕ್ತದಲ್ಲಿ ಮತ್ತು ಮೂತ್ರದಲ್ಲಿ ಹೆಚ್ಚು ಸಕ್ಕರೆ ಅಂಶಕ್ಕೆ ಕಾರಣವಾಗುವ ದೇಹಸ್ಥಿತಿಯೇ ಮಧುಮೇಹ. ಮಧುಮೇಹವನ್ನು ಸಂಪರ್ಕವಾಗಿ ನಿರ್ವಹಿಸದಿದ್ದರೆ, ದೀರ್ಘಾವಧಿಯಲ್ಲಿ ಹೃದ್ರೋಗ, ಪಾರ್ಶ್ವವಾಯು, ದೃಷ್ಟಿ ಮಾಂದ್ಯತೆ, ನರದೌರ್ಬಲ್ಯ ಹಾಗೂ ನಪುಂಸಕತೆ ಇತ್ಯಾದಿ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
ಇತ್ತೀಚಿನ ದಿನಗಳಲ್ಲಿ ಮಧುಮೇಹ ಎನ್ನುವುದು ಪ್ರಾಣ ತಿನ್ನುವ ಖಾಯಿಲೆಯಾಗಿ ಪರಿಣಮಿಸಿದೆ. ದೇಶದಲ್ಲಿರುವ ಪ್ರತೀ 11 ಮಂದಿಯ ಪೈಕಿ ಒಬ್ಬರು ಮಧುಮೇಹ ರೋಗದಿಂದ ಬಳಲುತ್ತಿರುತ್ತಾರೆ. ಇದರಲ್ಲಿ ಒಬ್ಬರು ಅಥವಾ ಇಬ್ಬರಿಗೆ ತಾವು ಮಧುಮೇಹದಿಂದ ಬಳುತ್ತಿರುವ ಬಗ್ಗೆ ಮಾಹಿತಿಗಳೇ ಇರುವುದಿಲ್ಲ. 
ಇಂಟರ್ ನ್ಯಾಷನಲ್ ಡಯಾಬಿಟೀಸ್ ಫೆಡರೇಷನ್'ನ 2017ನೇ ವರದಿಯಲ್ಲಿ ವಿಶ್ವದಲ್ಲಿ 199ರಷ್ಟು ಮಿಲಿಯನ್'ರಷ್ಟು ಮಹಿಳೆಯರು ಮಧುಮೇಹದಿಂದ ಬಳಲುತ್ತಿದ್ದಾರೆಂದು ಹೇಳಿದೆ. 2040ರ ವೇಳೆಗೆ ಇದರ ಸಂಖ್ಯೆ 313 ಮಿಲಿಯನ್ ಆಗಲಿದೆ ಎಂದು ಅಂದಾಜಿಸಲಾಗಿದೆ.  ಸಾಮಾನ್ಯವಾಗಿ ಮಹಿಳೆಯರಲ್ಲಿ ಗರ್ಭಧಾರಣೆ ಸಂದರ್ಭದಲ್ಲಿ ಮತ್ತು ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಮಧುಮೇಹ ಕಂಡು ಬರುವ ಸಾಧ್ಯತೆಗಳಿರುತ್ತವೆ. ಗರ್ಭದಾರಣೆಯ ಮಧುಮೇಹವನ್ನು ಪತ್ತೆ ಮಾಡದಿದ್ದರೆ ಹಾಗೂ ಚಿಕಿತ್ಸೆ ನೀಡದಿದ್ದರೆ ಅದು ಗಂಡಾಂತರಕಾರಿಯಾಗಿ ಪರಿಣಮಿಸುತ್ತದೆ. ಇದು ಮಹಿಳೆ ಹಾಗೂ ಶಿಶು ತಮ್ಮ ಜೀವನ ಪರ್ಯಂತ ಮಧುಮೇಹ ರೋಗದಿಂದ ನರಳುವಂತೆ ಮಾಡುತ್ತದೆ. 
ಮಧುಮೇಹವನ್ನು ನಿಯಂತ್ರಣದಲ್ಲಿಡಲು ಆಹಾರ ಪದ್ಧತಿ ಮಹತ್ವದ ಪಾತ್ರ ವಹಿಸುತ್ತದೆ. ಗರ್ಭಧಾರಣೆ ವೇಲೆ ಕಂಡುಬರುವ ಮಧುಮೇಹ ರೋಗದ ನಿರ್ವಹಣೆಯು ಅತ್ಯಂತ ಸೂಕ್ಷ್ಮ ವಿಚಾರವಾಗಿರುತ್ತದೆ. ಔಷಧಿ, ಪ್ರಸೂತಿ, ಆಹಾರ ಪ್ರಸವ ಮತ್ತು ಇತರೆ ವಿಶೇಷತೆಗಳಂಥ ಬಹು ಮುಖ್ಯ ವಿಷಯಗಳನ್ನು ಒಳಗೊಂಡಿರುತ್ತದೆ. 
ಗರ್ಭಧಾರಣೆಗೂ ಮುನ್ನ ಸೂಕ್ತ ಇನ್ಸುಲಿನ ಚಿಕಿತ್ಸೆಯೊಂದಿಗೆ ಉತ್ತಮ ರೀತಿಯಲ್ಲಿ ಮಧುಮೇಹವನ್ನು ನಿಯಂತ್ರಿ,ಬಹುದು. ಗರ್ಭಧಾರಣೆ ವೇಳೆಯೂ ಸಮರ್ಪಕವಾಗಿ ನಿರ್ವಹಣೆ ಮಾಡುವುದರಿಂದ ಹೆರಿಗೆ ಮತ್ತು ಪ್ರಸವ ಸಂದರ್ಭದ ತೊಡಕುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. 
ಮಹಿಳೆಯರು ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸಿಕೊಳ್ಳುವ ಕೆಲ ವಿಧಾನಗಳು ಇಲ್ಲಿವೆ...
ಖರ್ಜೂರ
ಖರ್ಜೂರದಲ್ಲಿ ಅತೀ ಹೆಚ್ಚು ಫೈಬರ್ (ನಾರಿನ ಅಂಶ) ಅಂಶವಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಖರ್ಜೂರದಲ್ಲಿರುವ ನಾರಿನ ಅಂಶ ಟೈಪ್-2 ಮಧುಮೇಹ ಇರುವವರಿಗೆ ಅತ್ಯಂತ ಸಹಾಯಕಾರಿಯಾಗಿದೆ. 
ಹಾಗಲಕಾಯಿ
ಸಕ್ಕರೆ ಕಾಯಿಲೆ ಇರುವವರಿಗೆ ಹಾಗಲಕಾಯಿ ರಾಮಬಾಣವಿದ್ದಂತೆ. ಪ್ರತೀನಿತ್ಯ ಹಾಗಲಕಾಯಿಯನ್ನು ಸೇವಿಸುತ್ತಿದ್ದರೆ, ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಹಾಗಲಕಾಯಿಯಲ್ಲಿರುವ ಪ್ರತೀ ಭಾಗವೂ ಚಿಕಿತ್ಸೆ ನೀಡಲು ಪ್ರಯೋಜನಕಾರಿಯಾಗ ಅಂಶಗಳನ್ನು ಹೊಂದಿದೆ. 
ಅಶ್ವತ್ಥ ಮರದ ತೊಗಟೆ
ಅಶ್ವತ್ಥ ಮರದಲ್ಲಿ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಈ ಮರದ ತೊಗಟೆಯಿಂದ ಕಷಾಯವನ್ನು ತಯಾರಿಸಿ ಮಧುಮೇಹದ ಚಿಕಿತ್ಸೆಗೆ ಬಳಸಲಾಗುತ್ತದೆ. ಇದರ ತೊಗಟೆಯಿಂದ ತಯಾರಿಸಿದ ಕಷಾಯವನ್ನು 21 ದಿನಗಳ ಕಾಲ ಸೇವನೆ ಮಾಡುವುದರಿಂಗ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ ಎಂದು ಅಧ್ಯಯನದಲ್ಲೂ ಸಾಬೀತಾಗಿದೆ. ಇದಲ್ಲದೆ, ದೇಹದಲ್ಲಿರುವ ಕೊಬ್ಬುಗಳಿಂದ ಉಂಟಾಗುವ ಸಮಸ್ಯೆಗಳನ್ನೂ ಇದು ದೂರ ಮಾಡುತ್ತದೆ. 
ನೇರಳೆಹಣ್ಣು
ನೇರಳೆ ಹಣ್ಣು ಅತೀ ಹೆಚ್ಚು ರೋಗ ನಿರೋಧಕ ಗುಣವನ್ನು ಹೊಂದಿರುವ ಹಣ್ಣಾಗಿದೆ. ಇನ್ಸುಲಿನ್ ಇಲ್ಲದಿದ್ದ ಸಂದರ್ಭದಲ್ಲಿ ಯೂರೋಪ್ ನಲ್ಲಿ ನೇರಳೆಹಣ್ಣನ್ನೇ ಮಧುಮೇಹಕ್ಕೆ ಚಿಕಿತ್ಸೆಯೆಂದು ಬಳಕೆ ಮಾಡಲಾಗುತ್ತಿತ್ತು. ಅಲ್ಲದೆ, ನೇರಳೆಹಣ್ಣ ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. 
ತುಳಸಿ
ತುಳಸಿ ಗಿಡದಲ್ಲಿರುವ ಪ್ರತೀ ಭಾಗವನ್ನು ಔಷಧಗಳಿಗೆ ಬಳಕೆ ಮಾಡಲಾಗುತ್ತದೆ. ತುಳಸಿ ಗಿಡದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಪ್ರತೀನಿತ್ಯ ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಮಾನವ ದೇಹದಲ್ಲಿನ ಯೂರಿಯಾವನ್ನು ಇದು ಕಡಿಮೆ ಮಾಡುತ್ತದೆ. 
ಮೆಂತ್ಯ ಕಾಳು
ಮೆಂತ್ಯೆ ಸೊಪ್ಪು ಹಾಗೂ ಕಾಳು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಪ್ರತೀ ನಿತ್ಯ ಒಂದು ಚಮಚದಷ್ಟು ಮೆಂತ್ಯಕಾಳನ್ನು ಸೇವನೆ ಮಾಡುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಪ್ರತೀನಿತ್ಯ 10 ಗ್ರಾಂನಷ್ಟು ಮೆಂತ್ಯವನ್ನು ಸೇವನೆ ಮಾಡಬಹುದು. 
ಶಿಲಾಜಿತ್
ಇದನ್ನು ಆಯಾಸ ನಿವಾರಣೆ, ಶಕ್ತಿ ಹೆಚ್ಚಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಾಗಲು, ವಯಸ್ಸಾಗುವಿಕೆ ತಡೆಯಲು, ಇರೆಕ್ಟಾಯಿಲ್ ಡಿಸ್ ಫಂಕ್ಷನ್ ಮೊದಲಾದ ಸಮಸ್ಯೆ ನಿವಾರಣೆ ಮಾಡಲು ಬಳಕೆ ಮಾಡಲಾಗುತ್ತದೆ. ಇದೊಂದು ಬೆಟ್ಟಗಳ ನಡುವಿನ ಶಿಲಾಶಿಖರಗಳಲ್ಲಿ ಅಂಟಂಟಾಗಿ ಸಿಗುವ ಸಿದ್ಧ ಲೇಹ್ಯವಾಗಿದೆ. ಮಾನವನ ದೇಹದಲ್ಲಿ ಉಂಟಾಗುವ ಸಾಕಷ್ಟು ರೋಗಗಳಿಗೆ ಇದನ್ನು ಔಷಧವಾಗಿ ಬಳಕೆ ಮಾಡಲಾಗತ್ತದೆ. ಈ ಶಿಲಾಜಿತ್'ನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com