ಭಾರತದಲ್ಲೇ ಪ್ರಥಮ! ತನ್ನ ತಾಯಿಯ ಗರ್ಭಾಶಯದಿಂದ ಮಗುವಿಗೆ ಜನ್ಮ ನೀಡಿದ ಮಹಿಳೆ

ರ್ಭಾಶಯದ ಕಸಿಗೆ ಒಳಗಾಗಿದ್ದ 28 ವರ್ಷದ ಮಹಿಳೆ ಹೆಣ್ಣು ಮಗುವೊಂದಕ್ಕೆ ಜನ್ಮ ನಿಡಿದ್ದಾರೆ. ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಈ ಹೆಣ್ಣು ಮಗುವಿನ ಜನನವಾಗಿದ್ದು....
ತನ್ನ ತಾಯಿಯ ಗರ್ಭಾಶಯದಿಂದ ಮಗುವಿಗೆ ಜನ್ಮ ನೀಡಿದ ಮಹಿಳೆ
ತನ್ನ ತಾಯಿಯ ಗರ್ಭಾಶಯದಿಂದ ಮಗುವಿಗೆ ಜನ್ಮ ನೀಡಿದ ಮಹಿಳೆ
ಪುಣೆ: ಗರ್ಭಾಶಯದ ಕಸಿಗೆ ಒಳಗಾಗಿದ್ದ 28 ವರ್ಷದ ಮಹಿಳೆ ಹೆಣ್ಣು ಮಗುವೊಂದಕ್ಕೆ ಜನ್ಮ ನಿಡಿದ್ದಾರೆ. ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಈ ಹೆಣ್ಣು ಮಗುವಿನ ಜನನವಾಗಿದ್ದು ಇಂತಹಾ ಪ್ರಕರಣವೊಂದು ಬಾರತದಲ್ಲಿ ಹಾಗೂ ಏಷ್ಯಾದಲ್ಲಿಯೇ ಇದು ಮೊದಲಿನದು ಎನ್ನಲಾಗಿದೆ.
ಗುಜರಾತ್  ವಡೋದರಾ ನಿವಾಸಿಯಾದ ಮೀನಾಕ್ಷಿ ವಾಲನ್ ಮೇ 2017 ರಲ್ಲಿ ಗರ್ಭಾಶಯದ ಕಸಿ ಮಾಡಿಸಿಕೊಂಡಿದ್ದರು ಎಂದು ವೈದ್ಯರು ಹೇಳಿದ್ದಾರೆ.
ತನ್ನ ತಾಯಿ ಜನಿಸಿದ ಅದೇ ಗರ್ಭಾಶಯದಿಂದ ಈ ಹೆಣ್ಣು ಮಗುವೂ ಜನಿಸಿದೆ, ಹೀಗಾಗಿ ಇಂತಹಾ ಗರ್ಭಾಶಯದ ಕಸಿ ಬಳಿಕ ಆರೋಗ್ಯಕರ ಮಗುವಿನ ಜನನವಾಗುತ್ತಿರುವುದು ಭಾರದಲ್ಲಿ ಇದೇ ಮೊದಲು ಎಂದು ವೈದ್ಯರು ನುಡಿದರು.
ಈ ಹಿಂದೆ ಮೀನಾಕ್ಷಿ ಅವರಿಗೆ ಗರ್ಭಪಾತವಾಗಿದ್ದು ಆ ಬಳಿಕ ಆಕೆಯ ಗರ್ಭಾಶಯ ಕಾರ್ಯನಿರ್ವಹಿಸುತ್ತಿರಲಿಲ್ಲ. ಆ ವೇಳೆಗೆ ಅವರ ತಾಯಿಯು ತಮ್ಮ ಗರ್ಭಾಶಯವನ್ನು ಮಗಳಿಗೆ ದಾನ ನೀಡಿದ್ದರು. ಹೀಗೆ ಗರ್ಭಾಶಯ ದಾನದ ಬಳಿಕ ಅದನ್ನು ಮೀನಾಕ್ಷಿ ಅವರಿಗೆ ಕಸಿ ಮಾಡಲಾಗಿತ್ತು. ಹೀಗಾದ ನಂತರ ಆಕೆ ಐವಿಎಫ್ ವಿಧಾನದಿಂದ ಗರ್ಭಿಣಿಯಾಗಿ ಹೆಣ್ಣು ಮಗುವನ್ನು ಪಡೆದಿದ್ದಾಳೆ ಎಂದು ವೈದ್ಯರು ವಿವರಣೆ ನೀಡಿದರು.
ವಾಲನ್ ಅವರು ಈ ಹಿಂದೆ ಗರ್ಭಾಶಯ ಕಸಿಗೆ ಒಳಗಾಗಿದ್ದ ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿಯೇ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದಾರೆ.
ಇದು ಭಾರತದಲ್ಲಿ ಮಾತ್ರವಲ್ಲದೇ "ಏಷ್ಯಾ-ಪೆಸಿಫಿಕ್ ಪ್ರದೇಶ"ದಲ್ಲೇ ಇದು ಮೊದಲ ಹೆರಿಗೆಯಾಗಿದೆ.ಎಂದು ಡಾ. ವಾರ್ತಿ ಹೇಳಿದ್ದಾರೆ.
"ಇದಕ್ಕೆ ಹಿಂದೆ ಸ್ವೀಡನ್ ನಲ್ಲಿ ಇಂತಹುದೇ ಒಂಬತ್ತು ಪ್ರಕರಣಗಳು ವರದಿಯಾಗಿತ್ತು. ಮತ್ತೆರಡು ಅಮೆರಿಕಾದಲ್ಲಿಯೂ ನಡೆದಿತ್ತು. ಇದೀಗ ಭಾರತದಲ್ಲಿ ಹುಟ್ಟಿರುವ ಈ ಮಗು 12ನೆಯದಾಗಿದೆ" ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com