ನಿಮ್ಮ ದೇಹಕ್ಕೆ 8 ಗಂಟೆಗಳ ನಿದ್ರೆ ಎಷ್ಟು ಅಗತ್ಯ ಗೊತ್ತೆ?

ಇದೀಗ ನೀವು ದಿನಕ್ಕೆ ಎಹ್ಟು ಗಂಟೆಗಳ ಕಾಲ ನಿದ್ರಿಸುತ್ತೀರೆನ್ನುವುದನ್ನು ನಿರ್ಧರಿಸುವ ಸಮಯ. ಒಂದು ಹೊಸ ಸಂಶೋಧನಾ ವರದಿ ಪ್ರಕಾರ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಇದೀಗ ನೀವು ದಿನಕ್ಕೆ ಎಹ್ಟು ಗಂಟೆಗಳ ಕಾಲ ನಿದ್ರಿಸುತ್ತೀರೆನ್ನುವುದನ್ನು ನಿರ್ಧರಿಸುವ ಸಮಯ. ಒಂದು ಹೊಸ ಸಂಶೋಧನಾ ವರದಿ ಪ್ರಕಾರ ದಿನಕ್ಕೆ  7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವ ಜನರು ಇದಕ್ಕಿಂತ ಕಡಿಮೆ ಅಥವಾ ಹೆಚ್ಚು ನಿದ್ರಿಸುವವರಿಗಿಂತ ಹೆಚಿನ ಅರಿವು ಉಳ್ಳವರಾಗಿರುತ್ತಾರೆ.
ಈ ಅಧ್ಯಯನಕ್ಕಾಗಿ ವಿಶ್ವದಾದ್ಯಂತದ 40,000 ಕ್ಕಿಂತ ಹೆಚ್ಚು ಜನರು ಆನ್ ಲೈನ್ ವೈಜ್ಞಾನಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಅವರುಗಳಿಗೆ ತಿಳಿವಿನ ಹೆಚ್ಚಳ ಕುರಿತು ಅನೇಕ ಪ್ರಶ್ನಾವಳಿ ನೀಡಲಾಗಿತ್ತು.
ಪ್ರಮುಖ ಸಂಶೋಧಕ ಆಡ್ರಿಯನ್ ಓವನ್, "ಇಡೀ ಜಗತ್ತಿನ  ಜನರ ಮಲಗುವ ಹವ್ಯಾಸವನ್ನು ನಾವು ಪರೀಕ್ಷಿಸಬಯಸಿದ್ದೇವೆ" ಎಂದಿದ್ದಾರೆ.
ಇದಾಗಲೇ ನಿದ್ರೆ ವಿಷಯದಲ್ಲಿ ಸಾಕಷ್ಟು ಸಂಶೋಧನೆ, ಅದ್ಯಯನಗಳು ನಡೆಇದ್ದರೂ ನೈಜ ಜಗತ್ತಿನಲ್ಲಿ ನಿದ್ರೆ ಕುರಿತಂತೆ ಜನರ ಭಾವನೆಗಲನ್ನು ನಾವು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ನಾವು ಬಹು ದೊಡ್ಡ ಪ್ರಶ್ನಾವಳಿಗಳನ್ನು ಹೊಂದಿದ್ದು ಪ್ರಯೋಗಕ್ಕೆ ಒಳಗಾದ ಜನರಿಗೆ ಅವರು ಯಾವ ಬಗೆಯ ಔಷಧಿ ಸೇವಿಸಿದ್ದರೆ? ಅವರ ವಯಸ್ಸು, ಅವರ ಶಿಕ್ಷಣ, ಅವರ ಸಾಮಾಜಿಕ ಪರಿಸರದ ಕುರಿತಂತೆ ಪ್ರಶ್ನೆ ಕೇಳಿದ್ದೆವು. ಇದೆಲ್ಲವೂ ನಮ್ಮ ಅದ್ಯಯನಕ್ಕೆ ನೆರವಾಗಿದೆ.
 ಅಧ್ಯಯನಕ್ಕೆ ಒಳಗಾದ ಬಹುಪಾಲುಇ ಜನರು ತಾವು ದಿನಕ್ಕೆ 6.3 ತಾಸು ನಿದ್ರಿಸುವುದಾಗಿ ಹೇಳಿದ್ದಾರೆ. ಎಂದರೆ ಆರೋಗ್ಯಕರ ನಿದ್ರೆ ಎಂದು ಗುರುತಿಸಿದ ಅವಧಿಗೆ ಒಂದು ತಾಸು ಕಡಿಮೆ ನಿದ್ರೆಯನ್ನು ಮಾಡುತ್ತಾರೆ.
ನಾಲ್ಕು ಗಂಟೆಗಳ ಅಥವಾ ಅದಕ್ಕಿಂತ ಕಡಿಮೆ ಸಮಯ ಮಲಗಿದ್ದವರಲ್ಲಿ ಹೆಚಿನವರು ಒಂಭತ್ತು ವರ್ಷ ವಯಸ್ಸಿನವರಾಗಿದ್ದಾರೆಎನ್ನುವುದು ವಿಸ್ಮಯಕಾರಿ ಸಂಗತಿಯಾಗಿದೆ. ಆದರೆ ನಿದ್ರೆ ಎಲ್ಲಾ ವಯಸ್ಸಿನವರನ್ನೂ ಸಮಾನವಾಗಿ ಪ್ರಭಾವಿಸಿದೆ.
ಹೆಚ್ಚು ಕ್ರಿಯಾತ್ಮಕ ಅರಿವಿನ ನಡವಳಿಕೆಯೊಂದಿಗೆ ಸಂಬಂಧಿಸಿದ ನಿದ್ರೆಯ ಪ್ರಮಾಣವು ಎಲ್ಲಾ ವಯೋಮಾನದವರಿಗೆ ಒಂದ್ ಆಗಿದ್ದು ಇದಾಗಲೇ ಹೇಏಳಿದಂತೆ 7 ರಿಂದ 8 ಗಂಟೆಗಳ ಅವಧಿಯ ನಿದ್ರೆ ಅದಾಗಿದೆ.
ನಿಮ್ಮ ಮೆದುಳನ್ನು ಅತ್ಯುತ್ತಮವಾಗಿ ನಿರ್ವಹಿಸಲು ದಿನನಿತ್ಯ 7 ರಿಂದ 8 ಗಂಟೆಗಳ ಕಾಲ ನಿದ್ರೆಯ ಅಗತ್ಯವಿದೆ.ಇದಕ್ಕೆ ಹೆಚ್ಚು ಕಾಲ ಮಲಗಿದ ಜನರು ಕಡಿಮೆ ನಿದ್ರಿಸುವವರಿಗಿಂತ ದುರ್ಬಲರಾಗಿರುತ್ತಾರೆ.
ನಿದ್ರಾ ಅಭಾವದ ಹೆಚ್ಚಿನ ವೈಜ್ಞಾನಿಕಸಂಶೋಧನೆಗಿಂತಲೂ ಇದು ವಿಭಿನ್ನ ಅಧ್ಯಯನವಾಗಿದೆ.ದೀರ್ಘಕಾಲದವರೆಗೆ ಸಾಕಷ್ಟು ನಿದ್ದೆ ಪಡೆಯದಿರುವುದು ನಿಮ್ಮ ಮೆದುಳಿನ ಮೇಲೆ  ವಿಭಿನ್ನವಾಗಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಸಾಬೀತು ಮಾಡೀದೆ.
ಧನಾತ್ಮಕವಾಗಿ ಹೇಳಬೇಕಾದರೆ ಒಂದು ರಾತ್ರಿಯ ನಿದ್ರೆ ಕೂಡ ವ್ಯಕ್ತಿಯು ಯೋಚಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದಕ್ಕೆ ಕೆಲವು ಸಾಕ್ಷ್ಯ ಸಿಕ್ಕಿವೆ ಎಂದು ಸ್ಲೀಪ್ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನಾ ವರದಿಯಲ್ಲಿ ವಿವರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com