ಮುಖದ ಕಾಂತಿ ಹೆಚ್ಚಿಸಲು ಬಳಸಿ ಐಸ್ ಕ್ಯೂಬ್ಸ್: ಬಳಕೆ ಹೇಗೆ? ಇಲ್ಲಿದೆ ಮಾಹಿತಿ...

ನೀರಿನಿಂದ ತ್ವಚೆ ಆರೈಕೆ ಬಹಳಷ್ಟಿದೆ. ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನೀರಿನಿಂದ ತ್ವಚೆ ಆರೈಕೆ ಬಹಳಷ್ಟಿದೆ. ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ ಎನ್ನುವ ವಿಚಾರ ಕೂಡ ನಿಮಗೆ ತಿಳಿದಿರಲಿ. 
ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ನಿಮ್ಮ ಮುಖದ ತ್ವಚೆಯು ಕಾಂತಿಯುಕ್ತವಾಗುತ್ತದೆ. ಹಾಗೂ ನಯವಾಗಿ, ತಂಪಾಗಿರುತ್ತದೆ. ಇದು ನಿಮ್ಮ ಮೊಡವೆಗಳ ಸಮಸ್ಯೆಗೆ, ಉಗುರು ಬಣ್ಣವನ್ನು ತೆಗೆಯಲು ಮತ್ತು ಹಲವು ರೀತಿಯ ಸಮಸ್ಯೆಗಲನ್ನು ನಿವಾರಿಸುತ್ತದೆ. 
ಹಾಗಾದರೆ ತ್ವಚೆ ಹೊಳೆಯಲು ಹಾಗೂ ಮುಖದ ಚರ್ಮದ ಸಮಸ್ಯೆ ನಿವಾರಿಸಿಕೊಳ್ಳಲು ಐಸ್ ಕ್ಯೂಬ್ ಗಳನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು? ಅದಕ್ಕೆ ಇಲ್ಲಿದೆ ಮಾಹಿತಿ...
  • ಐಸ್ ಕ್ಯೂಬ್ ಗಳನ್ನು ಬಳಕೆ ಮಾಡುವ ವೇಳೆ ನೇರವಾಗಿ ಮುಖಕ್ಕೆ ಹಚ್ಚಬಾರದು. ಬಿಳಿ ಹಾಗೂ ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿಕೊಂಡು ನಯವಾಗಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಬೇಕು. ನೇರವಾಗಿ ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ಮುಖದ ಚರ್ಮ ಒಡೆಯುವ ಸಾಧ್ಯತೆಗಳಿರುತ್ತವೆ. 
  • ಬೇಸಿಗೆ ಹಾಗೂ ಚಳಿಗಾಲ ಸಂದರ್ಭದಲ್ಲಿ ಫೌಂಡೇಶನ್ ಬಳಕೆ ಮಾಡುವುದಕ್ಕೂ ಮುನ್ನ ಶುಬ್ಧ ಹಾಗೂ ಕಾಟನ್ ಬಟ್ಟೆಯ ಮೇಲೆ ಐಸ್ ಕ್ಯೂಬ್ ಗಳನ್ನು ಹಾಕಿ ಮಸಾಜ್ ಮಾಡಿಕೊಂಡು ನಂತರ ಫೌಂಡೇಶನ್ ಹಚ್ಚಿಕೊಳ್ಳಬೇಕು. ಇದರಿಂದ ಚರ್ಮದ ಮೇಲಿನ ರಂಧ್ರಗಳು ಮುಚ್ಚಿಕೊಳ್ಳಲು ಸಹಾಯಕವಾಗುತ್ತದೆ. 
  • ಮೊಡವೆ ಸಮಸ್ಯೆ ಎದುರಿಸುತ್ತಿರುವವರೂ ಕೂಡ ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ಮೊಡವೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಗುಳ್ಳೆಗಳು ಒಡೆದು ಅಥವಾ ಕೆಂಪಾಗಿ ಕಾಣಲು ಆರಂಭಿಸಿದ್ದರೆ, ಅವುಗಳ ಸಮಸ್ಯೆಯನ್ನು ಈ ಐಸ್ ಕ್ಯೂಬ್ ಗಳು ನಿವಾರಿಸುತ್ತವೆ. 
  • ಸಾಮಾನ್ಯವಾಗಿ ಗಾಯವಾದಾಗ ಅದರ ಉರಿಯನ್ನು ತಡೆಯಲು ಹಾಗೂ ಊದಿಕೊಂಡಿರುವ ಕಡಿಮೆ ಮಾಡಲು ಐಸ್ ಕ್ಯೂಬ್ ಗಳನ್ನು ಬಳಕೆ ಮಾಡುವುದನ್ನು ನಾವು ಕೇಳಿರುತ್ತೇವೆ. ಇದೇ ರೀತಿಯ ತತ್ವವನ್ನು ಊದಿಕೊಂಡಿರುವ ಕಣ್ಣುಗಳಿಗೂ ನಾವು ಮಾಡಬಹುದು. ಶುದ್ಧವಾದ ಬಟ್ಟೆಯ ಮೇಲೆ ಐಸ್ ಕ್ಯೂಬ್ ಗಳನ್ನು ಹಾಕಿ ಕಣ್ಣಿನ ಮೇಲೆ ಕೆಲ ಸೆಕೆಂಡ್ ಗಳ ಕಾಲ ಮಸಾಜ್ ಮಾಡುವುದರಿಂದ ಊದಿದ ಕಣ್ಣುಗಳು ಸಾಮಾನ್ಯ ಸ್ಥಿತಿಗೆ ಬರುತ್ತವೆ. 
  • ಕೆಲವರಿಗೆ ಕಣ್ಣುಗಳ ಕೆಳಗಿನ ಭಾಗದ ಚರ್ಮ ಬಹಳ ತೆಳ್ಳಗಿರುತ್ತದೆ. ಅಂತಹವರಿಗೆ ಕಣ್ಣುಗಳ ಕೆಳಗೆ ಚರ್ಮ ಒಡೆದುಕೊಳ್ಳುವುದು ಹೆಚ್ಚು. ಇಂತಹವರು ವ್ಯಾಕ್ಸ್ ಮಾಡಿಸಿದಾಗ ಅಥವಾ ಐಬ್ರೋ ಮಾಡಿಸಿದ ಸಂದರ್ಭದಲ್ಲಿ ಕೆಲ ನಿಮಿಷಗಳ ಕಾಲ ಸುದೀರ್ಘವಾಗಿ ಐಸ್ ಕ್ಯೂಬ್ ಗಳಿಂದ ಮಸಾಜ್ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. 
  • ದಿನ ನಿತ್ಯ ಎರಡು ಬಾರಿ 20 ನಿಮಿಷಗಳ ಕಾಲ ಐಸ್ ಕ್ಯೂಬ್ ಗಳಿಂದ ಮುಖವನ್ನು ಮಸಾಜ್ ಮಾಡಿ ತೊಳೆದುಕೊಂಡರೆ ಮುಖ ಹೊಳೆಯುತ್ತದೆ. ಒಣಗಿದ ಚರ್ಮವನ್ನು ಹೊಂದಿದ್ದವರು, 2-3 ಬಾದಾಮಿಗಳನ್ನು ಪೇಸ್ಟ್ ಮಾಡಿಕೊಂಡು ಅದನ್ನು ಐಸ್ ಕ್ಯೂಬ್ ಗಳನ್ನಾಗಿ ಮಾಡಿಕೊಂಡು ಮುಖಕ್ಕೆ ಮಸಾಜ್ ಮಾಡಿದರೆ, ಚರ್ಮದ ಆರೋಗ್ಯ ಹೆಚ್ಚುತ್ತದೆ. 
  • ಎಣ್ಣೆಯ ತ್ವಚೆ ಹೊಂದಿದ್ದವರು ಐಸ್ ಕ್ಯೂಬ್ ಮಾಡಿಕೊಳ್ಳುವಾಗ ಸ್ವಲ್ಪ ನಿಂಬೆ ಹಣ್ಣಿನ ರಸ ಸೇರಿಸಿ ಐಸ್ ಕ್ಯೂಬ್ ಗಳನ್ನು ಮಾಡಿಕೊಂಡು ಮಸಾಜ್ ಮಾಜಿಕೊಂಡರೆ ಚರ್ಮ ಉತ್ತಮವಾಗಿರುತ್ತದೆ. ತೋಳುಗಳಲ್ಲಿ ಹೆಚ್ಚು ಬೆವರು ಬರುವವರೂ ಕೂಡ ಇದನ್ನು ಬಳಕೆ ಮಾಡುವುದರಿಂದ ಬೆವರು ಕಡಿಮೆಯಾಗುತ್ತದೆ. 
  • ನಿಮ್ಮ ಚರ್ಮ ಸೂರ್ಯನ ಕಾಂತಿಗೆ ಸುಟ್ಟು ಹೋಗಿದ್ದರೆ ಅಥವಾ ಒಡೆದಿದ್ದರೆ ಆಲೋವೆರಾ (ಲೋಳೆರಸ) ಕ್ಯೂಬ್ ಗಳನ್ನು ಮಾಡಿಕೊಂಡು ಚರ್ಮಕ್ಕೆ ಮಸಾಜ್ ಮಾಡಿಕೊಳ್ಳಬಹುದು. ಇದರ ಜೊತೆಗೆ ಜಾಸ್ಮಿನ್ ಅಥವಾ ಬೇವಿನ ಎಣ್ಣೆಯನ್ನು ಸೇರಿಸಿದರೆ ಚರ್ಮಕ್ಕೆ ಅತ್ಯುತ್ತಮವಾದ ಔಷಧಿಯಾಗುತ್ತದೆ. ಈ ರೀತಿ ತಯಾರಿಸಿಕೊಂಡ ಕ್ಯೂಬ್ ಒಂದನ್ನು ತೆಗೆದುಕೊಂಡು ನಿಮ್ಮ ಮೊಳಕೈ, ಕುತ್ತಿಗೆ ಭಾಗದಲ್ಲಿ 15-20 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಕಪ್ಪ ಚರ್ಮ ಸಮಸ್ಯೆ ನಿವಾರಣೆಯಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com