ವಿಶ್ವ ನಿದ್ರಾ ದಿನ: ನಿದ್ರೆ ಕುರಿತು ನಿಜವಲ್ಲದ ಒಂಬತ್ತು ತಿಳುವಳಿಕೆಗಳು!

ಮಾ.16 ನ್ನು ವಿಶ್ವ ನಿದ್ರಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ನಿದ್ರೆಗೆ ಸಂಬಂಧಿಸಿದಂತೆ ನಿಜವಲ್ಲದ ಹಲವು ತಿಳುವಳಿಕೆಗಳು ನಮ್ಮಲ್ಲಿವೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್ ನಿದ್ರೆಗೆ ಸಂಬಂಧಿಸಿದಂತೆ ಇರುವ
ವಿಶ್ವ ನಿದ್ರಾ ದಿನ: ನಿದ್ರೆ ಕುರಿತು ನಿಜವಲ್ಲದ ಒಂಬತ್ತು ತಿಳುವಳಿಕೆಗಳು!
ವಿಶ್ವ ನಿದ್ರಾ ದಿನ: ನಿದ್ರೆ ಕುರಿತು ನಿಜವಲ್ಲದ ಒಂಬತ್ತು ತಿಳುವಳಿಕೆಗಳು!
Updated on
ಹೈದರಾಬಾದ್: ಮಾ.16 ನ್ನು ವಿಶ್ವ ನಿದ್ರಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ನಿದ್ರೆಗೆ ಸಂಬಂಧಿಸಿದಂತೆ ನಿಜವಲ್ಲದ ಹಲವು ತಿಳುವಳಿಕೆಗಳು ನಮ್ಮಲ್ಲಿವೆ.  ನ್ಯಾಷನಲ್ ಸ್ಲೀಪ್ ಫೌಂಡೇಶನ್ ನಿದ್ರೆಗೆ ಸಂಬಂಧಿಸಿದಂತೆ ಇರುವ ಕೆಲವೊಂದು ತಪ್ಪು ತಿಳುವಳಿಕೆಗಳ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದೆ. 

ಗೊರಕೆ ಹೊಡೆಯುವುದು ಆರೋಗ್ಯಕ್ಕೆ ಹಾನಿಕರವೇ?
ನಿದ್ರೆ ಮಾಡುವಾಗ ಗೊರಕೆ ಹೊಡೆಯುವುದು ಆರೋಗ್ಯಕ್ಕೆ ಹಾನಿಕರ ಎಂಬ ಅಭಿಪ್ರಾಯ ಅನೇಕರಲ್ಲಿದೆ.  ಗೊರಕೆ ಬಹುತೇಕ ಜನರಿಗೆ ಸಮಸ್ಯೆಯಲ್ಲದಿದ್ದರೂ ಅದು ಸ್ಲೀಪ್ ಅಪ್ನಿಯ ಎಂಬ ನಿದ್ರಾಹೀನತೆಯ ಲಕ್ಷಣವಾಗಿರಬಹುದು. ಈ ಸಮಸ್ಯೆಯಿಂದ ರಕ್ತದಲ್ಲಿ ಆಮ್ಲಜನಕ ಕಡಿಮೆಯಾಗಿ, ದೀರ್ಘಾವಧಿಯಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದಾಗಿದೆ. 
ವಯಸ್ಸಾದಂತೆಲ್ಲಾ ಕಡಿಮೆ ನಿದ್ರೆ ಸಾಕು! 
ವಯಸ್ಸಾದಂತೆಲ್ಲಾ ನಿದ್ದೆ ಕಡಿಮೆಯಾಗುತ್ತದೆ. ವೃದ್ಧರು ರಾತ್ರಿ ವೇಳೆ ಆಗಾಗ್ಗೆ ಎಚ್ಚರಗೊಳ್ಳುತ್ತಾರೆ. ಆದರೆ ವಯಸ್ಕರು ಹಾಗೂ ಯುವಕರಿಗೆ ಬೇಕಾದಷ್ಟೇ ನಿದ್ದೆ ವೃದ್ಧರಿಗೂ ಬೇಕಾಗುತ್ತದೆ, ಆದರೆ ವೃದ್ಧರು ಬೆಳಗಿನ ವೇಳೆ ಹೆಚ್ಚು ನಿದ್ದೆ ಮಾಡುತ್ತಾರೆ. 
ನಿದ್ದೆಯ ಅವಧಿ ಏರುಪೇರಾಗಬಹುದು 
ಸರಿಯಾದ ಪ್ರಮಾಣದಲ್ಲಿ ನಿದ್ದೆಯಾಗಿಲ್ಲ ಅಂದರೆ, ನಿದ್ದೆ ಇಲ್ಲದೇ ಹೆಚ್ಚು ಕಾಲ ಕಳೆದರೆ ಅದನ್ನು ಸರಿದೂಗಿಸುವುದು ಕಷ್ಟ. ನಿದ್ದೆಗೆಡುವುದರಿಂದ ರಕ್ತದೊತ್ತಡ ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ.
ನಿದ್ದೆ ಸಮಯದಲ್ಲಿ ಮೆದುಳಿಗೆ ವಿಶ್ರಾಂತಿ
ನಿದ್ದೆ ಮಾಡಬೇಕಾದರೆ ದೆಹಕ್ಕೆ ವಿಶ್ರಾಂತಿ ಸಿಗುತ್ತದೆ. ಆದರೆ ಮೆದುಳು ಮಾತ್ರ ಕ್ರಿಯಾಶೀಲವಾಗಿರುತ್ತದೆ ಹಾಗೂ ನಿದ್ದೆಯ ನಂತರ ಹೊಸ ಚೈತನ್ಯದೊಂದಿಗೆ ಮೆದುಳು ಕಾರ್ಯನಿರ್ವಹಿಸುತ್ತದೆ.
ತರಗತಿಯಲ್ಲಿ ನಿದ್ದೆ ಮಾಡುವ ವಿದ್ಯಾರ್ಥಿಗಳು ಸೋಮಾರಿಗಳು
ನಿದ್ರಾ ತಜ್ಞರ ಪ್ರಕಾರ ಹದಿಹರೆಯದವರು ಕನಿಷ್ಠ 8-10 ಗಂಟೆಗಳ ಕಾಲ ನಿದ್ದೆ ಮಾಡಬೇಕು, ಆದರೆ ಕಡಿಮೆ ನಿದ್ದೆಯಿಂದ ಹದಿಹರೆಯದವರು ತರಗತಿಗಳಲ್ಲಿ ನಿದ್ದೆ ಮಾಡುತ್ತಾರೆ.
ಇನ್ಸೋಮ್ನಿಯಾ ನಿದ್ರಾಹೀನತೆಯ ಗುಣಲಕ್ಷಣ  
ಇನ್ಸೋಮ್ನಿಯಾ ಎಂಬುದು ನಿದ್ರಾಹೀನತೆಯ ಸಾಮಾನ್ಯವಾದ ಗುಣಲಕ್ಷಣವಾಗಿದ್ದು ಇದರ ಹೊರತಾಗಿಯೂ ಸಹ ನಿದ್ದೆಯಿಂದ ಬೇಗ ಏಳುವುದು, ಒಮ್ಮೆ ಎಚ್ಚರವಾದರೆ ಮತ್ತೆ ನಿದ್ದೆ ಬಾರದೇ ಇರುವುದೂ ಸಹ ನಿದ್ರಾಹೀನತೆಯ ಲಕ್ಷಣಗಳಾಗಿರಬಹುದು. 
ಬೆಳಗಿನ ಹೊತ್ತು ಹೆಚ್ಚು ನಿದ್ದೆ ಎಂದರೆ ಸಾಕಷ್ಟು ನಿದ್ದೆ ಇಲ್ಲ ಎಂದು ಅರ್ಥ 
ಬೆಳಗಿನ ಹೊತ್ತು ಹೆಚ್ಚು ನಿದ್ದೆ ಬರುತ್ತದೆ ಎಂದರೆ ಸಾಕಷ್ಟು ನಿದ್ದೆ ಇಲ್ಲ ಎಂಬ ಅಭಿಪ್ರಾಯವಿದೆ. ಆದರೆ ಸರಿಯಾಗಿ ನಿದ್ದೆ ಆದರೂ ಸಹ ಕೆಲವೊಮ್ಮೆ ಬೆಳಗಿನ ಹೊತ್ತು ಹೆಚ್ಚು ನಿದ್ದೆ ಬರುತ್ತದೆ.  ಇದು ನಿಕೊಲೆಪ್ಸಿ ಅಥವಾ ಸ್ಲೀಪ್ ಅಪ್ನಿಯ ಸಮಸ್ಯೆಯ ಲಕ್ಷಣಗಳಿರಬಹುದು. 
ನಿದ್ದೆಗೂ ಆರೋಗ್ಯ ಸಮಸ್ಯೆಗೂ ಸಂಬಂಧವಿಲ್ಲ
ಸರಿಯಾಗಿ ನಿದ್ದೆಯಾಗದೇ ಇದ್ದಲ್ಲಿ ಅದು ಹಾರ್ಮೋನ್ ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಇದೇ ದೀರ್ಘಾವಧಿಯಲ್ಲಿ ಸ್ಥೂಲಕಾಯ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಬಹುದು.
ಮಧ್ಯದಲ್ಲಿ ನಿದ್ದೆಯಿಂದ ಎಚ್ಚರವಾದರೆ ವಿಶ್ರಾಂತಿ ಸಿಗುವ ಚಿತ್ರಣಗಳನ್ನು ನೆನಪಿಸಿಕೊಳ್ಳುವುದು ಸೂಕ್ತ ಇದಾದ ಬಳಿಕ 15-20 ನಿಮಿಷಗಳಲ್ಲಿ ನಿದ್ದೆ ಬಾರದೇ ಇದ್ದರೆ ಓದುವುದು ಅಥವಾ ಸಂಗೀತ ಕೇಳುವುದು ಉತ್ತಮ ಎನ್ನುತ್ತಾರೆ ತಜ್ಞರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com