ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗರ್ಭಾವಸ್ಥೆಯಲ್ಲಿ ಹೆಚ್ಚು ಆಲೂಗಡ್ಡೆ ಚಿಪ್ಸ್ ಸೇವನೆ, ಮಗುವಿನ ಬೆಳವಣಿಗೆಗೆ ತೊಂದರೆ

ಆಲೂಗಡ್ಡೆ ಚಿಪ್ಸ್ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಇಷ್ಟಪಡುತ್ತಾರೆ...
Published on
ಸಿಡ್ನಿ: ಆಲೂಗಡ್ಡೆ ಚಿಪ್ಸ್ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಇಷ್ಟಪಡುತ್ತಾರೆ. ಇನ್ನು ಮಹಿಳೆಯರು ಗರ್ಭಾವಸ್ಥೆಯಲ್ಲಿರುವಾಗ ತಿಂಡಿ-ತಿನಿಸುಗಳನ್ನು ತಿನ್ನಬೇಕೆಂಬ ಆಸೆ ಹೆಚ್ಚಾಗಿರುತ್ತದೆ. ಮಸಾಲೆಭರಿತ ಚಿಪ್ಸ್, ಸ್ನಾಕ್ಸ್ ಗಳನ್ನು ತಿನ್ನುವುದೆಂದರೆ ಗರ್ಭಿಣಿಯರಿಗೆ ತುಂಬಾ ಇಷ್ಟವಾಗುತ್ತದೆ.
ಆದರೆ ಗರ್ಭಿಣಿಯಾಗಿರುವಾಗ ವೆಜಿಟೇಬಲ್ ಆಯಿಲ್ ಮತ್ತು ಆಲೂಗಡ್ಡೆ ಚಿಪ್ಸ್ ಸೇವಿಸುವುದು ಒಳ್ಳೆಯದಲ್ಲ, ಇದರಿಂದ ಗರ್ಭಾವಸ್ಥೆಯಲ್ಲಿ ಹಲವು ಸಮಸ್ಯೆಗಳು ಮತ್ತು ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗೆ ತೊಂದರೆಯಾಗಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.
ಆಲೂಗಡ್ಡೆ ಚಿಪ್ಸ್ ಮತ್ತು ವೆಜಿಟೇಬಲ್ ಎಣ್ಣೆಯಲ್ಲಿ ಒಮೆಗಾ 6 ಫ್ಯಾಟ್ ಇದ್ದು, ಅದರಲ್ಲಿರುವ ಲಿನೋಲಿಯಿಕ್ ಆಮ್ಲವನ್ನು ಅತಿಯಾಗಿ ಸೇವಿಸಿದರೆ ಉರಿಯೂತ ಉಂಟಾಗುವುದಲ್ಲದೆ ಹೃದ್ರೋಗಕ್ಕೂ ಕಾರಣವಾಗುತ್ತದೆ.
ಗರ್ಭಾವಸ್ಥೆಯಲ್ಲಿರುವಾಗ ಮಹಿಳೆಯರು ತಾವು ಸೇವಿಸುವ ಆಹಾರ, ಅವುಗಳ ಪೌಷ್ಟಿಕಾಂಶ ಮತ್ತು ಡಯಟ್ ಗಳ ಕಡೆಗೆ ಗಮನ ಹರಿಸುವುದು ಅತ್ಯಗತ್ಯ. ಕೆಲವು ಪೌಷ್ಟಿಕಾಂಶಗಳನ್ನೇ ಅತಿಯಾಗಿ ಸೇವಿಸುವುದರಿಂದ ಅದು ಮಗುವಿನ ಬೆಳವಣಿಗೆ ಮೇಲೆ ಅಡ್ಡ ಪರಿಣಾಮವನ್ನುಂಟುಮಾಡಬಹುದು ಎಂದು ಆಸ್ಟ್ರೇಲಿಯಾದ ಗ್ರಿಫ್ಫಿತ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಈ ಅಧ್ಯಯನದ ಮುಖ್ಯ ಲೇಖಕ ಡೆನ್ನೆ ಸ್ಕೆಲ್ಲಿ ಹೇಳುತ್ತಾರೆ.
ಫಿಸಿಯೊಲಜಿ ಎಂಬ ದಿನ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು ಗರ್ಭಿಣಿಯರು ಪ್ರತಿದಿನ ಸೇವಿಸಬೇಕಾದ ವೈದ್ಯರು ಹೇಳಿರುವ ಡಯಟ್ ಗಿಂತ ಲಿನೋಲಿಯಿಕ್ ಆಮ್ಲವನ್ನು ಹೆಚ್ಚು ಸೇವಿಸಿದರೆ ಗರ್ಭಾವಸ್ಥೆಯಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು.
ಅಧ್ಯಯನಕ್ಕೆ ಸಂಶೋಧಕರು ಆರಂಭದಲ್ಲಿ ಇಲಿ ಮೇಲೆ ಪ್ರಯೋಗ ಮಾಡಿದರು. ಡಯಟ್ ನಲ್ಲಿ ಅಧಿಕ ಲಿನೋಲಿಯಿಕ್ ಆಮ್ಲವನ್ನು ಅತಿಯಾಗಿ ಸೇವಿಸಿದ ತಾಯಿ ಇಲಿಗಳಲ್ಲಿ ಮೂರು ಪ್ರಮುಖ ಬದಲಾವಣೆಗಳು ಕಂಡುಬಂದವು. ತಾಯಿ ಇಲಿ ಹೊಟ್ಟೆಯಲ್ಲಿ ಪಿತ್ತಜನಕಾಂಗವು ಉರಿಯೂತದ ಪ್ರೊಟೀನ್ ಗಳ ಸಾಂದ್ರೀಕರಣವನ್ನು ಬದಲಿಸಿದೆ, ಗರ್ಭಾವಸ್ಥೆಯಲ್ಲಿ ಗರ್ಭಾಶಯದ ಸಂಕೋಚನವನ್ನು ಉಂಟುಮಾಡಬಹುದಾದ ಪ್ರೋಟೀನ್ ಗಳ ಪರಿಚಲನೆ ಸಾಂದ್ರತೆ ಹೆಚ್ಚಾಗುವುದು ಮತ್ತು ಇಲಿಯ ಬೆಳವಣಿಗೆಯನ್ನು ನಿಯಂತ್ರಿಸುವ ಹಾರ್ಮೋನ್ ಕಡಿಮೆಯಾಗಿರುವುದು ಅಧ್ಯಯನಕಾರರಿಗೆ ಅಧ್ಯಯನ ವೇಳೆ ಕಂಡುಬಂತು.
ಅಧಿಕ ಲಿನೋಲಿಯಿಕ್ ಆಮ್ಲದ ಪರಿಣಾಮ ಇಲಿ ಮತ್ತು ಮನುಷ್ಯರಲ್ಲಿ ಒಂದೇ ಆಗಿರುತ್ತದೆ ಎಂದಾದರೆ ಮಗು ಹೊಟ್ಟೆಯಲ್ಲಿರುವಾಗ ಮನುಷ್ಯರಲ್ಲಿ ಕೂಡ ಲಿನೋಲಿಯಿಕ್ ಆಮ್ಲ ಸೇವನೆ ಕಡಿಮೆ ಸೇವಿಸಬೇಕೆಂದು ಅರ್ಥ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com