ಚಳಿಗಾಲ ಬಂತು, ತಲೆನೋವು ಶುರುವಾಯ್ತು: ಚರ್ಮದ ಆರೈಕೆ ಹೇಗೆ? ಇಲ್ಲಿದೆ ಮಾಹಿತಿ...

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಸೌಂದರ್ಯ ಪ್ರಿಯರಿಗೆ ತಲೆನೋವು ಶುರುವಾಗುತ್ತದೆ. ಚಳಿಗಾಲ ಬಂದ ಕೂಡಲೇ ಚರ್ಮದ ಕಾಳಜಿ ಹೇಗೆ ಮಾಡಬೇಕೆಂಬುದೇ ಚಿಂತೆಯಾಗಿ ಹೋಗುತ್ತದೆ. ಚಳಿಗಾಲದಲ್ಲಿ ಚರ್ಮ ಒಣಗುವುದು ಸಾಮಾನ್ಯ. ಬಿರುಕಿನಿಂದ ಚರ್ಮ ರಕ್ಷಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಚಳಿಗಾಲದಲ್ಲಿ ಚರ್ಮದ ಬಗ್ಗೆ ಕಾಳಜಿ ವಹಿಸದೇ ಹೋದರೆ ಸುಕೋಮಲ ಚರ್ಮ ಪಕಳೆಯೇಳಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಸೌಂದರ್ಯ ಪ್ರಿಯರಿಗೆ ತಲೆನೋವು ಶುರುವಾಗುತ್ತದೆ. ಚಳಿಗಾಲ ಬಂದ ಕೂಡಲೇ ಚರ್ಮದ ಕಾಳಜಿ ಹೇಗೆ ಮಾಡಬೇಕೆಂಬುದೇ ಚಿಂತೆಯಾಗಿ ಹೋಗುತ್ತದೆ. ಚಳಿಗಾಲದಲ್ಲಿ ಚರ್ಮ ಒಣಗುವುದು ಸಾಮಾನ್ಯ. ಬಿರುಕಿನಿಂದ ಚರ್ಮ ರಕ್ಷಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಚಳಿಗಾಲದಲ್ಲಿ ಚರ್ಮದ ಬಗ್ಗೆ ಕಾಳಜಿ ವಹಿಸದೇ ಹೋದರೆ ಸುಕೋಮಲ ಚರ್ಮ ಪಕಳೆಯೇಳಲು ಆರಂಭಿಸುತ್ತದೆ. ಚಳಿಗಾಲದಲ್ಲಿ ಚರ್ಮದ ಸಮಸ್ಯೆ ದ್ವಿಗುಣಗೊಳ್ಳಳಿದ್ದು, ಹೆಚ್ಚಿನ ಆರೈಕೆ ಅಗತ್ಯವಾಗುತ್ತದೆ. 

ಚರ್ಮದ ಆರೈಕೆಗೆ ಕೇವಲ ಕ್ರೀಮ್ ಗಳನ್ನು ಹಚ್ಚುವುದಷ್ಟೇ ಮುಖ್ಯವಾಗುವುದಿಲ್ಲ. ನಾವು ಸೇವನೆ ಮಾಡುವ ಆಹಾರಗಳೂ ಕೂಡ ಮುಖ್ಯವಾಗುತ್ತದೆ. ಆರೋಗ್ಯಕರ ಆಹಾರ ಚರ್ಮವನ್ನು ರಕ್ಷಣೆ ಮಾಡುತ್ತದೆ. ವಾಲ್'ನಟ್, ಬಾದಾಮಿ ಎಣ್ಣೆ, ಬೆಣ್ಣೆಗಳನ್ನು ಸೇವನೆ ಮಾಡುವುದರಿಂದ ದೇಹದ ಚರ್ಮ ಉತ್ತಮವಾಗಿರುತ್ತದೆ. 

ರೋಗ ನಿರೋಧಕ ಶಕ್ತಿಯುಳ್ಳ ಸ್ಟ್ರಾಬೆರ್ರಿ, ಬ್ಲ್ಯೂಬೆರ್ರಿ, ಪೆಕನ್ಸ್, ಪೆಕಾನ್, ರಸ್ಬೆರ್ರಿ, ಬೀಟ್'ರೂಟ್, ಪಾಲಾಕ್ ಸೊಪ್ಪಿನ ಸೇವನೆ ಚರ್ಮಕ್ಕೆ ಎದುರಾಗುವ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. 

ವಿಟಮಿನ್ ಸಿ ಇರುವಂತಹ ಆಹಾರ ಸೇವೆ ಮಾಡುವುದರಿಂದ ದೇಹದಲ್ಲಿ ಎದುರಾಗುವ ನಿರ್ಜಲೀಕರಣವನ್ನು ತಡೆಯುತ್ತದೆ. ಚರ್ಮದ ವರ್ಣ ಸುಧಾರಿಸಲು ಕಾಲಜನ್ ಮತ್ತು ಎಲಾಸ್ಟಿನ್ ಹೆಚ್ಚಾಗಲು ಸಹಾಯ ಮಾಡುತ್ತದೆ. 

ಆಲ್ಕೋಹಾಲ್, ಟೀ, ಕಾಫಿ ಹೆಚ್ಚಾಗಿ ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯ ಹಾಳಾಗುತ್ತದೆ. ಕಾರ್ಬೋಹೈಡ್ರೇಟ್'ವುಳ್ಳ ಆಹಾರ ಸೇವನೆಗಳನ್ನು ನಿಯಂತ್ರಿಸುವುದೂ ಕೂಡ ಚರ್ಮವನ್ನು ಒಣಗುವಂತೆ ಮಾಡುತ್ತದೆ. ಚರ್ಮದ ಒಣಗದಂತೆ ಮಾಡಲು ನೀರು ಅತ್ಯುತ್ತಮ ಪರಿಹಾರವೆಂದೇ ಹೇಳಬಹುದು. ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ. ಚಳಿಗಾಲದಲ್ಲಿ ಕನಿಷ್ಟ ಎಂದರೂ 8 ಲೋಟಗಳಷ್ಟು ನೀರು ಕುಡಿಯಬೇಕು. ಜ್ಯೂಸ್ ಗಳು ಹಾಗೂ ಮಜ್ಜಿಗೆಯನ್ನು ದಿನನಿತ್ಯದ ಆಹಾರ ಪದ್ಧತಿಗಳಲ್ಲಿ ಅಳವಡಿಸಿಕೊಳ್ಳುವುದು ಉತ್ತಮ. 

ಪ್ರತೀನಿತ್ಯ ಚರ್ಮಕ್ಕೆ ಲೋಷನ್ ಗಳನ್ನು ಹಚ್ಚುವುದು, ಸ್ವಚ್ಛಗೊಳಿಸುವುದು ಮುಖ್ಯವಾಗುತ್ತದೆ. ಚಳಿಗಾಲದಲ್ಲಿ ಆಲ್ಕೋಹಾಲ್'ವುಳ್ಳ ಚರ್ಮದ ಉತ್ಪನ್ನಗಳನ್ನು ಸಾಧ್ಯವಾದಷ್ಟು ನಿಯಂತ್ರಿಸುವುದು ಒಳ್ಳೆಯದು. ಇಲ್ಲದೇ ಹೋದರೆ, ಇಂತಹ ಉತ್ಪನ್ನಗಳು ಚರ್ಮಕ್ಕೆ ಹಾನಿಯುಂಟು ಮಾಡುತ್ತವೆ. 

ಒಣ ಚರ್ಮ ಹೊಂದಿರುವವರಂತೂ ಚಳಿಗಾಲದಲ್ಲಿ ಹೆಚ್ಚಿನ ಆರೈಕೆ ಮಾಡಿಕೊಳ್ಳಬೇಕಾಗುತ್ತದೆ. ಒಣಗಿದ ಚರ್ಮವುಳ್ಳವರಂದೂ ಚರ್ಮಕ್ಕೆ ಎಷ್ಟೇ ಕ್ರೀಮ್ ಗಳನ್ನು ಹಾಕಿದರೂ ಬೆಳಕಿಗೆ ಹೋಗುತ್ತಿದ್ದಂತೆಯೇ ಚರ್ಮ ಬಿರುಕು ಬೀಳುತ್ತವೆ. ಸತ್ತ ಚರ್ಮದಿಂದ ದೂರ ಉಳಿಯಲು ಇಂತಹವರು ಜೆಂಟಲ್ ಸ್ಕ್ರಬ್, ಮೈಲ್ಡ್ ಗ್ಲೈಕೊಲಿಕ್ ಅಥವಾ ಲ್ಯಾಕ್ಟಿಕ್ ಆ್ಯಸಿಡ್'ವುಳ್ಳ ಉತ್ಪನ್ನಗಳನ್ನು ಬಳಕೆ ಮಾಡಬೇಕು. ಚಳಿಗಾಲದಲ್ಲಿ ಒಂದು ಬಾರಿ ಮಾತ್ರ ಸ್ನಾನ ಸಾಕು. ಮೃದು ಚರ್ಮಕ್ಕಾಗಿ ಅತಿಯಾದ ಸೋಪುಗಳನ್ನು ಬಳಕೆ ಮಾಡದಿರಿ. 

ಸಾಧ್ಯವಾದಷ್ಟು ಸೌಮ್ಯವಾದ ಹೆಚ್ಚು ಸುಗಂಧಗಳಿಲ್ಲದ ಸೋಪುಗಳನ್ನು ಬಳಕೆ ಮಾಡುವುದು ಒಳ್ಳೆಯದು. ನಿಮ್ಮ ಚರ್ಮದ ಶುಷ್ಕತನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿ. ಚರ್ಮವನ್ನು ಒಣಗದಂತೆ ನೋಡಿಕೊಳ್ಳಿ. ಆಗಾಗ ಎಣ್ಣೆ ಸ್ನಾನ ಅತ್ಯುತ್ತಮ. ಸ್ನಾನಕ್ಕೆ ಹೆಚ್ಚಿನ ಬಿಸಿ ನೀರು ಬಳಸದಿರಿ. ಸ್ನಾನ ಮಾಡಿದ ಕೂಡಲೇ ಚರ್ಮದಲ್ಲಿ ತೇವಾಂಶ ಇರುವಾಗಲೇ ಲೋಷನ್ ಬಳಸಿ. ಹೆಚ್ಚು ಮಸಾಲೆ ಭರಿತ ಆಹಾರ ಸೇವನೆ ಒಳ್ಳೆಯದಲ್ಲ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com