ತಾಮ್ರದ ಪಾತ್ರೆಗಳ ಬಳಕೆ ಮತ್ತು ಅದರ ಅನೇಕ ಪ್ರಯೋಜನಗಳು

ಅಯುರ್ವೇದದ ಪ್ರಕಾರ ತಾಮದ್ರ ಪಾತ್ರೆಯಲ್ಲಿ ರಾತ್ರಿಯಿಡೀ ಶೇಖರಿಸಿಟ್ಟ ನೀರನ್ನು ಮುಂಜಾನೆ ಕುಡಿಯುವುದರಿಂದ ವಾತಾ, ಪಿತ್ತ ,ಕಫಗಳಲ್ಲಿ ಏರುಪೇರು ಉಂಟಾಗದಂತೆ ನೋಡಿಕೊಳ್ಳಬಹುದು. 
ತಾಮ್ರದ ಗಾಜಿನಲ್ಲಿ ಶೇಖರಿಸಿಟ್ಟ ನೀರು
ತಾಮ್ರದ ಗಾಜಿನಲ್ಲಿ ಶೇಖರಿಸಿಟ್ಟ ನೀರು

ಬೆಂಗಳೂರು: ಅಯುರ್ವೇದದ ಪ್ರಕಾರ ತಾಮದ್ರ ಪಾತ್ರೆಯಲ್ಲಿ ರಾತ್ರಿಯಿಡೀ ಶೇಖರಿಸಿಟ್ಟ ನೀರನ್ನು ಮುಂಜಾನೆ ಕುಡಿಯುವುದರಿಂದ ವಾತಾ, ಪಿತ್ತ ,ಕಫಗಳಲ್ಲಿ ಏರುಪೇರು ಉಂಟಾಗದಂತೆ ನೋಡಿಕೊಳ್ಳಬಹುದು. 

ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುವುದರಿಂದ ನಮ್ಮಗೆ ಅನೇಕ ಅನುಕೂಲಗಳಿವೆ. ಇದರ ಪ್ರಯೋಜನ ಪಡೆದುಕೊಳ್ಳಲು ಕನಿಷ್ಠ ಪಕ್ಷ 8 ಗಂಟೆಗಳ ಕಾಲ ನೀರನ್ನು ತಾಮದ್ರ ಪಾತ್ರೆಗಳಲ್ಲಿ ಇಡಬೇಕಾಗುತ್ತದೆ. 

ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಿನಲ್ಲಿ ತುಳಸಿ ಎಲೆಯನ್ನಿಟ್ಟು, ನಿರಂತರವಾಗಿ ಕುಡಿಯುತ್ತಾ ಬಂದರೆ ಕಫ ಕಡಿಮೆಯಾಗುತ್ತದೆ.ದೇಹದ ಅಂಗಗಳು ಕಾರ್ಯನಿರ್ವಹಿಸಲು ತಾಮ್ರವು ಅತ್ಯಗತ್ಯವಾದ ಖನಿಜವಾಗಿದೆ. 

ಇದರಿಂದ ಆರೋಗ್ಯ ಸುಧಾರಣೆ ಆಗುವುದರ ಜೊತೆಗೆ ದೇಹದಲ್ಲಿ ವಿಷಕಾರಿ ಆಮ್ಲ ಹೊರಹೊಮ್ಮದಂತೆಯೂ ತಡೆಯುತ್ತದೆ. 

ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟ ನೀರನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು

ಸುಗಮ ಜೀರ್ಣಕ್ರಿಯೆ :  ತಾಮ್ರದ ಬಳಕೆಯಿಂದ ಹೊಟ್ಟೆಯಲ್ಲಿನ  ಬ್ಯಾಕ್ಟೀರಿಯಾ ನಾಶವಾಗುತ್ತವೆ. ಉರಿಯೂತಗಳು ಕಡಿಮೆಯಾಗುತ್ತವೆ. ಜೀರ್ಣಕ್ರಿಯೆ ವ್ಯವಸ್ಥೆ ಸುಗಮವಾಗಿ ನಡೆಯುತ್ತದೆ. 

ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ: ಕಬ್ಬಿಣಾಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ತಿಂದ ನಂತರವೂ ತೂಕ ಕಡಿಮೆಯಾಗದಿದ್ದಲ್ಲಿ ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟ ನೀರನ್ನು ಪ್ರತಿದಿನ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಜೀರ್ಣಕ್ರಿಯೆಗೆ ಅನುಕೂಲವಾಗುವುದರ ಜೊತೆಗೆ ದೇಹದಲ್ಲಿ ಕೊಬ್ಬು ಹೆಚ್ಚಾಗದಂತೆ ತಡೆಗಟ್ಟುತ್ತದೆ. 

ಗಾಯಗಳು ಬೇಗನೆ ವಾಸಿಯಾಗಲು ನೆರವು: ತಾಮ್ರ ಬ್ಯಾಕ್ಟಿರಿಯಾ ಹಾಗೂ ವೈರಸ್ ವಿರೋಧಿ ವಸ್ತುವಾಗಿರುವುದರಿಂದ ಗಾಯಗಳು ಬೇಗನೆ ವಾಸಿಯಾಗಲು ನೆರವಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತಾಮ್ರ ಸಹಕಾರಿಯಾಗಿರುವುದರಿಂದ ವಿಶೇಷವಾಗಿ  ಹೊಟ್ಟೆ ಗಾಯಗಳು ಬೇಗನೆ ವಾಸಿಯಾಗುತ್ತವೆ. 

ಕ್ಯಾನ್ಸರ್ ತಡೆ:  ದೇಹದಲ್ಲಿ ವಿಕಿರಣಗಳು ಪ್ರವೇಶಿಸಿದಂತೆಯೂ ತಾಮ್ರ  ಕಾರ್ಯನಿರ್ವಹಿಸುತ್ತದೆ. ಈ ವಿಕಿರಣಗಳೇ ಕ್ಯಾನ್ಸರ್ ರೋಗಕ್ಕೆ ಪ್ರಮುಖ ಕಾರಣವಾಗಿವೆ. 

ಚರ್ಮದ ಸುಧಾರಣೆ: ಚರ್ಮದ ಆರೋಗ್ಯ ರಕ್ಷಣೆಯಲ್ಲಿ ತಾಮ್ರ ಬಹಳ ಸಹಕಾರಿಯಾಗಿದೆ. ತಾಮ್ರದ ಪಾತ್ರೆಗಳಲ್ಲಿ ಇಟ್ಟ ನೀರನ್ನು ಕುಡಿಯುವುದರಿಂದ ಮೆಲನಿನ್ ಉತ್ಪಾದನೆಯಾಗಿ ಕಾಂತಿಯುತ ಚರ್ಮ ಉಂಟಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com