• Tag results for ನೀರು

ಚಿಕ್ಕಮಗಳೂರು: ಈಜಲು ಹೋಗಿದ್ದ ಯುವಕ ಸಾವು

ಹಳ್ಳದಲ್ಲಿ ಈಜಲು ಹೋಗಿದ್ದ ಯುವಕನೊರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ  ಜಿಲ್ಲೆಯ ತರೀಕೆರೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ನಡೆದಿದೆ.

published on : 28th October 2019

ಗಂಗಾವತಿ: ಮಹಾ ಮಳೆ; ಶ್ರೀಕೃಷ್ಣದೇವರಾಯನ ಸಮಾಧಿ ಜಲಾವೃತ

ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ ಸಂಗ್ರಹವಾಗುತ್ತಿರುವ ಹೆಚ್ಚುವರಿ ನೀರನ್ನು ನದಿ ಮೂಲಕ ಹೊರಕ್ಕೆ ಬಿಡಲಾಗುತ್ತಿದೆ.

published on : 21st October 2019

ತುಮಕೂರು: ಕುರಿ ಮೈ ತೊಳೆಯಲು ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ಸಾವು

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಹೊಸೂರು ಗ್ರಾಮದ ಕೆರೆಯಲ್ಲಿ ಭಾನುವಾರ ಕುರಿಗಳ ಮೈತೊಳೆಯಲು ಹೋದ ಒಂದೇ ಕುಟುಂಬದ ಮೂವರು ನೀರು ಪಾಲಾಗಿರುವ ದಾರುಣ ಘಟನೆ ನಡೆದಿದೆ.

published on : 20th October 2019

ಮಹದಾಯಿ ತೀರ್ಪಿನ ಕುರಿತು 45 ದಿನಗಳಲ್ಲಿ ಅಧಿಸೂಚನೆ: ಸಂಸದ ಪ್ರಹ್ಲಾದ್ ಜೋಷಿ

ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ನ್ಯಾಯಮಂಡಳಿ ನೀಡಿರುವ ತೀರ್ಪಿನ ಕುರಿತು ಕೇಂದ್ರ ಸರ್ಕಾರ ಮುಂದಿನ 45 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಭರವಸೆ ನೀಡಿದ್ದಾರೆ.

published on : 20th October 2019

2 ನೇ ಬಾರಿಗೆ ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸಿದ ಸರ್ಕಾರ

ಈ ವರ್ಷದಲ್ಲಿ ಎರಡನೇ ಬಾರಿಗೆ 15ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗಿದೆ. ಶುಕ್ರವಾರ ಸಂಜೆ ಸರ್ಕಾರ ಸದ್ದಿಲ್ಲದೇ ನೀರು ಬಿಡುಗಡೆ ಮಾಡಲಾಗಿದೆ.

published on : 19th October 2019

ಮಹದಾಯಿ ನ್ಯಾಯಮಂಡಳಿ ಆದೇಶದ ಅಧಿಸೂಚನೆ ಹೊರಡಿಸಿ: ಉ.ಕ ರೈತರ ಪ್ರತಿಭಟನೆ   

ಉತ್ತರ ಕರ್ನಾಟಕ ಭಾಗದ ರೈತರು ರಾಜಧಾನಿ ಬೆಂಗಳೂರಿಗೆ ಬಂದು ಮಹದಾಯಿ ನ್ಯಾಯಮಂಡಳಿ ಆದೇಶದ ಅಧಿಸೂಚನೆ ಹೊರಡಿಸಿ, ಕರ್ನಾಟಕದ ರೈತರು ತಮ್ಮ ಭಾಗದ ನದಿ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.

published on : 18th October 2019

ನೀರು ಹಂಚಿಕೆ: ಮಹಾರಾಷ್ಟ್ರ ಸರ್ಕಾರದೊಂದಿದೆ ಸಿಎಂ ಯಡಿಯೂರಪ್ಪ ಚರ್ಚೆ

ಉಭಯ ರಾಜ್ಯಗಳ ನಡುವಿನ ನೀರು ಹಂಚಿಕೆ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಹಾರಾಷ್ಟ್ರ ಸರ್ಕಾರದೊಂದಿಗೆ ಗುರುವಾರ ಚರ್ಚೆ ನಡೆಸಿದ್ದಾರೆ. 

published on : 18th October 2019

ಮಹಾರಾಷ್ಟ್ರಕ್ಕೆ ಅಲಮಟ್ಟಿ ನೀರು ಬಿಡುತ್ತೇನೆ ಎಂದಿದ್ದು ನಿಜ: ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಮಹಾರಾಷ್ಟ್ರಕ್ಕೆ ಅಲ್ಮಟ್ಟಿ ನೀರನ್ನು ಹರಿಸುವುದಾಗಿ ಭರವಸೆ ನೀಡಿದ್ದನ್ನು ದೃಢಪಡಿಸಿದ್ದಾರೆ.

published on : 17th October 2019

ಸರ್ವರೋಗಕ್ಕೂ ಮದ್ದು ಈ ಎಳನೀರು!

ಕಲ್ಪವೃಕ್ಷವೆಂದೇ ಕರೆಯಲಾಗುವ ತೆಂಗಿನ ಮರದ ಎಳನೀರು ಸರ್ವರೋಗಕ್ಕೂ ಮದ್ದಾಗಿದ್ದು, ಮನುಷ್ಯನ ದೇಹದ ಆಯಾಸವನ್ನು ದೂರಾಗಿಸಿ ಉಲ್ಲಾಸ ನೀಡುತ್ತದೆ. ನಿರ್ಜಲೀಕರಣ, ಅಜೀರ್ಣ, ಕಿಡ್ನಿಯಲ್ಲಿ ಕಲ್ಲು, ತಲೆನೋವುಗಳಂತಹ ನಾನಾ ರೋಗಗಳಿಗೆ ಎಳನೀರು ಪ್ರಮುಖ ಮದ್ದಾಗಿದೆ. 

published on : 17th October 2019

ಪಾಕ್ ಗೆ ನೀರು ಹರಿಯಲು ಬಿಡುವುದಿಲ್ಲ: ಪ್ರಧಾನಿ ಮೋದಿ

ಭಾರತದಿಂದ ಪಾಕಿಸ್ತಾನಕ್ಕೆ ನೀರು ಹರಿಯಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

published on : 15th October 2019

ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಶೀಘ್ರದಲ್ಲೇ ನೀರು: ಗೃಹ ಸಚಿವ ಅಮಿತ್ ಶಾ

ನೀರು ಹಂಚಿಕೆ ಕುರಿತಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ತಿಕ್ಕಾಟ ಮುಂದುವರೆಯುತ್ತಿರುವ ನಡುವಲ್ಲೇ, ಕರ್ನಾಟಕದಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಗೆ ಕುಡಿಯಲು ಹಾಗೂ ಕೃಷಿ ಭೂಮಿಗೆ ನೀರು ಒದಗಿಸುವುದಾಗಿ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರ ಜನತೆಗೆ ಭರವಸೆ ನೀಡಿದ್ದಾರೆ. 

published on : 12th October 2019

ಭಾರೀ ಮಳೆಗೆ ಒಡೆದ ದೊಡ್ಡಬಿದರಕಲ್ಲು ಕೆರೆ: ನೀರಿನ ಮಟ್ಟ ಕಂಡು ಭೀತಿಗೊಳಗಾದ ಜನತೆ

ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿೀ ಮಳೆಗೆ ದೊಡ್ಡಬಿದರಕಲ್ಲು ಕೆರೆ ಕೋಡಿ ಒಡೆದು ಸುಮಾರು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನೀರಿನ ಮಟ್ಟ ಕಂಡ ಜನತೆ ಭೀತಿಗೊಳಗಾಗಿದ್ದಾರೆ. 

published on : 11th October 2019

ಕಲಬುರಗಿ: ಇಬ್ಬರು ಯುವಕರು ನೀರು ಪಾಲು

ದೇವಿಯ ಘಟಸ್ಥಾಪನೆ ವಿಸರ್ಜನೆಗೆ ತೆರಳಿದ್ದ ಯುವಕರಿಬ್ಬರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿಯ ಕೊಳ್ಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

published on : 9th October 2019

ದಸರಾ ಸಂಭ್ರಮ ಸಾವಿನಲ್ಲಿ ಅಂತ್ಯ! ಚಿಕ್ಕಮಗಳೂರಿನಲ್ಲಿ ಮೂವರು ಬಾಲಕರು ನೀರುಪಾಲು

ಆಯುಧ ಪೂಜೆಯಂದು ಕೆರೆಯಲ್ಲಿ ಸೈಕಲ್ ತೊಳೆದು ಈಜಲು ತೆರಳಿದಾಗ ಮೂವರು ಬಾಲಕರು ನೀರುಪಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

published on : 8th October 2019

ಇದು 'ವೃಷಭಾವತಿ'ಕಥೆ-ವ್ಯಥೆ 

ಬತ್ತಿಹೋಗುತ್ತಿರುವ ವೃಷಭಾವತಿ ಕಥೆಯಿದು. ವೃಷಭಾವತಿ ಬಸವನಗುಡಿಯ ಬಸವ ದೇವಸ್ಥಾನ ಅಥವಾ ದೊಡ್ಡ ಗಣಪತಿ ದೇವಸ್ಥಾನದ ಹತ್ತಿರದ ಸಣ್ಣ ಗುಡ್ಡದಿಂದ ಚಿಮ್ಮಿ ಹರಿದು ಗಾಳಿ ಆಂಜನೇಯ ದೇವಸ್ಥಾನ ಹತ್ತಿರ ಸಾಗುತ್ತದೆ ಎಂದು ಹೇಳಲಾಗುತ್ತದೆ. ಈ ವೃಷಭಾವತಿ ಕೆರೆಯ ನೀರನ್ನು ಗಾಳಿ ಆಂಜನೇಯ ದೇವಸ್ಥಾನದಲ್ಲಿ ಗರ್ಭಗುಡಿ ಅಭಿಷೇಕಕ್ಕೆ ಮತ್ತು ಇತರ ಕಾರ್ಯಗಳಿಗೆ ಬಳಸುತ್ತಿದ್ದರು ಎಂದು ಹೇ

published on : 6th October 2019
1 2 3 4 5 6 >