ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ!

ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ!

ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ ಇಡಬಹುದು ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಲಂಡನ್ : ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ ಇಡಬಹುದು ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.

ನಿರ್ದಿಷ್ಠ ಲಿಪಿಡ್ ಅಣುಗಳನ್ನೊಳಗೊಂಡ ಹೆಚ್ಚಿನ ಮೊಟ್ಟೆ ಸೇವಿಸುತ್ತಿದ್ದ ಪುರುಷರ ರಕ್ತದ ಮಾದರಿಗಳನ್ನು ಟೈಪ್-2 ಡಯಾಬಿಟಿಸ್ ನಿಂದ ಮುಕ್ತವಾಗಿರುವಂತಹ ಪುರುಷರ ರಕ್ತದ ಮಾದರಿಯೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಸಕಾರಾತ್ಮಕ ಅಂಶ ಕಂಡುಬಂದಿದೆ.

ವಿವಾದಾತ್ಮಾಕ ಆಹಾರ ಪದಾರ್ಥಗಳಲ್ಲಿ ಮೊಟ್ಟೆ ಕೂಡಾ ಒಂದಾಗಿದೆ. ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅಂಶದಿಂದಾಗಿ ಮೊಟ್ಟೆಯನ್ನು ಹೆಚ್ಚಾಗಿ  ಸೇವಿಸಬಾರದು ಎಂಬುದು ಕೆಲವರ ಅಭಿಮತ.  ಆದಾಗ್ಯೂ, ಮೊಟ್ಟೆಯಲ್ಲಿ ಪ್ರೋಟಿನ್ ಅಂಶ ಹೆಚ್ಚಾಗಿದ್ದು, ಆರೋಗ್ಯಕ್ಕೆ ಉತ್ತಮ ಎಂದು ಮತ್ತೆ ಕೆಲವರು  ಹೇಳುತ್ತಾರೆ.

ಈ ಸಂಬಂಧ  ಪ್ರತಿದಿನ ಒಂದು ಮೊಟ್ಟೆ ಸೇವಿಸುವ ಹಾಗೂ ವಾರಕ್ಕೆ ಎರಡು ಮೊಟ್ಟೆ ಸೇವಿಸುವ ಹಾಗೂ ಟೈಪ್-2 ಡಯಾಬಿಟಿಸ್ ಇದ್ದು ಮೊಟ್ಟೆ ತೆಗೆದುಕೊಳ್ಳುವರು ಹಾಗೂ ಆರೋಗ್ಯಕರವಾಗಿ ಉಳಿದಿರುವ ನಾಲ್ಕು ಗುಂಪುಗಳ  239 ರಕ್ತದ ಮಾದರಿಗಳನ್ನು ಅಧ್ಯಯನ ನಡೆಸಲಾಗಿದೆ ಎಂದು ಮಾಲಿಕ್ಯೂಲರ್ ನ್ಯೂಟ್ರಿಷಿಯನ್ ಅಂಡ್ ಪುಡ್ ರಿಸರ್ಚ್ ನಲ್ಲಿ ಪ್ರಕಟಿಸಲಾಗಿದೆ.

ಮೊಟ್ಟೆ ಸೇವನೆಯಿಂದ ಮಧುಮೇಹದಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಅಧ್ಯಯನದಿಂದ ಸಲಹೆ ನೀಡಲಾಗಿದೆ. ಮೊಟ್ಟೆ ಸೇವನೆಯಿಂದಾಗುವ ದೈಹಿಕ ಪರಿಣಾಮಗಳ ಬಗ್ಗೆ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಫಿನ್ ಲ್ಯಾಂಡಿನ ಈಸ್ಟರ್ನ್ ವಿಶ್ವವಿದ್ಯಾಲಯದ ಲೇಖಕ ಸ್ಟೆಪಾನಿಯಾ ನೊರ್ಮಾನ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com