ಲಾಕ್'ಡೌನ್ ನಿಂದಾಗಿ ವ್ಯಾಯಾಮ ಮಾಡ್ತಿಲ್ವ? ಮಧುಮೇಹ ರೋಗಿಗಳೇ ಎಚ್ಚರ... ಆರೋಗ್ಯ ಅಪಾಯಕ್ಕೆ ಸಿಲುಕೀತು!

ಜಿಮ್, ವರ್ಕೌಟ್ ಎಂದು ಫಿಟ್ನೆಸ್ ಕಾಪಾಡಿಕೊಳ್ಳುತ್ತಿದ್ದ ಜನರೆಲ್ಲಾ ಇಂದು ಲಾಕ್'ಡೌನ್ ಎಫೆಕ್ಟ್'ನಿಂದಾಗಿ ಮನೆಯಲ್ಲಿಯೇ ಕುಳಿತು, ವ್ಯಾಯಾಮದಿಂದ ದೂರ ಉಳಿದಿದ್ದಾರೆ. ಮನೆಯಲ್ಲಿಯೇ ವ್ಯಾಯಾಮ ಮಾಡಬಹುದಾದರೂ ಜಿಮ್, ಸ್ಪೋರ್ಟ್ಸ್ ಕ್ಲಬ್ ಗಳಿಗೆ ಹೋಗಿ ಮಾಡುವಷ್ಟು...  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಿಮ್, ವರ್ಕೌಟ್ ಎಂದು ಫಿಟ್ನೆಸ್ ಕಾಪಾಡಿಕೊಳ್ಳುತ್ತಿದ್ದ ಜನರೆಲ್ಲಾ ಇಂದು ಲಾಕ್'ಡೌನ್ ಎಫೆಕ್ಟ್'ನಿಂದಾಗಿ ಮನೆಯಲ್ಲಿಯೇ ಕುಳಿತು, ವ್ಯಾಯಾಮದಿಂದ ದೂರ ಉಳಿದಿದ್ದಾರೆ. ಮನೆಯಲ್ಲಿಯೇ ವ್ಯಾಯಾಮ ಮಾಡಬಹುದಾದರೂ ಜಿಮ್, ಸ್ಪೋರ್ಟ್ಸ್ ಕ್ಲಬ್ ಗಳಿಗೆ ಹೋಗಿ ಮಾಡುವಷ್ಟು ಎಫೆಕ್ವಿವ್ ಇರುವುದಿಲ್ಲ ಎಂದು ಸೋಮಾರಿತನ ಪಡುತ್ತಿರುವ ಜನರು ವ್ಯಾಯಾಮಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಆದರೆ, ವ್ಯಾಯಾಮ ಮಾಡದಿರುವ ಮದುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿರಲಿದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. 

ಸಕ್ಕರೆ ಕಾಯಿಲೆ ಇರುವ ರೋಗಿಗಳು ಪ್ರಸ್ತುತದ ಪರಿಸ್ಥಿತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲಾಕ್ ಡೌನ್'ಗೆ ಮುನ್ನ ಹಲವು ಮಧಮೇಹ ರೋಗಿಗಳ ಆರೋಗ್ಯ ಸ್ಥಿರವಾಗಿತ್ತು. ಆದರೆ, ಇದೀಗ ಸಮಸ್ಯೆಗಳು ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದೆ. ಇದೀಗ ನಾವು ರೋಗಿಗಳಿಗೆ ಕೆಲ ವ್ಯಾಯಾಮಗಳನ್ನು ಹಾಗೂ ಔಷಧಿಗಳನ್ನು ನೀಡಲು ಆರಂಭಿಸಿದ್ದೇವೆಂದು ವಿಕ್ರಮ್ ಆಸ್ಪತ್ರೆಯ ಡೈಯಾಬಿಟಾಲೋಜಿ ಎಂಡೋಕ್ರಿನೊಲೊಜಿಸ್ಟ್ ಡಾ.ಪ್ರಿಯಾ ಚನ್ನಪ್ಪ ಅವರು ಹೇಳಿದ್ದಾರೆ. 

ಮಣಿಪಾಲ್ ಆಸ್ಪತ್ರೆಯ ಡೈಯಾಬಿಟಾಲೋಜಿ ಎಂಡೋಕ್ರಿನೊಲೊಜಿಸ್ಟ್ ಡಾ.ಕಾರ್ತಿಕ್ ಪ್ರಭಾಕರ್ ಅವರು ಮಾತನಾಡಿ, ಕಳೆದ ವಾರ ಫೋನ್ ಮೂಲಕ 60 ಮಂದಿ ರೋಗಿಗಳೊಂದಿಗೆ ಮಾತನಾಡಿ ಚಿಕಿತ್ಸೆ ನೀಡಿದ್ದೇನೆ. ಲಾಕ್ ಡೌನ್ ನಿಂದಾಗಿ ಜನರ ಜೀವನಶೈಲಿ ಬದಲಾಗಿದೆ. ಮಧುಮೇಹ ರೋಗಿಗಳ ವ್ಯಾಯಾಮ ಹಾಗೂ ಡಯಟ್ ಎಂದಿನಂತಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ರೋಗಿಗಳಲ್ಲಿನ ಒತ್ತಡ ಹಾಗೂ ಆತಂಕ ಹೆಚ್ಚಾಗುತ್ತಿದೆ. ರೋಗಿಗಳಿಗೆ ನೀಡುತ್ತಿದ್ದ ಇನ್ಸುಲಿನ್ ಹಾಗೂ ಔಷಧಿಗಳನ್ನು ಬದಲಿಸುತ್ತಿದ್ದೇವೆ. ಮೆಟ್ಟಿಲುಗಳನ್ನು ಹತ್ತಿ ಇಳಿದು ವ್ಯಾಯಾಮ ಮಾಡುವಂತೆ ತಿಳಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಸಿಎಂಐ ಆಸ್ಪತ್ರೆಯ ಎಂಡೋಕ್ರಿನಾಲಜಿ ಕನ್ಸಲ್ಟೆಂಟ್ ಡಾ.ಮಹೇಶ್ ಡಿಎಂ ಮಾತನಾಡಿ, ಮನೆಯಲ್ಲಿಯೇ ವ್ಯಾಯಾಮ ಮಾಡಲು ಸಾಧ್ಯವಿದೆ. ಯೋಗಾ, ಸ್ಕಿಪ್ಪಿಂಗ್, ವಾಕಿಂಗ್, ರನ್ನಿಂಗ್ ನಂತಹ ವ್ಯಾಯಾಮ ಮಾಡಬಹುದು. ಕೈಗಳಿಂದ ಕೂಡ ವ್ಯಾಯಾಮಗಳನ್ನು ಮಾಡಬಹುದು ಎಂದು ತಿಳಿಸಿದ್ದಾರೆ. 

ಮಧುಮೇಹ ರೋಗಿಗಳಿಗೆ ಡಾ.ಮಹೇಶ್ ಅವರು ಕೆಲ ಸಲಹೆಗಳನ್ನು ನೀಡಿದ್ದು, ಅವುಗಳು ಇಂತಿವೆ...

  • ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಿ. 
  • ಆರೋಗ್ಯಕರ, ಸಮತೋಲಿತ ಆಹಾರ ಸೇವನೆ ಮಾಡಿ. 
  • ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಿ. ಇನ್ಸುಲಿನ್ ಕೂಡ ಸಮಯಕ್ಕೆ ತೆಗೆದುಕೊಳ್ಳಿ. 
  • ಗ್ಲುಕೋಮೀಟರ್ ಗಳ ಮೂಲಕ ಮನೆಯಲ್ಲಿಯೇ ಆಗಾಗ ಸಕ್ಕರೆ ಪ್ರಮಾಣವನ್ನು ತಪಾಸಣೆ ಮಾಡಿಕೊಳ್ಳಿ. 
  • ಫೋನ್ ಮೂಲಕ ವೈದ್ಯರೊಂದಿಗೆ ಸಂಪರ್ಕದಲ್ಲಿರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com