ಸಾಮಾಜಿಕ ಅಂತರ ಜಾರಿ ಒಂದು ದಿನ ವಿಳಂಬವಾದರೆ 2.4 ದಿನ ಹೆಚ್ಚಾಗಿ ಕೊರೋನ ಜೊತೆ ಬದುಕಿ: ಅಧ್ಯಯನ ವರದಿ!
ಆರೋಗ್ಯ
ಸಾಮಾಜಿಕ ಅಂತರ ಜಾರಿ ಒಂದು ದಿನ ವಿಳಂಬವಾದರೆ 2.4 ದಿನ ಹೆಚ್ಚಾಗಿ ಕೊರೋನ ಜೊತೆ ಬದುಕಿ: ಅಧ್ಯಯನ ವರದಿ!
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ವಿಳಂಬ ಮಾಡಿದರೆ 2.4 ದಿನ ಹೆಚ್ಚಾಗಿ ಕೊರೋನಾ ಜೊತೆ ಹೆಚ್ಚು ಇರಬೇಕಾಗುತ್ತದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ವಿಳಂಬ ಮಾಡಿದರೆ 2.4 ದಿನ ಹೆಚ್ಚಾಗಿ ಕೊರೋನಾ ಜೊತೆ ಹೆಚ್ಚು ಇರಬೇಕಾಗುತ್ತದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.
58 ನಗರಗಳಲ್ಲಿ ನಡೆಸಿದ ಅಧ್ಯಯನ ವರದಿಯ ಮೂಲಕ ಈ ಮಾಹಿತಿ ಲಭ್ಯವಾಗಿದ್ದು, ಅಧ್ಯಯನ ವರದಿ ಆರೋಗ್ಯಕ್ಕೆ ಸಂಬಂಧಪಟ್ಟ journal Emerging Infectious Diseases ಎಂಬ ಜರ್ನಲ್ ನಲ್ಲಿ ಪ್ರಕಟವಾಗಿದೆ.
ಸಾಮಾಜಿಕ ಅಂತರ ಜಾರಿಯನ್ನು ವಿಳಂಬಗೊಳಿಸಿದಷ್ಟೂ ಕೊರೋನಾ ಹರಡುವುದು ಹೆಚ್ಚಿ, ಕೊರೋನಾ ಜೊತೆಯೇ ಜೀವಿಸುವುದು ಹೆಚ್ಚಾಗುತ್ತದೆ ಎನ್ನುತ್ತಿದ್ದಾರೆ ಸಂಶೋಧಕರು.
ಈ ಅಂಶ ಹೊಸದಾಗಿ ಕೊರೋನಾ ಹರಡುವಿಕೆಯನ್ನು ಎದುರಿಸುತ್ತಿರುವ ಸಮುದಾಯಗಳು ಹಾಗೂ ಕೊರೋನಾದಿಂದ ಚೇತರಿಕೆ ಕಾಣುತ್ತಿರುವ ಪ್ರದೇಶಗಳಿಗೂ ಸಮನಾಗಿ ಅನ್ವಯಿಸುತ್ತದೆ ಎಂದು ಆಸ್ಟಿನ್ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಎಚ್ಚರಿಸಿದ್ದಾರೆ.