• Tag results for covid

ಕೊರೋನಾ ಏರಿಳಿತ: ಇಂದು ಬೆಂಗಳೂರಿನಲ್ಲಿ 791 ಸೇರಿ ರಾಜ್ಯದಲ್ಲಿ 1329 ಮಂದಿಗೆ ಪಾಸಿಟಿವ್; 5 ಸಾವು

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1329 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 40,29,446ಕ್ಕೆ ಏರಿಕೆಯಾಗಿದೆ.

published on : 13th August 2022

ರಾಜ್ಯದಲ್ಲಿ ಮಾಸ್ಕ್ ಧರಿಸದವರಿಗೆ 250 ರೂ. ದಂಡ? ಈ ಬಗ್ಗೆ ಆರೋಗ್ಯ ಆಯುಕ್ತರು ನೀಡಿದ ಮಾಹಿತಿ ಇಲ್ಲಿದೆ...

ಕೋವಿಡ್ ಪ್ರಕರಣಗಳು, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಮೊದಲ ಹೆಜ್ಜೆಯಾಗಿ, ಆರೋಗ್ಯ ಸೌಧ ಮತ್ತು ಅದರ ಆವರಣದಲ್ಲಿ ಮಾಸ್ಕ್ ಧರಿಸದವರಿಗೆ 250 ರೂಪಾಯಿ ದಂಡ ವಿಧಿಸಲು ಆರೋಗ್ಯ ಆಯುಕ್ತ ಡಿ. ರಂದೀಪ್ ಆದೇಶ ಹೊರಡಿಸಿದ್ದಾರೆ.

published on : 13th August 2022

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಕೊರೋನಾ ಪಾಸಿಟಿವ್

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಮತ್ತೆ ಕೋವಿಡ್ ಪಾಸಿಟಿವ್ ಬಂದಿದೆ. ಸರ್ಕಾರದ ಕೊರೋನಾ ಶಿಷ್ಟಾಚಾರ ಪ್ರಕಾರ ಅವರು ಹೋಂ ಐಸೊಲೇಷನ್ ಗೆ ಒಳಗಾಗಲಿದ್ದಾರೆ ಎಂದು ಪಕ್ಷದ ಸಂಸದ ಹಾಗೂ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.

published on : 13th August 2022

ಕೋವಿಡ್-19: ದೇಶದಲ್ಲಿಂದು 15,815 ಹೊಸ ಪ್ರಕರಣ, ಸಾವಿಗೀಡಾದವರ ಸಂಖ್ಯೆ ಅಧಿಕ

ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 15,815 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದೇ ಅವಧಿಯಲ್ಲಿ 68 ಜನರು ಸಾವಿಗೀಡಾಗಿದ್ದಾರೆ. ಈ ಪೈಕಿ ಕೇರಳವೊಂದರಲ್ಲೇ 24 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

published on : 13th August 2022

ಕೊರೋನಾ ಮತ್ತೆ ಹೆಚ್ಚಳ: ಇಂದು ಬೆಂಗಳೂರಿನಲ್ಲಿ 1202 ಸೇರಿ ರಾಜ್ಯದಲ್ಲಿ 2032 ಮಂದಿಗೆ ಪಾಸಿಟಿವ್; 5 ಸಾವು

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ 2032 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 40,28,117ಕ್ಕೆ ಏರಿಕೆಯಾಗಿದೆ.

published on : 12th August 2022

ಪ್ರಸಕ್ತ ಓಮಿಕ್ರಾನ್ ತಳಿಗಳು ಶೇ.20-30 ರಷ್ಟು ಹೆಚ್ಚು ಸೋಂಕು ಹರಡಿಸಲು ಸಮರ್ಥ: ಎನ್ ಟಿಎಜಿಐ ವೈದ್ಯ ಎನ್ ಕೆ ಅರೋರ

ರಾಷ್ಟ್ರ ರಾಜಧಾನಿ ಹಾಗೂ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಸಂಖ್ಯೆ ಹೆಚ್ಚಳದ ನಡುವೆ ಕೋವಿಡ್-19 ರೂಪಾಂತರಗಳ ವಂಶವಾಹಿ ಸಂರಚನೆ ವಿಶ್ಲೇಷಣೆ (ಜಿನೋಮ್‌ ಸೀಕ್ವೆನ್ಸಿಂಗ್) ಯನ್ನು ಆ.08 ರಂದು ನಡೆಸಲಿದೆ. 

published on : 12th August 2022

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,561 ಹೊಸ ಪ್ರಕರಣ; 18,053 ಮಂದಿ ಚೇತರಿಕೆ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 16 ಸಾವಿರದ 561 ಹೊಸ ಕೋವಿಡ್ ಕೇಸುಗಳು ವರದಿಯಾಗಿದ್ದು 18 ಸಾವಿರದ 053 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 

published on : 12th August 2022

ಕೊರೋನಾ ಏರಿಳಿತ: ಇಂದು ಬೆಂಗಳೂರಿನಲ್ಲಿ 1225 ಸೇರಿ ರಾಜ್ಯದಲ್ಲಿ 1691 ಮಂದಿಗೆ ಪಾಸಿಟಿವ್; 6 ಸಾವು

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1691 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 40,26,085ಕ್ಕೆ ಏರಿಕೆಯಾಗಿದೆ.

published on : 11th August 2022

ರಾಜ್ಯದಲ್ಲಿ ಕೋವಿಡ್‌ ಬೂಸ್ಟರ್ ಡೋಸ್ ಲಸಿಕೆ ಪಡೆದವರ ಸಂಖ್ಯೆ ಶೇ. 17 ಮಾತ್ರ: ಸಚಿವ ಸುಧಾಕರ್

ರಾಜ್ಯದಲ್ಲಿ ಕೋವಿಡ್‌ ಮೂರನೇ ಡೋಸ್‌(ಬೂಸ್ಟರ್ ಡೋಸ್) ಲಸಿಕೆಯನ್ನು ಶೇ. 17 ರಷ್ಟು ಮಂದಿ ಮಾತ್ರ ಪಡೆದಿದ್ದಾರೆ. ಉಚಿತವಾಗಿ ನೀಡುತ್ತಿದ್ದರೂ ಲಸಿಕೆ ಪಡೆಯದಿರುವುದು ತೀವ್ರ ಬೇಸರದ ಸಂಗತಿ. ಉತ್ತಮ ಆರೋಗ್ಯಕ್ಕಾಗಿ...

published on : 11th August 2022

ಕೋವಿಡ್ ಪ್ರಕರಣಗಳ ಹೆಚ್ಚಳ: ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ, ಧರಿಸದಿದ್ದರೆ 500 ರೂ. ದಂಡ

ಕೋವಿಡ್ ಪ್ರಕರಣಗಳ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಗುರುವಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದು, ನಿಯಮ ಉಲ್ಲಂಘಿಸಿದರೆ 500 ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದೆ.

published on : 11th August 2022

ಕೋವಿಡ್-19: ದೇಶದಲ್ಲಿ 16,299 ಹೊಸ ಕೊರೊನಾ ಸೋಂಕು ಪ್ರಕರಣ, 53 ಜನ ಸಾವು

ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 16,299 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,42,06,996 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

published on : 11th August 2022

ಕೋವಿಡ್-19: ರಾಜ್ಯದಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆ; 1,680 ಹೊಸ ಪ್ರಕರಣ ಪತ್ತೆ, ಸೋಂಕಿಗೆ ಐವರು ಬಲಿ

ರಾಜ್ಯದಲ್ಲಿ ಕೆಲ ದಿನಗಳಿಂದ ಕಡಿಮೆ ಸಂಖ್ಯೆಯಲ್ಲಿದ್ದ ಕೋವಿಡ್-19 ಸಾವಿನ ಪ್ರಕರಣದಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ  ಐವರು ಸೋಂಕಿತರು ಬಲಿಯಾಗಿದ್ದಾರೆ.

published on : 10th August 2022

ಕೊರೊನಾ ಬೂಸ್ಟರ್ ಡೋಸ್ ಆಗಿ ಕೊರ್ಬೆವ್ಯಾಕ್ಸ್: ಕೇಂದ್ರ ಅನುಮೋದನೆ

ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನಿಂದ ಸಂಪೂರ್ಣವಾಗಿ ಲಸಿಕೆಯನ್ನು ಪಡೆದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಡೋಸ್ ಆಗಿ ಬಯಲಾಜಿಕಲ್ ಇ ಸಂಸ್ಥೆಯ ಕಾರ್ಬೆವಾಕ್ಸ್ ಅನ್ನು ಬಳಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

published on : 10th August 2022

ಹೆಚ್ಚು ವೇಗವಾಗಿ ಹರಡಬಲ್ಲ ಕೊರೊನಾ ವೈರಾಣು ರೂಪಾಂತರ ಓಮೈಕ್ರಾನ್‌ನ ಉಪತಳಿ ದೆಹಲಿಯಲ್ಲಿ ಪತ್ತೆ!

ದೆಹಲಿಯ ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ (ಎಲ್‌ಎನ್‌ಜೆಪಿ) ವಂಶವಾಹಿ ಸಂರಚನೆ ವಿಶ್ಲೇಷಣೆಗಾಗಿ (ಜಿನೋಮ್‌ ಸೀಕ್ವೆನ್ಸಿಂಗ್)  ಕಳುಹಿಸಲಾಗಿದ್ದ ಮಾದರಿಗಳಲ್ಲಿ ಕೊರೊನಾ ವೈರಸ್‌ನ ರೂಪಾಂತರವಾದ ಓಮೈಕ್ರಾನ್‌ನ ಹೊಸ ಉಪತಳಿ ಪತ್ತೆಯಾಗಿದೆ ಎಂದು ಆಸ್ಪತ್ರೆಯ ಉನ್ನತ ವೈದ್ಯಾಧಿಕಾರಿ ತಿಳಿಸಿದ್ದಾರೆ.

published on : 10th August 2022

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಮತ್ತೆ ಕೊರೋನಾ ಪಾಸಿಟಿವ್

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮತ್ತೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದೇನೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಬೆಳಗ್ಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ.

published on : 10th August 2022
1 2 3 4 5 6 > 

ರಾಶಿ ಭವಿಷ್ಯ