
ಬೆಳಗಾವಿ: ಕೊರೊನಾ ಮಹಾಮಾರಿಗೆ ಬೆಳಗಾವಿಯಲ್ಲಿ ಮೊದಲ ಬಲಿಯಾಗಿದ್ದು, ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ವೃದ್ಧ ಬಲಿಯಾಗಿದ್ದಾರೆ.
ಬುಧವಾರದಂದು ಕೋವಿಡ್ ಪಾಸಿಟಿವ್ ಎಂದು ತಪಾಸಣೆಯಲ್ಲಿ ಕಂಡು ಬಂದಿತ್ತು. ತಡರಾತ್ರಿ ಚಿಕಿತ್ಸೆ ಫಲಿಸದೆ ವೃದ್ಧ ಮೃತಪಟ್ಟಿದ್ದಾರೆ. ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಚಿಕಿತ್ಸೆ ಗೆ ಅಂತಾ ಬೀಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.
ಕೊವಿಡ್ ತಪಾಸಣೆ ಮಾಡಿದಾಗ ಪಾಸಿಟಿವ್ ಎಂದು ಗೊತ್ತಾದ ತಕ್ಷಣವೇ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಿಸದ ಕಾರಣ 70 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಕೊವಿಡ್ ನಿಯಮಾವಳಿ ಪ್ರಕಾರವೇ ರಾತ್ರಿಯೇ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೆರಿಸಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊವಿಡ್-19 ಸೋಂಕು ಕಂಡುಬಂದಿದ್ದು, ಸೈಲೆಂಟ್ ಆಗಿಯೇ ಮತ್ತೆ ರಾಜ್ಯದಲ್ಲಿ ತನ್ನ ಅಧಿಪತ್ಯ ಸಾಧಿಸುತ್ತಿದೆ. ನಿನ್ನೆ ಬೆಳಗ್ಗೆವರೆಗೂ ಒಟ್ಟು 100 ಮಂದಿಯಲ್ಲಿ ಕೋವಿಡ್ ಸೋಂಕು ದೃಢವಾಗಿತ್ತು. ಸಂಜೆಯೊಳಗೆ ಮತ್ತಷ್ಟು ಪ್ರಕರಣಗಳು ಪತ್ತೆಯಾಗಿವೆ. ಆದ್ರೆ ಕೊರೊನಾ ಮಹಾಮಾರಿಗೆ ಬೆಳಗಾವಿಯಲ್ಲಿ ಮೊದಲ ಬಲಿಯಾಗಿದೆ. ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ರೋಗಿ ಮೃತಪಟ್ಟಿದ್ದಾರೆ.
Advertisement