• Tag results for ಕೋವಿಡ್

ಕೋವಿಡ್ ಲಸಿಕೆ ಪಡೆಯುವುದರಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.75-80 ರಷ್ಟು ಕಡಿಮೆ: ಕೇಂದ್ರ ಸರ್ಕಾರ

ವ್ಯಾಕ್ಸಿನೇಷನ್ ನಂತರ ಕೋವಿಡ್ ಸೋಂಕು ತಗುಲಿ, ಆಮ್ಲಜನಕದ ಅವಶ್ಯಕತೆ ಶೇಕಡಾ 8 ಕ್ಕೆ ಇಳಿದ ನಂತರವೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳು ಶೇಕಡಾ 75-80 ರಷ್ಟು ಕಡಿಮೆಯಾಗಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

published on : 18th June 2021

ಕೋವಿಡ್-19 ವೈರಸ್ ನ ಮತ್ತೊಂದು ರೂಪಾಂತರ; 29 ದೇಶಗಳಲ್ಲಿ ಅಟ್ಟಹಾಸ; 'ಲಾಂಬ್ಡಾ' ಅಪಾಯಕಾರಿ ತಳಿ ಎಂದ ವಿಶ್ವ ಆರೋಗ್ಯ ಸಂಸ್ಥೆ

ಜಗತ್ತಿನಾದ್ಯಂತ ಮಾರಣಾಂತಿಕ ವೈರಸ್ ಕೋವಿಡ್-19 ಅಟ್ಟಹಾಸ ಮುಂದುವರೆದಿರುವಂತೆಯೇ ಇದೀಗ ಇದೇ ಡೆಡ್ಲಿ ವೈರಸ್ ನ ಮತ್ತೊಂದು ರೂಪಾಂತರ ಕೂಡ ತನ್ನ ಆರ್ಭಟ ಆರಂಭಿಸಿದೆ.

published on : 18th June 2021

ಗರಿಷ್ಠ ಪ್ರಮಾಣದಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಲಾಭ ಪಡೆದ ದಕ್ಷಿಣದ ರಾಜ್ಯಗಳು; ಕರ್ನಾಟಕ ನಂ.1

ಕೋವಿಡ್‌ ಸಂಕಷ್ಟದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಸದುಪಯೋಗಪಡಿಸಿಕೊಂಡ ರಾಜ್ಯಗಳ ಪೈಕಿ ದಕ್ಷಿಣ ಭಾರತದ ರಾಜ್ಯಗಳು ಹೆಚ್ಚು ಲಾಭ ಪಡೆದಿದ್ದು, ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.

published on : 18th June 2021

ಕೇವಲ 20 ರೂ. ಗೆ ಜೊಲ್ಲು ಆಧಾರಿತ ಕೋವಿಡ್ ಟೆಸ್ಟ್?

ಮಧು ಮೇಹಿಗಳಲ್ಲಿ ಸಕ್ಕರೆ ಪ್ರಮಾಣ ತಪಾಸಣೆಗಾಗಿ ಬಳಸುವ ಗ್ಲೊಕೊಸ್ ಟೆಸ್ಟ್ ನಿಂದ ಪ್ರೇರಣೆಗೊಂಡ ಸಂಶೋಧಕರು, ಕೋವಿಡ್-19 ಸಾಂಕ್ರಾಮಿಕಕ್ಕಾಗಿ ತ್ವರಿತ ಹಾಗೂ ಕಡಿಮೆ ವೆಚ್ಚದ, ಜೊಲ್ಲು ಆಧಾರಿತ ಪರೀಕ್ಷೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

published on : 18th June 2021

ಸಮರೋಪಾದಿಯಲ್ಲಿ 1,500 ಆಮ್ಲಜನಕ ಘಟಕ ನಿರ್ಮಾಣ, ಪ್ರತಿ ಜಿಲ್ಲೆಗೂ ಆಕ್ಸಿಜನ್ ತಲುಪುವಂತೆ ಕ್ರಮ: ಪ್ರಧಾನಿ ಮೋದಿ

ಕೋವಿಡ್-19 ಸಾಂಕ್ರಾಮಿಕ ಎದುರಿಸಲು ದೇಶಾದ್ಯಂತ ಸಮರೋಪಾದಿ ಕಾರ್ಯಗಳು ನಡೆಯುತ್ತಿದ್ದು, ದೇಶದ ಪ್ರತೀ ಜಿಲ್ಲೆಗೂ ಆಮ್ಲಜನಕ ತಲುಪುವಂತೆ ದೇಶಾದ್ಯಂತ 1500 ಆಮ್ಲಜನಕ ಘಟಕ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

published on : 18th June 2021

ಶಿಕ್ಷಕರನ್ನು ಕೊರೋನಾ ಕರ್ತವ್ಯದಿಂದ ಮುಕ್ತಗೊಳಿಸಿ: ಸರ್ಕಾರಕ್ಕೆ ಶಿಕ್ಷಣ ಇಲಾಖೆ ಪತ್ರ

ನೂತನ ಶೈಕ್ಷಣಿಕ ವರ್ಷ ಜುಲೈ 1 ರಿಂದ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಕೊರೋನಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಶಿಕ್ಷಕರ ಕೈಬಿಡುವಂತೆ ಸರ್ಕಾರಕ್ಕೆ ಶಿಕ್ಷಣ ಇಲಾಖೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ. 

published on : 18th June 2021

ಕೋವಿಡ್ ಎಫೆಕ್ಟ್: ಚುನಾವಣೆಗಳನ್ನು 6 ತಿಂಗಳ ಕಾಲ ಮುಂದೂಡಿ ರಾಜ್ಯ ಸರ್ಕಾರ ಆದೇಶ

ಕೊರೋನಾ ಕಾರಣದಿಂದಾಗಿ ರಾಜ್ಯದಲ್ಲಿ ನಡೆಯಬೇಕಿದ್ದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ, ಉಪ ಚುನಾವಣೆ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರ ಸ್ಥಾನಗಳ ಚುನಾವಣೆಯನ್ನು ಮುಂದೂಡಲಾಗಿದೆ.

published on : 18th June 2021

ಕೋವಿಡ್-19: ವಿಶ್ವದಾದ್ಯಂತ 40 ಲಕ್ಷಕ್ಕೂ ಹೆಚ್ಚು ಮಂದಿ ಕೊರೋನಾ ವೈರಸ್ ನಿಂದ ಸಾವು

ಕೋವಿಡ್‍ ಸಾಂಕ್ರಾಮಿಕದಿಂದ ವಿಶ್ವದಾದ್ಯಂತ 40 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆಂದು ರಾಯಿಟರ್ಸ್‌ ವರದಿ ಮಾಡಿದೆ.

published on : 18th June 2021

ಕೋವಿಡ್ ಸೆಸ್: 7 ರಾಜ್ಯಗಳ ಹಣಕಾಸು ಸಚಿವರೊಂದಿಗೆ ಬೊಮ್ಮಾಯಿ ಸಭೆ

ಕೋವಿಡ್ ಸೆಸ್ ಸಂಗ್ರಹಿಸುವಂತೆ ಸಿಕ್ಕಿಂ ರಾಜ್ಯ ಸಲಹೆ ನೀಡಿದ್ದ ಹಿನ್ನೆಲೆಯಲ್ಲಿ ಈ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ 7 ರಾಜ್ಯಗಳ ಹಣಕಾಸು ಸಚಿವರೊಂದಿಗೆ ವರ್ಚುವಲ್ ಸಭೆ ನಡೆಸಿ ಮಾತುಕತೆ ನಡೆಸಿದರು.

published on : 18th June 2021

ಮೋದಿ ತಪ್ಪು ಒಪ್ಪಿಕೊಂಡರೆ ಮಾತ್ರ ದೇಶ ಪುನರ್ ನಿರ್ಮಾಣ ಸಾಧ್ಯ: ರಾಹುಲ್ ಗಾಂಧಿ  

ಪ್ರಧಾನಿ ನರೇಂದ್ರ ಮೋದಿ ತಮ್ಮ  ತಪ್ಪುಗಳನ್ನು ಒಪ್ಪಿಕೊಂಡು , ಬಳಿಕ  ತಜ್ಞರ ಸಲಹೆಯಂತೆ ನಡೆದಾಗ ಮಾತ್ರ ದೇಶದ ಪುನರ್ ನಿರ್ಮಾಣ ಸಾಧ್ಯವಾಗಲಿದೆ ಎಂದು ಯುವ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

published on : 17th June 2021

ಕೋವಿಡ್-19 ಮುಂದಿನ ಅಲೆಯಲ್ಲಿ ಮಕ್ಕಳ ಮೇಲೆ ತೀವ್ರಗತಿಯ ಪರಿಣಾಮದ ಸಾಧ್ಯತೆಗಳಿಲ್ಲ: ಏಮ್ಸ್- ಡಬ್ಲ್ಯೂಹೆಚ್ ಒ ಸಮೀಕ್ಷೆ

ಮುಂದಿನ ಕೋವಿಡ್-19 ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂಬುದು ಏಮ್ಸ್ ನೇತೃತ್ವದಲ್ಲಿ ನಡೆದ ಬಹು-ಕೇಂದ್ರಿತ ಸಮುದಾಯ ಆಧಾರಿತ ಸಿರೊಸರ್ವೆಯಲ್ಲಿ ತಿಳಿದುಬಂದಿದೆ.

published on : 17th June 2021

ಕೊರೋನಾ: ರಾಜ್ಯದಲ್ಲಿ ಇಂದು 5,983 ಹೊಸ ಪ್ರಕರಣ, 138 ಸಾವು, 10,685 ಮಂದಿ ಡಿಸ್ಚಾರ್ಜ್

ರಾಜ್ಯದಲ್ಲಿ ಇಂದು ಹೊಸದಾಗಿ 5,983 ಮಂದಿಗೆ ಕೊರೋನಾ ಕಾಣಿಸಿಕೊಂಡಿದ್ದು, 10,685 ಮಂದಿ ಡಿಸ್ಚಾರ್ಜ್ ಆಗಿದ್ದರೆ, 138 ಮಂದಿ ಸಾವನ್ನಪ್ಪಿದ್ದಾರೆ.

published on : 17th June 2021

ಕೋವಿಡ್-19: ತಮಿಳು ನಟ ಶಮನ್ ಮಿತ್ರು ಸಾವು

ಕೊರೋನಾ ಸೋಂಕಿಗೆ ತಮಿಳು ಚಿತ್ರರಂಗದ ನಟ, ಛಾಯಾಗ್ರಾಹಕ ಶಮನ್ ಮಿತ್ರು ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಇಂದು ಜೂನ್ 17ರ ಬೆಳಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶಮನ್ ಕೊನೆಯುಸಿರೆಳೆದಿದ್ದಾಗಿ ತಿಳಿದುಬಂದಿದೆ.

published on : 17th June 2021

ಷರತ್ತುಗಳೊಂದಿಗೆ ಜೂನ್​​ 21ರಿಂದ ಬಿಎಂಟಿಸಿ ಸಂಚಾರ ಆರಂಭಕ್ಕೆ ಬಿಬಿಎಂಪಿ ಒಪ್ಪಿಗೆ

ಸಾರ್ವಜನಿಕರಿಂದ ತೀವ್ರ ಒತ್ತಡ ಮನವಿ ಕೇಳಿಬಂದ ಹಿನ್ನಲೆಯಲ್ಲಿ ಬಿಬಿಎಂಪಿ ಇದೇ ಸೋಮವಾರ ಜೂ.21ರಿಂದ ಷರತ್ತುಗಳೊಂದಿಗೆ ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸಲು ಬಿಬಿಎಂಪಿ ಒಪ್ಪಿಗೆ ಸೂಚಿಸಿದೆ.

published on : 17th June 2021

ಅದ್ದೂರಿ ವಿವಾಹಕ್ಕೆ ಬ್ರೇಕ್ ಹಾಕಿ, ಸರಳ ವಿವಾಹವಾದ ಜೋಡಿ; ಕೋವಿಡ್ ರಿಲೀಫ್ ಫಂಡ್ ಗೆ 37 ಲಕ್ಷ ರೂ. ದೇಣಿಗೆ!

ತಮಿಳುನಾಡಿನ ವಿಶೇಷ ಜೋಡಿಯೊಂದು ತಮ್ಮ ಅದ್ದೂರಿ ವಿವಾಹಕ್ಕೆ ಬ್ರೇಕ್ ಹಾಕಿ ಅದೇ ಹಣವನ್ನು ಕೋವಿಡ್- ರಿಲೀಫ್ ಫಂಡ್ ಗೆ ದೇಣಿಗೆಯಾಗಿ ನೀಡಿದೆ.

published on : 17th June 2021
1 2 3 4 5 6 >