ಸಾಂದರ್ಭಿಕ ಚಿತ್ರ
ರಾಜ್ಯ
COVID-19: ರಾಜ್ಯದಲ್ಲಿ ಇಂದು 40 ಜನರಿಗೆ ಕೊರೋನಾ ಸೋಂಕು ದೃಢ; ಒಟ್ಟು ಪ್ರಕರಣಗಳ ಸಂಖ್ಯೆ 211ಕ್ಕೆ ಏರಿಕೆ!
ರಾಜ್ಯದಲ್ಲಿ ಇಂದು ಯಾವುದೇ ಕೋವಿಡ್ ಸಾವು ವರದಿಯಾಗಿಲ್ಲ. ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 126 ಆಗಿದ್ದು, 14 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 40 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 211ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು ಯಾವುದೇ ಕೋವಿಡ್ ಸಾವು ವರದಿಯಾಗಿಲ್ಲ. ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 126 ಆಗಿದ್ದು, 14 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜನವರಿ 1 ರಿಂದ ಇಲ್ಲಿಯವರೆಗೂ ಒಟ್ಟಾರೇ 84 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಯಲ್ಲಿ ಒಟ್ಟು 395 ಪರೀಕ್ಷೆ ಮಾಡಲಾಗಿದೆ. ಈ ಪೈಕಿ 344 RTPCR ಹಾಗೂ 51 RAT ಪರೀಕ್ಷೆ ಆಗಿದ್ದು, ಪಾಸಿಟಿವಿಟಿ ದರ ಶೇ. 10. 12 ರಷ್ಟಿದ್ದು, ಸಾವಿನ ದರ ಶೂನ್ಯವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ