ಪ್ರತೀ 10 ಭಾರತೀಯರಲ್ಲಿ ಒಬ್ಬರಿಗೆ ಕ್ಯಾನ್ಸರ್, ಪ್ರತೀ 15 ರಲ್ಲಿ ಒಬ್ಬ ಮಹಾಮಾರಿಗೆ ಬಲಿ: ವಿಶ್ವ ಆರೋಗ್ಯ ಸಂಸ್ಥೆ ವರದಿ

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೀಡಿದ ವರದಿಯ ಪ್ರಕಾರ, ಭಾರತದಲ್ಲಿ 2018 ರಲ್ಲಿ 1.16 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದೆ.ಅದರಂತೆ ಪ್ರತೀ 10 ಭಾರತೀಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ರೋಗದಿಂಡ ಬಳಲುತ್ತಾರೆ ಹಾಗೂ ಪ್ರತೀ 15 ಮಂದಿಯಲ್ಲಿ ಒಬ್ಬರು ಈ ಕಾಯಿಲೆಯಿಂದ ಸಾಯುತ್ತಾರೆ ಎಂದು ಡಬ್ಲ್ಯುಎಚ್‌ಒ ವಿವರಿಸಿದೆ. 
 

Published: 04th February 2020 02:55 PM  |   Last Updated: 04th February 2020 02:58 PM   |  A+A-


Posted By : Raghavendra Adiga
Source : PTI

ವಿಶ್ವ ಕ್ಯಾನ್ಸರ್ ದಿನದ ವಿಶೇಷ 

ಯುನೈಟೆಡ್ ನೇಷನ್ಸ್: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೀಡಿದ ವರದಿಯ ಪ್ರಕಾರ, ಭಾರತದಲ್ಲಿ 2018 ರಲ್ಲಿ 1.16 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದೆ.ಅದರಂತೆ ಪ್ರತೀ 10 ಭಾರತೀಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ರೋಗದಿಂಡ ಬಳಲುತ್ತಾರೆ ಹಾಗೂ ಪ್ರತೀ 15 ಮಂದಿಯಲ್ಲಿ ಒಬ್ಬರು ಈ ಕಾಯಿಲೆಯಿಂದ ಸಾಯುತ್ತಾರೆ ಎಂದು ಡಬ್ಲ್ಯುಎಚ್‌ಒ ವಿವರಿಸಿದೆ. 

ಇಂದು (ಮಂಗಳವಾರ) ವಿಶ್ವ ಕ್ಯಾನ್ಸರ್ ದಿನಾಚರಣೆಯಾಗಿದ್ದು ಈ ಪ್ರಯುಕ್ತ, ಡಬ್ಲ್ಯುಎಚ್‌ಒ ಮತ್ತು ಅದರ ವಿಶೇಷ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್ಸಿ) ಎರಡು ವರದಿಗಳನ್ನು ಬಿಡುಗಡೆ ಮಾಡಿದೆ: ಒಂದು ರೋಗದ ಜಾಗತಿಕ ಕಾರ್ಯಸೂಚಿಯನ್ನು ನಿಗದಿಪಡಿಸುವ ಗುರಿಯನ್ನು ಹೊಂದಿದ್ದರೆ  ಇನ್ನೊಂದು ಮಹಾಮಾರಿಯ ತಡೆಗಟ್ಟುವಿಕೆ ಕುರಿತು ಸಂಶೋಧನೆ ಮೇಲೆ ಕೇಂದ್ರೀಕೃತವಾಗಿದೆ.

2018 ರಲ್ಲಿ ಭಾರತದಲ್ಲಿ ಅಂದಾಜು ಮಾಡಲಾದ ಕ್ಯಾನ್ಸರ್ ಪ್ರಕರಣಗಳ ಪ್ರಕಾರ, ಸುಮಾರು 1.16 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು  , 784,800 ಮಂದಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ.ಅಲ್ಲದೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ 2.35 ಮಿಲಿಯನ್ಮಂದಿಗೆ ಐದು ವರ್ಷಗಳಿಂಡ ಕ್ಯಾನ್ಸರ್ ಮಹಾಮಾರಿ ಇದೆ."10 ಭಾರತೀಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾರೆ.15 ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್ ನಿಂದ ಸಾಯುತ್ತಾರೆ" ಎಂದು ವರದಿ ಹೇಳಿದೆ.

ಭಾರತದಲ್ಲಿ, ಸ್ತನ ಕ್ಯಾನ್ಸರ್ (162,500 ಪ್ರಕರಣಗಳು), ಬಾಯಿಯ ಕ್ಯಾನ್ಸರ್ (120,000 ಪ್ರಕರಣಗಳು), ಗರ್ಭಕಂಠದ ಕ್ಯಾನ್ಸರ್ (97,000 ಪ್ರಕರಣಗಳು), ಶ್ವಾಸಕೋಶದ ಕ್ಯಾನ್ಸರ್ (68,000 ಪ್ರಕರಣಗಳು), ಹೊಟ್ಟೆಯ ಕ್ಯಾನ್ಸರ್ (57,000 ಪ್ರಕರಣಗಳು), ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (57,000) ).ವರದಿಯಾಗಿದೆ. ಇದು ಹೊಸದಾಗಿ ಪತ್ತೆಯಾಗಿರುವ ಕ್ಯಾನ್ಸರ್ ನ ಶೇಕಡಾ 49ರಷ್ಟಾಗಿದೆ. ಪುರುಷರಲ್ಲಿ 570,000 ಹೊಸ ಕ್ಯಾನ್ಸರ್ ಪ್ರಕರಣ ವರದಿಯಾಗಿದ್ದು ಇವುಗಳಲ್ಲಿ ಬಾಯಿಯ ಕ್ಯಾನ್ಸರ್ (92,000), ಶ್ವಾಸಕೋಶದ ಕ್ಯಾನ್ಸರ್ (49,000), ಹೊಟ್ಟೆಯ ಕ್ಯಾನ್ಸರ್ (39,000), ಕೊಲೊರೆಕ್ಟಲ್ ಕ್ಯಾನ್ಸರ್ (37,000), ಮತ್ತು ಓಸೊಫೇಜಿಲ್ ಕ್ಯಾನ್ಸರ್ (34,000) 4 ಇದೆ. ಇನ್ನು ಮಹಿಳೆಯರಲ್ಲಿ 587,000 ಹೊಸ ಕ್ಯಾನ್ಸರ್ ಪ್ರಕರಣಗಳು ಕಾಣಿಸಿದ್ದು , ಸ್ತನ ಕ್ಯಾನ್ಸರ್ (162,500), ಗರ್ಭಕಂಠದ ಕ್ಯಾನ್ಸರ್ (97,000), ಅಂಡಾಶಯದ ಕ್ಯಾನ್ಸರ್ (36,000), ಬಾಯಿಯ ಕ್ಯಾನ್ಸರ್ (28,000), ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (20,000)ಇವೆ.

"ಭಾರತದಲ್ಲಿ ಕ್ಯಾನ್ಸರ್ ಮಾದರಿಗಳು ತಂಬಾಕು-ಸಂಬಂಧಿತ ಮೆದುಳು ಹಾಗೂ  ಕುತ್ತಿಗೆ ಕ್ಯಾನ್ಸರ್, ವಿಶೇಷವಾಗಿ ಬಾಯಿಯ ಕ್ಯಾನ್ಸರ್, ಪುರುಷರಲ್ಲಿ ಕಾಣಿಸುತ್ತದೆ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ನ ಗುರುತು ಹೆಚ್ಚಾಗಿದೆ.; ಈ ಎರಡೂ ಕ್ಯಾನ್ಸರ್ ಪ್ರಕಾರಗಳು ಕಡಿಮೆ ಸಾಮಾಜಿಕ ಆರ್ಥಿಕ ಸ್ಥಿತಿ ಹೊಂದಿರುವ ಜನರಲ್ಲಿದೆ"ಸ್ತನ ಕ್ಯಾನ್ಸರ್ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ನಂತಹ ಕ್ಯಾನ್ಸರ್ ಪ್ರಕಾರಗಳುಅಧಿಕ ತೂಕ ಮತ್ತು ಬೊಜ್ಜು, ಕಡಿಮೆ ಮಟ್ಟದ ದೈಹಿಕ ಚಟುವಟಿಕೆ ಮತ್ತು ಜಡ ಜೀವನಶೈಲಿಯಿಂದ ಹೆಚ್ಚುತ್ತಿದೆ. ಈ ಕ್ಯಾನ್ಸರ್ ಪ್ರಕಾರಗಳು ಮೇಲ್ವರಗದ ಆರ್ಥಿಕ ಸ್ಥಿತಿ ಇರುವವರಲ್ಲಿ ಹೆಚ್ಚಾಗಿದೆ."ಕಳೆದ ಎರಡು ದಶಕಗಳಲ್ಲಿ, ಭಾರತವು ವಿಶ್ವದ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಸ್ಥಿರ ಆರ್ಥಿಕತೆಯನ್ನು ಹೊಂದಿದೆ, ಇದು ಹೆಚ್ಚಿನ ವರ್ಷಗಳಲ್ಲಿ ವಾರ್ಷಿಕವಾಗಿ ಶೇಕಡಾ 7 ಕ್ಕಿಂತ ಹೆಚ್ಚಾಗಿದೆ.ಈ ಆರ್ಥಿಕ ಅಭಿವೃದ್ಧಿಯು ವ್ಯಾಪಕವಾದ ಸಾಮಾಜಿಕ ಆರ್ಥಿಕ ಬದಲಾವಣೆಗಳಿಗೆ ಕಾರಣವಾಗಿದೆ, ಕ್ಯಾನ್ಸರ್ ಸೇರಿದಂತೆ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚಾಗುತ್ತವೆ ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಸೇವೆಗಳ ಕ್ಷೇತ್ರದಲ್ಲಿ ಗಮನಾರ್ಹ ಅಸಮಾನತೆಗಳಿವೆ" ಎಂದು ವರದಿ ತಿಳಿಸಿದೆ.ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸದೆ ಹೋದಲ್ಲಿ ಮುಂದಿನ 20 ವರ್ಷಗಳಲ್ಲಿ ಜಾಗತಿಕ ಕ್ಯಾನ್ಸರ್ ಪ್ರಮಾಣವು ಶೇಕಡಾ 60 ರಷ್ಟು ಏರಿಕೆಯಾಗಬಹುದು ಎಂದು ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಈ ರಾಷ್ಟ್ರಗಳಲ್ಲಿ ಶೇಕಡಾ 15 ಕ್ಕಿಂತ ಕಡಿಮೆ ಜನರು ತಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಮೂಲಕ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಸೇವೆಗಳನ್ನು ನೀಡುತ್ತಾರೆ ಎಂದು ಯುಎನ್ ಅಂಗಸಂಸ್ಥೆ ಹೇಳೀಕೆ ತಿಳಿಸಿದೆ.

ವಿಶ್ವದ ಶೇಕಡಾ 80 ರಷ್ಟು ಧೂಮಪಾನಿಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಹೇಳಿದೆ.ಇದಲ್ಲದೆ, ವಿಶ್ವದ ದೈನಂದಿನ ಧೂಮಪಾನಿಗಳಲ್ಲಿ ಶೇಕಡಾ 64 ರಷ್ಟು ಜನರು ಕೇವಲ 10 ದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ವಿಶ್ವದ 50 ಪ್ರತಿಶತ ಪುರುಷ ಧೂಮಪಾನಿಗಳು ಮೂರು ದೇಶಗಳಲ್ಲಿ ವಾಸಿಸುತ್ತಿದ್ದಾರೆ ಆ ಮೂರು ದೇಶಗಳೆಂದರೆ ಚೀನಾ, ಭಾರತ ಮತ್ತು ಇಂಡೋನೇಷ್ಯಾ.ಪ್ರಸ್ತುತ 164 ಮಿಲಿಯನ್ ಧೂಮಪಾನ ರಹಿತ ತಂಬಾಕು ಬಳಕೆದಾರರು, ಇದ್ದು ಅದರಲ್ಲಿ 69 ಮಿಲಿಯನ್ ಧೂಮಪಾನಿಗಳು ಮತ್ತು 42 ಮಿಲಿಯನ್ ಧೂಮಪಾನಿಗಳು ಮತ್ತು ಗುಟ್ಕಾ ಸೇವನೆ ಮಾಡುವವರು ಇದ್ದಾರೆ.ಬಾಯಿಯ ಕ್ಯಾನ್ಸರ್ ಹೊಂದಿರುವ ಶೇಕಡಾ 90 ಕ್ಕಿಂತ ಹೆಚ್ಚು ರೋಗಿಗಳು ಕಡಿಮೆ ಅಥವಾ ಕಡಿಮೆ-ಮಧ್ಯಮ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಹೊಂದಿದ್ದಾರೆತಂಬಾಕು-ಸಂಬಂಧಿತ ಕ್ಯಾನ್ಸರ್ ಪುರುಷರಲ್ಲಿನ ಎಲ್ಲಾ ಕ್ಯಾನ್ಸರ್ಗಳಲ್ಲಿ ಶೇಕಡಾ 34–69 ರಷ್ಟಿದೆ,  ಭಾರತದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಮತ್ತು ನಗರ ಜನಸಂಖ್ಯೆಯಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಸಂಭವಿಸುವಿಕೆ ಹೆಚ್ಚುತ್ತಿದೆ.

"ದೇಶಾದ್ಯಂತ ಸ್ತನ ಕ್ಯಾನ್ಸರ್ ಸಂಭವಿಸುವಿಕೆಯ ಪ್ರಮಾಣದಲ್ಲಿ ಸ್ಪಷ್ಟವಾಗಿ ಹೆಚ್ಚುತ್ತಿರುವ ಪ್ರವೃತ್ತಿ ಇದೆ, ವಾರ್ಷಿಕ ಶೇಕಡಾವಾರು ಹೆಚ್ಚಳವು ಶೇಕಡಾ 1.4 ರಿಂದ 2.8 ರವರೆಗೆ ಇರುತ್ತದೆ ಮತ್ತು ಇದು ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚು ಸ್ಪಷ್ಟವಾಗಿದೆ. "ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಮಾಣವು ಸ್ಪಷ್ಟವಾಗಿ ಕಡಿಮೆಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ 
 

Stay up to date on all the latest ಆರೋಗ್ಯ news with The Kannadaprabha App. Download now
facebook twitter whatsapp