
ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗ ವೈದ್ಯಕೀಯ ಲೋಕಕ್ಕೆ ಪ್ರತಿನಿತ್ಯ ಒಂದಲ್ಲ ಒಂದು ಸವಾಲುಗಳನ್ನು ಎಸೆಯುತ್ತಲೇ ಇದೆ. ಸಾಂಕ್ರಾಮಿಕ ರೋಗದಿಂದ ಪಾರಾಗಲು ಹೋರಾಡುತ್ತಿರುವ ಭಾರತಕ್ಕೆ ಇದೀಗ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕರ್ಮೈಕೋಸಿಸ್ ತಲೆನೋವು ಶುರುವಾಗಿದೆ.
ಈ ಬ್ಲ್ಯಾಕ್ ಫಂಗಸ್ ಕೊರೋನಾ ವೈರಸ್ ಗಿಂತಲೂ ಅಪಾಯಕಾರಿ ಹಾಗೂ ಮಾರಣಾಂತಿಕವಾಗಿದೆ. ಈ ರೋಗ ಹೆಚ್ಚಾಗಿ ಬಾಯಿಯ ವಸಡಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಮಧುಮೇಹ ಅಧಿಕ ಇದ್ದವರಿಗೆ ಬ್ಲ್ಯಾಕ್ ಫಂಗಸ್ ಹೆಚ್ಚಾಗಿದೆ (ಮ್ಯೂಕರ್ಮೈಕೋಸಿಸ್) ಬರುತ್ತಿದೆ. ಸ್ಟಿರಾಯ್ಡಾ ಔಷಧವನ್ನು ಕೊಟ್ಟಾಗ ಮಧುಮೇಹ ಹೆಚ್ಚಾಗುತ್ತದೆ. ಮಧುಮೇಹ ಇಲ್ಲದವರಿಗೆ ಕೊರೋನಾ ಬಂದರೆ ಮಧುಮೇಹ ಹೊಸದಾಗಿ ಅಂಟಿಕೊಳ್ಳುತ್ತಿದೆ. ಮಧುಮೇಹ ನಿಯಂತ್ರಣದಲ್ಲಿದ್ದವರಿಗೆ ಕೋವಿಡ್ ಬಂದರೆ ಒಮ್ಮೆಲೆ ಅಧಿಕವಾಗುತ್ತಿದೆ. ಕೊರೋನಾ ನಿಯಂತ್ರಿಸಲು ಸ್ಟಿರಾಯ್ಡ್ ಕೊಡಬೇಕಾಗುತ್ತದೆ. ಆಗ ಮಧುಮೇಹ ಜಾಸ್ತಿಯಾಗುತ್ತದೆ. ಇಂತಹ ಸಂದರ್ಭಕ್ಕಾಗಿಯೇ ಮ್ಯೂಕರ್ಮೈಕೋಸಿಸ್ ಫಂಗಸ್ ಕಾದು ಕುಳಿತಿರುತ್ತದೆ. ಇಂತಹವರನ್ನೇ ಫಂಗಸ್ ಆಶ್ರಯಿಸುತ್ತಿದೆ.
ಕೊರೊನಾ ಸೋಂಕು ಬಂದು ಉಸಿ ರಾಟದ ಸಮಸ್ಯೆಯಾದಾಗ ಸಹಜವಾಗಿ ಆಕ್ಸಿಜನ್ ಅಗತ್ಯವಾಗುತ್ತದೆ. ಆಕ್ಸಿಜನ್ ಬೇಡಿಕೆ ಹೆಚ್ಚಾದ ಕಾರಣ ಎಲ್ಲಿ ಆಕ್ಸಿಜನ್ ಸಿಗುತ್ತದೋ ಅಲ್ಲಿಂದ ತರುವ ಸ್ಥಿತಿ ಇದೆ. ಹೀಗಾಗಿ ಕೈಗಾರಿಕಾ ಆಕ್ಸಿಜನ್ ಕೂಡ ಬಳಕೆ ಮಾಡಲಾಗುತ್ತಿದೆ
ಕೈಗಾರಿಕಾ ಆಕ್ಸಿಜನ್ ಅಷ್ಟು ಶುದ್ಧ ಆಗಿರುವುದಿಲ್ಲ. ಇದರಲ್ಲಿ ಸ್ವಲ್ಪವಾದರೂ ಮಿಶ್ರಣ ಇರುತ್ತದೆ. ಆಕ್ಸಿಜನ್ ಕಾನ್ಸಂಟ್ರೇಟರ್ ಬಳಕೆಯಾಗುತ್ತಿದೆ. ಇದು ವಿದೇಶಗಳಿಂದ ದೇಣಿಗೆಯಾಗಿಯೂ ಬರುತ್ತಿದೆ. ಆಕ್ಸಿಜನ್ ಅನ್ನು ನೇರವಾಗಿ ಕೊಡಲು ಆಗುವುದಿಲ್ಲ, ನೀರಿನ ಮೂಲಕವೇ ಕೊಡಬೇಕು. ಆಗ ಬಹಳ ಜಾಗರೂಕತೆಯಿಂದ ಶುದ್ಧ ನೀರನ್ನು ಬಳಸಬೇಕು. ಎಲ್ಲ ಕಡೆ ಶುದ್ಧ ನೀರು ಸಿಗುತ್ತದೆಯೆ? ಎಲ್ಲ ಮನೆಗಳಲ್ಲಿಯೂ, ಎಲ್ಲ ಆಸ್ಪತ್ರೆಗಳಲ್ಲಿಯೂ ಇದನ್ನು ನಿರೀಕ್ಷಿಸುವುದು ಕಷ್ಟಸಾಧ್ಯ. ಯಾವುದೋ ನಳ್ಳಿ ನೀರನ್ನು ಬಳಸಿದರೆ ಅಪಾಯವಿದೆ. ಆದ್ದರಿಂದ ಪರಿಶುದ್ಧ ನೀರನ್ನೇ ಉಪಯೋಗಿಸಬೇಕು. ಈ ಎಲ್ಲಾ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ರೋಗ ಹೆಚ್ಚಾಗುತ್ತಿದೆ.
ಮ್ಯೂಕರ್ಮೈಕೋಸಿಸ್ ತೆಲಂಗಾಣ ರಾಜ್ಯವನ್ನು ಹೆಚ್ಚು ಬಾಧಿಸುತ್ತಿದೆ. ಅಲ್ಲಿನ ಆರೋಗ್ಯ ಇಲಾಖೆ ಇದನ್ನು ಸಾಂಕ್ರಾಮಿಕ ಎಂದು ಅಧಿಕೃತವಾಗಿ ಘೋಷಿಸಿದೆ.
ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರು ನೀಡಿದ ಅಧಿಸೂಚನೆಯ ಪ್ರಕಾರ, ಇದು ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಅಡಿಯಲ್ಲಿ ಸೂಚಿಸಬಹುದಾದ ಕಾಯಿಲೆಯಾಗಿದೆ ಎನ್ನಲಾಗಿದೆ. ಈ ಕಪ್ಪು ಶಿಲೀಂಧ್ರವು ಮುಖ್ಯವಾಗಿ ಕಣ್ಣು, ಕಿವಿ ಮತ್ತು ಬಾಯಿಯ ಕುಹರದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.
ಬಾಯಿಯ ಮೇಲಿನ ಪರಿಣಾಮ ಕುರಿತು ಪ್ರತಿಕ್ರಿಯೆ ನೀಡಿರುವ, ಮಹೇಂದ್ರ ದಂತ ಆಸ್ಪತ್ರೆಯ ಮುಖ್ಯ ಸಲಹೆಗಾರ ಡಾ. ಸಮೀರ್ ಆಜಾದ್ ಮಹೇಂದ್ರ ಅವರು, ಮ್ಯೂಕರ್ಮೈಕೋಸಿಸ್ ಬಾಯಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಕೋವಿಡ್-19 ರಿಂದ ಚೇತರಿಸಿಕೊಂಡ ರೋಗಿಗಳಿಗೆ ಕನಿಷ್ಠ ಒಂದು ತಿಂಗಳಾದರೂ ನಿಯಮಿತವಾಗಿ ಮೌಖಿಕ ತಪಾಸಣೆಗೆ ನಡೆಸಬೇಕು ವೈದ್ಯರು ಸಲಹೆ ನೀಡುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದ್ದಾರೆ. ಪ್ರಮುಖವಾಗಿ ಮಧುಮೇಹ ಇರುವವರಿಗೆ ಸಲಹೆ ನೀಡಲೇಬೇಕಿದೆ. ಬಾಯಿಯಲ್ಲಿ ಶುರುವಾಗುವ ಈ ಸೋಂಕು ರೋಗವನ್ನು ಉಲ್ಭಣಿಸುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ಸುತ್ತಲಿನ ಗಾಳಿಯಲ್ಲಿ ಬ್ಲ್ಯಾಕ್ ಫಂಗಸ್ ಇದೆ ಎಂಬುದನ್ನು ಜನರು ಅರಿಯಬೇಕಿದೆ. ನಾವು ಅದನ್ನು ಉಸಿರಾಡುತ್ತಿದ್ದೇವೆ. ಆದರೆ, ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಅದರ ವಿರುದ್ಧ ಹೋರಾಡುತ್ತಿದೆ. ಸೋಂಕಿಗೊಳಗಾಗಿರುವ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ, ಅವರಿಗೆ ಬ್ಲ್ಯಾಕ್ ಫಂಗಸ್ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಹಾಗಾದರೆ ಸೋಂಕಿನಿಂದ ಚೇತರಿಸಿಕೊಂಡವರು ಬ್ಲ್ಯಾಕ್ ಫಂಗಸ್ ರೋಗದಿಂದ ದೂರ ಉಳಿಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಾದರೂ ಯಾವುವು?
Advertisement