ಗರ್ಭಿಣಿಯರು, ನವಜಾತ ಶಿಶುಗಳನ್ನು ಹೊಂದಿರುವ ಮಹಿಳೆಯರು ಕೊರೋನಾ ಲಸಿಕೆ ಪಡೆಯಬಹುದೇ? ವೈದ್ಯರು ಏನು ಹೇಳುತ್ತಾರೆ? 

ಇಂದು ತಾಯಂದಿರ ದಿನ, ಈ ವರ್ಷ ಕೊರೋನಾ ಸೋಂಕಿನ ತೀವ್ರತೆ ಸಾಕಷ್ಟಿದ್ದು ಅನೇಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಗರ್ಭಿಣಿಯರು ಕೊರೋನಾ ಲಸಿಕೆ ತೆಗೆದುಕೊಳ್ಳಬಹುದೇ?
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಂದು ತಾಯಂದಿರ ದಿನ, ಈ ವರ್ಷ ಕೊರೋನಾ ಸೋಂಕಿನ ತೀವ್ರತೆ ಸಾಕಷ್ಟಿದ್ದು ಅನೇಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಗರ್ಭಿಣಿಯರು ಕೊರೋನಾ ಲಸಿಕೆ ತೆಗೆದುಕೊಳ್ಳಬಹುದೇ, ಏನು ಎಚ್ಚರಿಕೆಗಳನ್ನು ವಹಿಸಬೇಕು ಎಂಬುದಕ್ಕೆ ಅಮೆರಿಕದ ಇಂಟರ್ನಲ್ ಮೆಡಿಸಿನ್ ವೈದ್ಯ ಡಾ.ಸ್ಪೂರ್ತಿ ಅರುಣ್ ಮತ್ತು ಗ್ಲೆನೆಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಪದ್ಮಪ್ರಿಯಾ ವಿವೇಕ್ ವಿವರಿಸಿದ್ದಾರೆ. ಅವರು ಏನು ಹೇಳಿದ್ದಾರೆ ನೋಡೋಣ:

ಮುಟ್ಟು ಅಥವಾ ಋತುಮತಿಯಾಗಿರುವ ಸಮಯದಲ್ಲಿ ಮಹಿಳೆಯರು ಕೋವಿಡ್ ಲಸಿಕೆ ತೆಗೆದುಕೊಳ್ಳಬಹುದೇ, ಲಸಿಕೆ ಮತ್ತು ಋತುಚಕ್ರದ ನಡುವೆ ಯಾವುದೇ ಸಂಬಂಧವಿದೆಯೇ?
ಹೌದು, ಋತುಮತಿ ಸಮಯದಲ್ಲಿ ಲಸಿಕೆ ತೆಗೆದುಕೊಳ್ಳಬಹುದು, ಮುಟ್ಟಿಗಿಂತ ಮೊದಲು ಮತ್ತು ನಂತರವೂ ಲಸಿಕೆ ತೆಗೆದುಕೊಳ್ಳುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದರೆ ಅಥವಾ ಕಡಿಮೆ ರಕ್ತಸ್ರಾವವಾಗುತ್ತಿದ್ದರೂ ಲಸಿಕೆ ತೆಗೆದುಕೊಳ್ಳುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಲಸಿಕೆಯಿಂದ ಯಾವುದೇ ಅಪಾಯವಿಲ್ಲ. ಮುಟ್ಟಿನ ಸಮಯದಲ್ಲಿ ಲಸಿಕೆ ತೆಗೆದುಕೊಂಡವರಿಗೆ ಕೆಲವರಿಗೆ ಹೆಚ್ಚು ಸುಸ್ತು ಆಗಬಹುದು, ಕೆಲವರಿಗೆ ಮುಟ್ಟಿನ ದಿನ ಮುಂದೆ ಹೋಗಬಹುದು, ಆದರೆ ಒಟ್ಟಾರೆಯಾಗಿ ಯಾವುದೇ ಸಮಸ್ಯೆಯಿಲ್ಲ, ಸುರಕ್ಷಿತವಾಗಿ ಭಯವಿಲ್ಲದೆ ತೆಗೆದುಕೊಳ್ಳಬಹುದು.

ಗರ್ಭನಿರೋಧಕ ಕ್ರಮಗಳನ್ನು ಅನುಸರಿಸುತ್ತಿರುವ ಮತ್ತು ಗರ್ಭಧಾರಣೆ ಬಯಸುತ್ತಿರುವ ಮಹಿಳೆಯರು ಲಸಿಕೆ ತೆಗೆದುಕೊಳ್ಳಬಹುದೇ?
ಗರ್ಭನಿರೋಧಕ ವಿಧಾನಗಳನ್ನು ಪಾಲಿಸುತ್ತಿರುವ ಮಹಿಳೆಯರು ಖಂಡಿತಾ ಲಸಿಕೆ ಪಡೆಯಬಹುದು. ಗರ್ಭ ಹೊಂದಲು ಬಯಸುತ್ತಿರುವ ಮಹಿಳೆಯರು ಎರಡನೇ ಡೋಸ್ ಲಸಿಕೆ ಪಡೆದುಕೊಂಡ ನಂತರ ಎರಡು ವಾರಗಳವರೆಗೆ ಕಾದು ನಂತರ ಗರ್ಭಧಾರಣೆಗೆ ಪ್ರಯತ್ನಿಸಬಹುದು. ರೋಗನಿರೋಧಕ ಶಕ್ತಿ ಗರ್ಭಿಣಿಯರ ದೇಹದಲ್ಲಿ ಬೇರೆ ಸಮಯಗಳಿಗಿಂತ ಕಡಿಮೆಯಿರುತ್ತದೆ. ಹಾಗಾಗಿ ಗರ್ಭ ಧರಿಸುವ ಮೊದಲು ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸಿಕೊಳ್ಳುವುದು ಸುರಕ್ಷಿತ.

ಕೆಲವು ದೇಶಗಳಲ್ಲಿ ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಹಿಳೆಯರಿಗೆ ಲಸಿಕೆ ನೀಡುತ್ತಿದ್ದಾರೆ, ಭಾರತದಲ್ಲಿ ಹೇಗೆ?
ತಮಿಳು ನಾಡು ಸರ್ಕಾರ ಗರ್ಭಿಣಿಯರಿಗೆ ಮತ್ತು ಮಗುವಿಗೆ ಎದೆಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡುತ್ತಿಲ್ಲ. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆ ಈ ವರ್ಗದ ಮಹಿಳೆಯರ ಮೇಲಿನ ಪ್ರಯೋಗ ಸಾಕಷ್ಟಿಲ್ಲ ಮತ್ತು ದಾಖಲೆಗಳು ಸಾಕಷ್ಟಿಲ್ಲ. ಆದರೆ ಹಾಲುಣಿಸುವ ಮಹಿಳೆಯರಿಗೆ ಲಸಿಕೆ ನೀಡಿದರೆ ಸುರಕ್ಷಿತ ಏಕೆಂದರೆ ಅವರಿಂದ ಮಗುವಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ ಡಾ ಸ್ಪೂರ್ತಿ. ಸತ್ತ ಅಥವಾ ನಿಷ್ಕ್ರಿಯಗೊಂಡ ವೈರಸ್‌ಗಳಿಗೆ  ಲಸಿಕೆಗಳನ್ನು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ನೀಡಿದರೆ ಸುರಕ್ಷಿತವಾಗಿರುತ್ತದೆ ಎನ್ನುತ್ತಾರೆ.

ಕೊರೋನಾ ಲಸಿಕೆಯ ಎರಡು ಡೋಸ್ ಗಳ ಮಧ್ಯೆ ಗರ್ಭವತಿಯಾದರೆ ಏನು ಮಾಡುವುದು, ಅಥವಾ ಮಹಿಳೆಗೆ ತಾನು ಗರ್ಭವತಿಯೇ, ಇಲ್ಲವೇ ಎಂಬ ಗೊಂದಲವಿದ್ದರೆ ಅಂತಹ ಸಂದರ್ಭದಲ್ಲಿ?
ಎರಡು ಲಸಿಕೆಗಳ ಸಮಯಗಳ ಮಧ್ಯೆ ಮಹಿಳೆ ಗರ್ಭವತಿಯಾದರೆ ಗರ್ಭಪಾತ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಎರಡನೇ ಡೋಸ್ ನ್ನು ಮಗುವಿನ ಹೆರಿಗೆಯಾಗುವವರೆಗೆ ಮತ್ತು ಹಾಲುಣಿಸುವವರೆಗೆ ವಿಳಂಬ ಮಾಡಬಹುದು. ಒಂದು ವೇಳೆ ಲಸಿಕೆ ತೆಗೆದುಕೊಳ್ಳುತ್ತಿರುವುದರ ಮಧ್ಯೆ ತಾನು ಗರ್ಭವತಿಯೇ, ಅಲ್ಲವೇ ಎಂದು ಮಹಿಳೆಗೆ ಗೊಂದಲವಿದ್ದರೆ ಮುಂದಿನ ಮುಟ್ಟಿನ ಸಮಯದವರೆಗೆ ಕಾದು ನಂತರ ವೈದ್ಯರ ಸಲಹೆ ಮೇರೆಗೆ ಲಸಿಕೆ ಪಡೆಯಬಹುದು.

ಕೊರೋನಾ ಲಸಿಕೆ ಬಗ್ಗೆ ಮಹಿಳಾ ವೃಂದದಲ್ಲಿ ಭಯ, ಆತಂಕವಿದೆಯೇ, ಲಸಿಕೆ ಪಡೆಯಲು ಯಾವ ವರ್ಗದ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ?
-ಥೈರಾಯ್ಡ್ ಸಮಸ್ಯೆ ಹೊಂದಿರುವವರು, ಹಾರ್ಮೋನುಗಳ ಅಸಮತೋಲನ, ಫೈಬ್ರಾಯ್ಡ್‌ಗಳು, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಮತ್ತು ಗರ್ಭಾಶಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರು ಲಸಿಕೆ ಪಡೆಯುವ ಬಗ್ಗೆ ಹೆದರುತ್ತಾರೆ. ಆದರೆ ಯಾರೂ ಭಯಪಡುವ ಅಗತ್ಯವಿಲ್ಲ, ಎಲ್ಲರೂ ಸುರಕ್ಷಿತವಾಗಿ ಕೊರೋನಾ ಲಸಿಕೆ ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com