ಕೋವಿಡ್ ವ್ಯಾಕ್ಸೀನ್: ನಿಮ್ಮ ಪ್ರಶ್ನೆಗೆ ವೈದ್ಯರ ಉತ್ತರ ಇಲ್ಲಿದೆ! ವಿಡಿಯೋ

ಕೋವಿಡ್ ವ್ಯಾಕ್ಸೀನ್ ಕುರಿತ ಹಲವಾರು ಪ್ರಶ್ನೆಗಳು ಜನರಲ್ಲಿವೆ, ವೈದ್ಯರಲ್ಲೂ ವಿಭಿನ್ನವಾದ ಅಭಿಪ್ರಾಯಗಳಿರಬಹುದು. ಏಕೆಂದರೆ ಈ ಕುರಿತಂತೆ ಸಂಶೋಧನೆ ನಡೆಯುತ್ತಲೇ ಇದೆ. ಹಾಗಾಗಿ 'ಅಧಿಕೃತ ಮಾಹಿತಿ'ಯನ್ನು ಬೆಂಗಳೂರು ಮೆಡಿಕಲ್ ಕಾಲೇಜು-92 ಬ್ಯಾಚ್‌ನ ತಜ್ಞರೇ ಇಲ್ಲಿ ನೀಡಿದ್ದಾರೆ.
ಕೋವಿಡ್-19 ಸಂಬಂಧಿತ ನೆರವಿಗೆ 'ಬಿಎಂಸಿ 92' ಉಚಿತ ವೈದ್ಯ ಸೇವೆ
ಕೋವಿಡ್-19 ಸಂಬಂಧಿತ ನೆರವಿಗೆ 'ಬಿಎಂಸಿ 92' ಉಚಿತ ವೈದ್ಯ ಸೇವೆ

ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆಗೆ ಜನರು ತತ್ತರಿಸಿ ಹೋಗಿರುವಂತೆಯೇ ಇತ್ತ ಬೆಂಗಳೂರು ಮೆಡಿಕಲ್ ಕಾಲೇಜು- 92 ಬ್ಯಾಚ್‌ನ ವೈದ್ಯರ ತಂಡವೊಂದು ಉಚಿತ ವೈದ್ಯಕೀಯ ಸೇವೆ ಆರಂಭಿಸಿದೆ.

ಕೋವಿಡ್ ವ್ಯಾಕ್ಸೀನ್ ಕುರಿತ ಹಲವಾರು ಪ್ರಶ್ನೆಗಳು ಜನರಲ್ಲಿವೆ, ವೈದ್ಯರಲ್ಲೂ ವಿಭಿನ್ನವಾದ ಅಭಿಪ್ರಾಯಗಳಿರಬಹುದು. ಏಕೆಂದರೆ ಈ ಕುರಿತಂತೆ ಸಂಶೋಧನೆ ನಡೆಯುತ್ತಲೇ ಇದೆ. ಹಾಗಾಗಿ 'ಅಧಿಕೃತ ಮಾಹಿತಿ'ಯನ್ನು ತಜ್ಞರೇ ಇಲ್ಲಿ ನೀಡಿದ್ದಾರೆ.

ಕನ್ನಡದ ಕಿರುತೆರೆಯ ಹಲವು ನಟ/ನಟಿಯರು ಕೇಳಿದ ಪ್ರಶ್ನೆಗಳಿಗೆ ಬೆಂಗಳೂರು ಮೆಡಿಕಲ್ ಕಾಲೇಜು- 92ರ ಬ್ಯಾಚ್‌ನ ದೇಶವಿದೇಶಗಳಲ್ಲಿರುವ ತಜ್ಞರು ಉತ್ತರಿಸಿದ್ದಾರೆ. ನೀವೂ ನೋಡಿ, ಇನ್ನಷ್ಟು ಜನರಿಗೆ ಷೇರ್ ಮಾಡಿ.

ಬಿಎಂಸಿ-92 ಕುರಿತು
ಬೆಂಗಳೂರು ವೈದ್ಯಕೀಯ ಕಾಲೇಜಿನ 1992ರ ಬ್ಯಾಚ್‌ನ ಪದವೀಧರರ ಗುಂಪು ಬಿಎಂಸಿ-92 ಎಂಬ ಹೆಸರಿನಲ್ಲಿ ಪರ್ಯಾಯ ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದು, ಸೋಂಕಿತರ ಚಿಕಿತ್ಸೆಗೆ ತಜ್ಞ ವೈದ್ಯರು, ಆಪ್ತ ಸಮಾಲೋಚನೆ, ಸಹಾಯವಾಣಿ, ಆಮ್ಲಜನಕ ಸಾಂದ್ರಕಗಳು, ಪಲ್ಸ್‌ ಆಕ್ಸಿಮೀಟರ್‌ಗಳು  ಸೇರಿದಂತೆ ಹಲವು ಸೇವೆಗಳನ್ನು ಒದಗಿಸಲಾಗುತ್ತಿದೆ. ಕೋವಿಡ್‌ ರೋಗಿಗಳು ಆಮ್ಲಜನಕದ ಹಾಸಿಗೆಯವರೆಗೂ ಬರುವುದನ್ನು ತಡೆದು ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡುವುದು ಈ ತಂಡದ ಗುರಿಯಾಗಿದೆ.

ಸೋಂಕಿತರಲ್ಲಿ ಭಯ ಕಡಿಮೆ ಮಾಡಿ ಮತ್ತು ಅವರಿಗೆ ದೃಢೀಕೃತ ಮಾಹಿತಿ ರವಾನಿಸುವ ಉದ್ದೇಶದಿಂದ ಸ್ವಯಂಸೇವಕರ ಪಡೆ‌ ಕಟ್ಟುವ ಆಲೋಚನೆಯಲ್ಲಿ ಶುರುವಾದ ಯೋಜನೆ ಈಗ,  ಬಿಎಂಸಿ-92 ತಂಡದ ವೈದ್ಯರ ಸಹಾಯದಿಂದ ಆನ್‌ಲೈನ್‌ ಆಸ್ಪತ್ರೆಯ ಸ್ವರೂಪ ಪಡೆದಿದೆ.

08047166115 ಸಹಾಯವಾಣಿ
ಕೋವಿಡ್‌ ರೋಗಿಗಳಿಗೆ ನೆರವು ನೀಡಲು ಈ ತಂಡ 08047166115 ಸಂಖ್ಯೆಯ ಸಹಾಯವಾಣಿ ಆರಂಭಿಸಿದ್ದು, ಸಹಾಯವಾಣಿಗೆ ಕರೆ ಬಂದ ತಕ್ಷಣ ವಿವರ ದಾಖಲಿಸಿಕೊಂಡು, ಆಪ್ತ ಸಮಾಲೋಚಕರಿಗೆ ವರ್ಗಾಯಿಸಲಾಗುತ್ತದೆ. ಅಗತ್ಯವಿದ್ದರೆ ರೋಗಿಗಳಿಗೆ ವೈದ್ಯರು ಕರೆಮಾಡಿ, ಮಾರ್ಗದರ್ಶನ ನೀಡಲಿದ್ದಾರೆ. ಮನೆಯಲ್ಲೇ ಪ್ರತ್ಯೇಕವಾಗಿದ್ದು, ಗುಣಮುಖರಾಗಲು ನೆರವು ಒದಗಿಸಲಾಗುವುದು. ಅಗತ್ಯ ಇರುವವರಿಗೆ ದಾನಿಗಳ ನೆರವಿನಲ್ಲಿ ಔಷಧಿ ಕಿಟ್‌ ಕೂಡ ತಲುಪಿಸಲಾಗುವುದು. ರೋಗಿಯೊಬ್ಬ ಕರೆಮಾಡಿದ ದಿನದಿಂದ ಸಂಪೂರ್ಣ ಗುಣಮುಖನಾಗುವವರೆಗೂ ಸಂಪರ್ಕದಲ್ಲಿ ಇದ್ದು, ನೆರವು ನೀಡಲಾಗುವುದು ಎಂದು ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com