8 ಮಂದಿ ನಿಪಾ ಶಂಕಿತರ ಪರೀಕ್ಷಾ ಫಲಿತಾಂಶ ನೆಗೆಟಿವ್: ನಿಟ್ಟುಸಿರು ಬಿಟ್ಟ ಕೇರಳ ಆರೋಗ್ಯ ಸಿಬ್ಬಂದಿ

ನಿಪಾ ವೈರಾಣುವಿಗೆ ತುತ್ತಾಗಿರುವ ಶಂಕೆ ಬಂದ ಹಿನ್ನೆಲೆಯಲ್ಲಿ 13 ಮಂದಿಯ ಮಾದರಿ ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಲಾಗಿತ್ತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಚ್ಚಿ: ಕೊರೊನಾದಿಂದ ತತ್ತರಿಸಿರುವ ಕೇರಳದಲ್ಲಿ ನಿಪಾ ವೈರಾಣು ಬೇರು ಬಿಡುವ ಮುನ್ಸೂಚನೆ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಇತ್ತೀಚಿಗೆ ನಿಪಾ ವೈರಾಣುವಿಗೆ ತುತ್ತಾಗಿರುವ ಶಂಕೆ ಬಂದ ಹಿನ್ನೆಲೆಯಲ್ಲಿ 13 ಮಂದಿಯ ಮಾದರಿ ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಲಾಗಿತ್ತು. 

ಅಲ್ಲಿಂದ ಪರೀಕ್ಷಾ ಫಲಿತಾಂಶ ಹೊರಬಂದಿದ್ದು 8 ಮಂದಿಯ ಫಲಿತಾಂಶದಲ್ಲಿ ನೆಗೆಟಿವ್ ವರದಿ ಬಂದಿದೆ. ಇನ್ನೂ 5 ಮಂದಿಯ ಫಲಿತಾಂಶ ಇನ್ನೂ ಬರಬೇಕಿದೆ. 

ಇತ್ತೀಚಿಗೆ ನಿಪಾದಿಂದ ಮೃತಪಟ್ತ ಬಾಲಕನ ಪೋಷಕರ ಮಾದರಿಯನ್ನೂ ಪುಣೆಗೆ ಕಳಿಸಲಾಗಿತ್ತು. ನೆಗೆಟಿವ್ ವರದಿ ಬಂದಿರುವ ರಿಪೋರ್ಟ್ ಗಳಲ್ಲಿ ಅವರದೂ ಸೇರಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಂತಸ ವ್ಯಕ್ತಪಡಿಸಿದ್ದು ಆರೋಗ್ಯ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com